--Ads--

ಗಡಿನಾಡಿನ ಕಡೆ ಕಸಾಪ ನಡೆ, ನಾಡು ನುಡಿ ಸಾಹಿತ್ಯ ಬಗ್ಗೆ ಅರಿವು

On: July 10, 2026 5:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಗಡಿನಾಡಿನ ಕಡೆ ಕಸಾಪ ನಡೆ, ನಾಡು ನುಡಿ ಸಾಹಿತ್ಯ ಬಗ್ಗೆ ಅರಿವು

ಶಿಡ್ಲಘಟ್ಟ : ತಾಲ್ಲೂಕಿನ ಗಡಿ ಭಾಗಗಳಲ್ಲಿ ತೆಲುಗು ಭಾಷೆಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಶಾಲಾ ಮಕ್ಕಳಲ್ಲಿ ಕನ್ನಡದ
ಬಗ್ಗೆ ಅಭಿಮಾನ ಹಾಗೂ ನಾಡು,ನುಡಿ ,ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಪರಿಷತ್ತಿನ ಪ್ರಮುಖ ಉದ್ದೇಶವಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಸಾದಲಿಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ
“ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಗಡಿ ನಾಡ ಶಾಲೆಗಳ ಕಡೆ'” ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಸಾಪ ಮಾಜಿ ಅಧ್ಯಕ್ಷ ವಿ.ಕೃಷ್ಣಾ ಮಾತನಾಡಿ, ಕನ್ನಡದ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಗಡಿ ಭಾಗಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದರು.

ಈ ವೇಳೆ ಡಿ.ಎ.ಸತ್ಯನಾರಾಯಣರಾವ್ ಅವರು ಜಿ.ಪಿ.ರಾಜರತ್ನಂ ಅವರ ಕನ್ನಡ ಗೀತೆಗಳನ್ನು ಹಾಡಿದರು, ಶಾಲೆಯ ಏಳು ವಿದ್ಯಾರ್ಥಿಗಳಿಗೆ ಉತ್ತಮ ಕನ್ನಡ ಲಿಪಿಗಾಗಿ ಪ್ರಶಂಸನಾ ಪತ್ರ ನೀಡಿ ಸತ್ಕರಿಸಲಾಯಿತು.
ಸಾದಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾಗಿ ಎಚ್‌.ಎನ್.ಶಿವಣ್ಣ ಅವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಕಸಾಪ ಜಂಟಿ ಕಾರ್ಯದರ್ಶಿ ಮುನಿನಾರಾಯಪ್ಪ, ನಿವೃತ್ತ ಶಿಕ್ಷಕರ ಶಾಲೆಯ ಎನ್.ಸುಂದರನ್, ಮುಖ್ಯ ಶಿಕ್ಷಕ ಎಚ್.ಎಸ್.ರಾಜೇಶ್, ಎಂ. ಲೀಲಾ,ಶ್ರೀನಿವಾಸ್ ಆನಂದಮೂರ್ತಿ,ಹರ್ಷಿತಾ, ಸುಶೀಲಮ್ಮ,ಅನುಪಮ, ಜ್ಯೋತಿ, ಅನುಪಮ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now