ವಿಜಯ ದರ್ಪಣ ನ್ಯೂಸ್….
ಇಂದಿನ ಯುವ ಪೀಳಿಗೆಯು ಹಿಂದುತ್ವವನ್ನು ಉಳಿಸಬೇಕು: ಡಾ.ಮೋಹನ್ ಬಾಬು

ವಿಜಯಪುರ ಪಟ್ಟಣದ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ 137ನೇ ಕನ್ನಡ ದೀಪ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ. ಮೋಹನ್ ಬಾಬು ಮಾತನಾಡುತ್ತಾ ನಾವು ಹಿಂದೂ ಧರ್ಮವನ್ನು ಉಳಿಸಬೇಕು ಬೆಳೆಸಬೇಕು. ಧರ್ಮ ಉಳಿದರೆ ನಮ್ಮ ದೇಶ ಉಳಿಯುತ್ತದೆ. ಆದ್ದರಿಂದ ರಾಮಾಯಣ ಮಹಾಭಾರತ ಮಹಾ ಕಾವ್ಯಗಳನ್ನು ಓದಿ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸ ಕೊಳ್ಳಬೇಕೆಂದು ನೀಡುತ್ತಾ ಇಂದಿನ ಯುವ ಪೀಳಿಗೆಗಳು ಹಿಂದುತ್ವವನ್ನು ಉಳಿಸಬೇಕೆಂದು ಕರೆ ನೀಡಿದರು.
ಕಲಾವಿದರ ಸಂಘವುಪ್ರತಿ ಮಾಸದಲ್ಲಿ ಒಂದೊಂದು ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಬೇಕು. ಆ ತರಹದಲ್ಲಿ ನಿಯೋಜಿಸಿದರೆ ನಮ್ಮ ಸಂಘವು ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂದು ಕನ್ನಡ ಕಲಾವಿದರ ಸಂಘ ನಿಂತ ನೀರಾಗಬಾರದು ಸದಾ ಹರಿಯುತ್ತಿರಬೇಕು ಎಂದು ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಜೆಆರ್ ಮುನಿವೀರಣ್ಣ ಪ್ರಾಸ್ತಾವಿಕವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡುತ್ತಾ ಕನ್ನಡ ಕಲಾವಿದರ ಸಂಘದ ಅಕಾಡೆಮಿ ಆದೇಶ ಮೇರೆಗೆ ಕಲಾವಿದರು ನಿರ್ಮಾಪಕರು ಸಹ ಕಲಾವಿದರು ನಾಟಕ ರಂಗದ ಸಹಾಯಕರು ಅವರ ಕಿರು ಪರಿಚಯ ಮಾಡಿ ಮಾಹಿತಿ ನೀಡಲು ತಿಳಿಸಿರುತ್ತಾರೆ. ಆದ್ದರಿಂದ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಶ್ರೀ ದೇವರಾಜ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಕೀರ್ತಿ ಶೇಷ ರಾಜಗೋಪಾಲ್ ರವರು 2014ರಲ್ಲಿ ಕನ್ನಡ ದೀಪ ಎಂದು ನಾಮಕರಣ ಮಾಡಿ , ಅಂದಿನಿಂದ ಇಂದಿನವರೆಗೂ ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಇಲ್ಲಿ ಕಲಾವಿದರು ರಂಗಭೂಮಿಯ ರಂಗಗೀತೆಗಳನ್ನು ಹಾಡಿ ತಮ್ಮಕಲೆಯನ್ನು ಪ್ರದರ್ಶಿಸುತ್ತಾರೆ. ಆದ್ದರಿಂದ ಕನ್ನಡ ಭಾಷೆ ಕಲೆ ಸಂಸ್ಕೃತಿಯನ್ನು ಉಳಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕರಾದ ಎಂವಿ ನಾಯ್ಡು ಮತ್ತು ತಬಲವಾದಕರಾದ ನಾಗರಾಜ್ ರವರ ನೇತೃತ್ವದಲ್ಲಿ ಕನ್ನಡ ಗೀತೆಗಳು ರಂಗ ಗೀತೆಗಳನ್ನು ಕಲಾವಿದರದ ಕೆ ಎಚ್ ಚಂದ್ರಶೇಖರ್ ಮತ್ತು ಎ ಎಂ ನಾರಾಯಣಸ್ವಾಮಿ ಚನ್ನಕೃಷ್ಟ ಹಾಡಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗುರುಸ್ವಾಮಿ ಗೌರವ ಕಾರ್ಯದರ್ಶಿಗಳಾದ ಸುಬ್ರಮಣಿ ಗೋವಿಂದರಾಜು ಮಂಜುನಾಥ ಹರಳೂರು ನಾಗೇನಹಳ್ಳಿ ನಾರಾಯಣಸ್ವಾಮಿ ಮುತ್ತು ಕಲಾವಿದರು ಪದಾಧಿಕಾರಿಗಳು ಉಪಸ್ಥಿತರಿದ್ದರು.










