--Ads--

ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮ ದಿನಾಚರಣೆಯ ಸಂಭ್ರಮಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತ ಕಳೆದ ಒಂದು ದಶಕದ ಸವಿ ನೆನಪುಗಳನ್ನು ಮೆಲಕು ಹಾಕಿದ ಕತಾರ್ ಕನ್ನಡ ಸಂಘ 

On: July 11, 2026 12:22 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕತಾರ್ಗೆ ಬೇಟೆ ನೀಡಿ ಒಂದು ದಶಕ

ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮ ದಿನಾಚರಣೆಯ ಸಂಭ್ರಮಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತ ಕಳೆದ ಒಂದು ದಶಕದ ಸವಿ ನೆನಪುಗಳನ್ನು ಮೆಲಕು ಹಾಕಿದ ಕತಾರ್ ಕನ್ನಡ ಸಂಘ 

 

ದೋಹಾ ಕತಾರ್: ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅವರು ಕಾತರಿಗೆ ಭೇಟಿ ನೀಡಿ ಒಂದು ದಶಕವಾಗಿದೆ. ಕರ್ನಾಟಕ ಸಂಘ ಕತಾರಿನ ವಾರ್ಷಿಕ ವಿಶೇಷ “ಕರ್ನಾಟಕ ರಾಜ್ಯೋತ್ಸವ” ಕಾರ್ಯಕ್ರಮಕ್ಕೆ ಮೊಟ್ಟ ಮೊದಲ ಬಾರಿಗೆ ತಮ್ಮ ಪಾದಾರ್ಪಣೆಯಿಂದ ಕತಾರಿನ ಕನ್ನಡ ಅಭಿಮಾನಿಗಳಿಗೆ ಹರುಷ ನೀಡಿದರು.

ನಂತರ ಲೀಡರ್ ಚಲನಚಿತ್ರೀಕರಣಕ್ಕೆ ಆಗಮಿಸಿ ದೋಹಾದಲ್ಲಿ ಮತ್ತೊಮ್ಮೆ ಕನ್ನಡದ ಹಿರಿಮೆಯನ್ನು ಮೆರೆದಿದ್ದರು.

ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಜನ್ಮದಿನಕ್ಕೆ ಕಾತರಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ವಿಶೇಷ ಉಡುಗೊರೆಯಂತೆ ತಮ್ಮ ಉಪಸ್ಥಿತಿಯಲ್ಲಿ ಸುಬ್ರಮಣ್ಯ ಅವರಿಗೆ ಮಹದಾನಂದವನ್ನು ಹಂಚಿದರು. ಈ ಮೂಲಕ ತಮ್ಮ ಪ್ರೀತಿ, ವಿಶ್ವಾಸ. ಹಾಗೂ ಸರಳತೆಯನ್ನು ಶಿವಣ್ಣನವರು ಪ್ರತಿಬಿಂಬಿಸಿದರು.

ಅದೇ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಇಂದು ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾಗಿ ಕನ್ನಡಿಗರ ಕಣ್ಮಣಿಯಾಗಿರುವ ‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮ ದಿನಾಚರಣೆಯ ಸಂಭ್ರಮಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತ ಕಳೆದ ಒಂದು ದಶಕದ ಸವಿ ನೆನಪುಗಳನ್ನು ಮೆಲಕು ಹಾಕಿದರು.

ನಂತರದ ಕೆಲವು ವರ್ಷಗಳಲ್ಲಿ ಶಿವಣ್ಣನವರು ಹಲವು ಕಾರಣಗಳಿಂದ ತಮ್ಮ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಿಲ್ಲ. ಮಾತೃ ವಿಯೋಗ, ಪ್ರೀತಿಯ ತಮ್ಮನಾದ ಶ್ರೀ. ಪುನೀತ್ ಅವರ ಅಕಾಲಿಕ ಅಗಲಿಕೆ, ತಮ್ಮ ಅನಾರೋಗ್ಯದ ಕಾರಣಗಳಿಂದಾಗಿ ಜನ್ಮದಿನಾಚರಣೆಯು ಅಷ್ಟು ಸಂತಸ ನೀಡುವಂತಿರಲಿಲ್ಲ.

ಈ ಸಂವತ್ಸರ ಕಾರ್ಮೋಡಗಳೆಲ್ಲ ಕಳೆದು ಮತ್ತೆ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು, ಎಂದಿನಂತೆ ಕನ್ನಡಿಗರಿಗೆ ಆನಂದ ಮಳೆಗರೆಯಲು ಶಿವಣ್ಣನವರು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ಎಲ್ಲರಿಗೆ ಆನಂದದ ಸಮಾಚಾರ.

ಸಮಸ್ತ ಪ್ರಪಂಚದಲ್ಲಿರುವ ಕನ್ನಡಿಗರ ಹಾರೈಕೆ, ಹಾಗೂ ಆ ಭಗವಂತನ, ಗುರು ಹಿರಿಯರ ಆಶೀರ್ವಾದ ಸದಾ ಶಿವಣ್ಣನವರ ಹಾಗು ಅವರ ಸಮಸ್ತ ಕುಟುಂಬದ ಸದಸ್ಯರ ಮೇಲೆ ಹೂಮಳೆಗರೆಯಲಿ, ಅವರ ಮನ ಮನೆಗಳಲ್ಲಿ ಅವಿರತ ಹರ್ಷೋದ್ಗಾರ ನಿಲೆಸಿರಲಿ ಎಂದು ಹಾರೈಸುವ ಶ್ರೀ ಸುಬ್ರಮಣ್ಯ, ಹೆಬ್ಬಾಗಿಲು, ಅಧ್ಯಕ್ಷರು ಕರ್ನಾಟಕ ಸಂಘ ಕತಾರ್.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ದೋಹಾದಲ್ಲಿ ಅದ್ಧೂರಿಯಾಗಿ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ; ಕರ್ನಾಟಕ ಸಂಘ ಕತಾರ್‌ನ ದಾಖಲೆ ಸಂಖ್ಯೆಯ ಭಾಗಿತ್ವಕ್ಕೆ ರಾಯಭಾರಿಗಳಿಂದ ಶ್ಲಾಘನೆ

ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು

ದೋಹಾದಲ್ಲಿ ‘ಸಂಭ್ರಮ 2026’ ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ರಾಜೇಶ್ ಕೃಷ್ಣನ್

ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸಂಘದಿಂದ ಭವ್ಯ ಗಿಡ ನೆಡುವ ಅಭಿಯಾನ

ಕನ್ನಡ ಕಲಿಕೆ ಹಾಗೂ ಕತಾರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಕರ್ನಾಟಕ ಸಂಘದ ನೂತನ ಸಮಿತಿಗೆ ರಾಯಭಾರಿ ಮಾನ್ಯ ಶ್ರೀ ವಿಪುಲ್ ಕರೆ

ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ಭವ್ಯ ರಕ್ತದಾನ ಶಿಬಿರ