--Ads--

ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು

On: June 26, 2026 3:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು

ಜೂನ್ ೨೬, ೨೦೨೬

ಮಾರಿಷಸ್: ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಭಾಗವಹಿಸಲು ಮಾರಿಷಸ್ ಗೆ ಅಗಮಿಸಿರುವ ಶ್ರೀ ಪುತ್ತಿಗೆ ಶ್ರೀಗಳನ್ನು ಮಾರಿಷಸ್ ದೇಶದ ರಾಷ್ಟ್ರಪತಿಗಳಾದ ಶ್ರೀ ಧರಮ್ ಬೀರ್ ಗೋಕುಲ್ ಅವರು ರಾಷ್ಟ್ರಪತಿ ಭವನಕ್ಕೆ ಸ್ವಾಗತಿಸಿ ಸುಮಾರು ನಲವತ್ತು ನಿಮಿಷಗಳ ಕಾಲ ಪ್ರಸ್ತುತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ಪೂಜ್ಯ ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಭಾಗಿತ್ವದಿಂದ ಪ್ರಭಾವಿತರಾದ ರಾಷ್ಟ್ರಪತಿಯವರು ಉಡುಪಿ ಶ್ರೀಕೃಷ್ಣನ ಸ್ಥಾಪನೆಯ ಹಿನ್ನೆಲೆಯ ಮಧ್ವ ಸಿದ್ಧಾಂತದ ತಿರುಳನ್ನು ಶ್ರಿಗಳಿಂದ ತಿಳಿದುಕೊಂಡರು. ವಿಶ್ವದಾದ್ಯಂತ ಅಂತರ್ಮತೀಯ ಶಾಂತಿ ಸೌಹಾರ್ದತೆಗಾಗಿ ವಿಶ್ವ ಧಾರ್ಮಿಕ ನಾಯಕರ ಜೊತೆ ಶ್ರೀ ಪುತ್ತಿಗೆ ಶ್ರೀಗಳು ಕೈಜೋಡಿಸಿರುವುದನ್ನು ಶ್ಲಾಘಿಸಿದ ಮಾರಿಷಸ್ ರಾಷ್ಟ್ರಾಧ್ಯಕ್ಷರು ಮಾರಿಷಸ್ ನ ಪ್ರಜೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು. ಶ್ರೀಗಳಿಂದ ಅನುಗ್ರಹ ಪಡೆದ ಅವರು ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗಿಯಾಗಲು ಭಗವದ್ಗೀತೆಯ ಪುಸ್ತಕವನ್ನು ಸ್ವೀಕರಿಸಿದರು. ಭಾರತಕ್ಕೆ ಬಂದಾಗ ಉಡುಪಿಗೆ ಭೇಟಿ ನೀಡುವಂತೆ ಪೂಜ್ಯ ಶ್ರೀಗಳು ಅವರನ್ನು ಆಹ್ವಾನಿಸಿದರು

ವರದಿ: ಡಾ ಎ ಕೇಶವರಾಜ್

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ದೋಹಾದಲ್ಲಿ ಅದ್ಧೂರಿಯಾಗಿ ಜರುಗಿದ ಅಂತರರಾಷ್ಟ್ರೀಯ ಯೋಗ ದಿನಾಚರಣೆ; ಕರ್ನಾಟಕ ಸಂಘ ಕತಾರ್‌ನ ದಾಖಲೆ ಸಂಖ್ಯೆಯ ಭಾಗಿತ್ವಕ್ಕೆ ರಾಯಭಾರಿಗಳಿಂದ ಶ್ಲಾಘನೆ

ದೋಹಾದಲ್ಲಿ ‘ಸಂಭ್ರಮ 2026’ ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ರಾಜೇಶ್ ಕೃಷ್ಣನ್

ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಸಂಘದಿಂದ ಭವ್ಯ ಗಿಡ ನೆಡುವ ಅಭಿಯಾನ

ಕನ್ನಡ ಕಲಿಕೆ ಹಾಗೂ ಕತಾರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಕರ್ನಾಟಕ ಸಂಘದ ನೂತನ ಸಮಿತಿಗೆ ರಾಯಭಾರಿ ಮಾನ್ಯ ಶ್ರೀ ವಿಪುಲ್ ಕರೆ

ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ಭವ್ಯ ರಕ್ತದಾನ ಶಿಬಿರ

ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ರಕ್ತದಾನ ಶಿಬಿರ