--Ads--

125 ದಿನಗಳ ಉದ್ಯೋಗಾವಕಾಶದೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ಕೂಲಿಕಾರರು ಉದ್ಯೋಗ ಅವಕಾಶದಿಂದ ವಂಚಿತರಾಗಲ್ಲ: ಜಿ.ಪಂ. ಸಿಇಒ ಡಾ. ವಾಸಂತಿ ಅಮರ್

On: July 9, 2026 10:30 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

125 ದಿನಗಳ ಉದ್ಯೋಗಾವಕಾಶದೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ಕೂಲಿಕಾರರು ಉದ್ಯೋಗ ಅವಕಾಶದಿಂದ ವಂಚಿತರಾಗಲ್ಲ: ಜಿ.ಪಂ. ಸಿಇಒ ಡಾ. ವಾಸಂತಿ ಅಮರ್

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ , ಜುಲೈ 08:

ಕೇಂದ್ರ ಸರ್ಕಾರದ ಪುರಸ್ಕೃತ ಹೊಸ ಯೋಜನೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಜುಲೈ 01 ರಿಂದ ಜಾರಿಗೆ ಬಂದಿದ್ದು, ಜಿಲ್ಲೆಯಲ್ಲಿಯೂ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅರ್ಹ ಗ್ರಾಮೀಣ ಕುಟುಂಬಕ್ಕೆ ಇನ್ಮುಂದೆ 100 ದಿನಗಳ ಬದಲಾಗಿ 125 ಮಾನವ ದಿನಗಳ ಕಡ್ಡಾಯ ಉದ್ಯೋಗ ಅವಕಾಶ ಕಲ್ಪಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸ್ಯಾಚುರೇಷನ್ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್ ಅವರು ತಿಳಿಸಿದ್ದಾರೆ.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ), ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಗೆ ಈಗಾಗಲೇ ಮಾಸ್ಟರ್ ಟ್ರೇನರ್ ಗಳಿಂದ ತರಬೇತಿಯನ್ನು ನೀಡಲಾಗಿದೆ.

ಹೊಸ ಯೋಜನೆಯಡಿ ಗ್ಯಾರಂಟಿ ಕಾರ್ಡ್: ದಿನಗೂಲಿ 370 ರೂ. ನಿಂದ 382ಕ್ಕೆ ಏರಿಕೆ

ವಿಬಿ-ಜಿ ರಾಮ್-ಜಿ ಯೋಜನೆಯಡಿ ದಿನಗೂಲಿಯನ್ನು 370 ರೂ. ನಿಂದ 382 ರೂ. ಏರಿಕೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜಂಟಿಯಾಗಿ ಆದೇಶ ಹೊರಡಿಸಿದ್ದು, ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಮುಂದುವರೆಯಲಿದೆ. ಕೂಲಿ ಹಣವನ್ನು ಗರಿಷ್ಠ 15 ದಿನಗಳ ಒಳಗಾಗಿ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಜಮೆ ಮಾಡಬೇಕು. ವಿಳಂಬವಾದರೆ ದಂಡದ ರೂಪದಲ್ಲಿ ಪರಿಹಾರ ನೀಡಬೇಕಾಗುತ್ತದೆ.

ಇಲ್ಲಿವರೆಗೂ ಮನರೇಗಾ ಯೋಜನೆಯಡಿ ನೀಡಲಾಗಿದ್ದ ಉದ್ಯೋಗ ಚೀಟಿಗಳನ್ನೆ ಮಾನ್ಯ ಮಾಡಿ, ಆಸಕ್ತರಿಗೆ ಕೆಲಸ ಒದಗಿಸಲು ಅವಕಾಶ ಕಲಿಸಲಾಗಿದೆ. ಜೂನ್ 30ರ ವರೆಗೆ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕಾಮಗಾರಿಗಳಲ್ಲಿ ವಿಬಿ-ಜಿ ರಾಮ್-ಜಿ ಯೋಜನೆ ನಿಯಮಕ್ಕೆ ಒಳಪಟ್ಟ ಕಾಮಗಾರಿಗಳನ್ನು ತಡೆರಹಿತವಾಗಿ ಮುಂದುವರೆಸಲು ಅವಕಾಶವಿದ್ದು, ಯೋಜನೆ ಬದಲಾಗುತ್ತಿರುವ ಕಾರಣಕ್ಕಾಗಿ ಯಾವೊಬ್ಬ ಕೂಲಿಕಾರರು ಒಂದು ದಿನವೂ ಉದ್ಯೋಗ ಅವಕಾಶದಿಂದ ವಂಚಿತರಾಗುವ ಪ್ರಮೇಯ ಎದುರಾಗದು.

ಮಂತ್ರಾಲಯದ ಗ್ರಾಮೀಣಾಭಿವೃದ್ಧಿ ಮಾರ್ಗಸೂಚಿಯಂತೆ ನೊಂದಾಯಿತ ಎಲ್ಲ ಕೂಲಿಕಾರರ ಇ-ಕೆವೈಸಿ ಮಾಡಿಸುವಲ್ಲಿ ಜಿಲ್ಲೆಯು ಶೇ.99.89 ರಷ್ಟು ಸಕ್ರಿಯ ಕೂಲಿಕಾರರ ಇ-ಕೆವೈಸಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದೇ ರೀತಿ ಶೇ.86.54 ರಷ್ಟು ನೋಂದಾಯಿತ ಎಲ್ಲ ಕೂಲಿಕಾರರ ಇ-ಕೆವೈಸಿಯನ್ನು ಕೂಡ ಕೈಗೊಳ್ಳಲಾಗಿದೆ. ವಲಸೆ ಹಾಗೂ ತಾಂತ್ರಿಕ ಕಾರಣದಿಂದ ಕೆಲವು ಕೂಲಿಕಾರರ ಇ-ಕೆವೈಸಿ ಬಾಕಿ ಇದ್ದು, ಅದಕ್ಕೂ ಕ್ರಮವಹಿಸಲಾಗುತ್ತಿದೆ. ಇದರಿಂದ ಕೂಲಿಕಾರರ ಇ-ಕೆವೈಸಿ ಕಡ್ಡಾಯವಾಗಿರುವುದರಿಂದ ಬಾಕಿ ಉಳಿದಿರುವ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹೊಸ ಯೋಜನೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಯೋಜನೆಯಲ್ಲಿ ಮುಖ್ಯವಾಗಿ 04 ವಿಷಯಾಧಾರಿತ ಕಾರ್ಯವರ್ಗಗಳ ಅಡಿಯಲ್ಲಿ ಅನುಷ್ಠಾನಗೊಳ್ಳುವುದು.

1. ಜಲ ಭದ್ರತಾ ಕಾರ್ಯಗಳು (Water Security Works)
2. ಮೂಲ ಗ್ರಾಮೀಣ ಮೂಲಸೌಕರ್ಯ (Core Rural Infrastructure)
3. ಜೀವನೋಪಾಯ ಸಂಬಂಧಿತ ಮೂಲಸೌಕರ್ಯ (Livelihood-related Infrastructure)
4. ತೀವ್ರ ಹವಾಮಾನ ಮತ್ತು ವಿಪತ್ತು ಶಮನ ಕಾರ್ಯಗಳು

ಯುಕ್ತಧಾರ ಕ್ರಿಯಾಯೋಜನೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅಭಿವೃದ್ಧಿಪಡಿಸಿರುವ ಜಿಯೋಸ್ಪೇಷಿಯಲ್ (ಭೂ-ಪ್ರಾದೇಶಿಕ) ಪ್ಲಾನಿಂಗ್ ಪೋರ್ಟಲ್ ಆಗಿದೆ. ಇದು ಉಪಗ್ರಹ ಚಿತ್ರಗಳು ಮತ್ತು ಜಿಐಎಸ್ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಯನ್ನು ತಯಾರಿಸಲು ಸಹಾಯ ಮಾಡುತ್ತದೆ.
ವಿಜಿಪಿಪಿ ಚಟುವಟಿಕೆಗಳ ಗ್ರಾಮ ಪಂಚಾಯತ್ ಮಟ್ಟದ ಯೋಜನೆಯನ್ನು ಸುಗಮಗೊಳಿಸಲು ಉದ್ದೇಶಿಸಲಾದ ಜಿಯೋಸ್ಪೇಷಿಯಲ್ ಯೋಜನಾ ಪೋರ್ಟಲ್ ಆಗಿದೆ. ಮುಕ್ತ ಮೂಲ ಜಿಐಎಸ್ ಪರಿಕರಗಳನ್ನು ಬಳಸಿಕೊಂಡು ಯೋಜನೆಗೆ ಸಮಗ್ರ ವಿಧಾನವನ್ನು ಸಕ್ರಿಯಗೊಳಿಸಲು ಪೋರ್ಟಲ್ ವ್ಯಾಪಕ ಶ್ರೇಣಿಯ ಪ್ರಾದೇಶಿಕ ಮಾಹಿತಿ ವಿಷಯಗಳನ್ನು ಸಂಯೋಜಿಸುತ್ತದೆ.

ವಿಜಿಪಿಪಿ ಅಡಿಯಲ್ಲಿ ರಚಿಸಲಾದ ಜಿಯೋ-ಟ್ಯಾಗಿಂಗ್ ಸ್ವತ್ತುಗಳ ಪ್ಯಾನ್ ಇಂಡಿಯನ್ ಉಪಕ್ರಮದ ನಂತರ, ಮುಂಬರುವ ಚಟುವಟಿಕೆಗಳು ಮತ್ತು ಅವುಗಳ ಸ್ಥಳಗಳನ್ನು ಗುರುತಿಸಲು ಜಿಐಎಸ್ ನ ಬಲವನ್ನು ಬಳಸಿಕೊಳ್ಳುವುದು ನೈಸರ್ಗಿಕ ಪರಿಣಾಮವಾಗಿದೆ.

ಹೊಸ ಕಾಯಿದೆಯಡಿ ನಿಯಮಾನುಸಾರ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ತರಲು ಸೂಚನೆ ನೀಡಲಾಗಿದ್ದು, ಗ್ರಾಮೀಣ ಭಾಗದ ಎಲ್ಲ ಕೂಲಿಕಾರರು ಕೆಲಸ ಅರಸಿ ದೂರದ ಪಟ್ಟಣಗಳಿಗೆ ವಲಸೆ ಹೋಗದೆ ಸ್ವಂತ ಊರಿನಲ್ಲಿಯೇ ಹೊಸ ಯೋಜನೆಯಡಿ ಕೂಲಿಕೆಲಸ ಮತ್ತು ಜೀವನೋಪಾಯ ಸೌಲಭ್ಯ ಪಡೆದುಕೊಳ್ಳಲು ನೆರವಾಗಲಿದೆ.

WhatsApp

Join Now

Telegram

Join Now

Instagram

Join Now