ವಿಜಯ ದರ್ಪಣ ನ್ಯೂಸ್….
ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಬಾಡಿ ಸುಂದರ ಸಾ ದತ್ತಿ ಕಾರ್ಯಕ್ರಮ

ವಿಜಯಪುರ ದೇವನಹಳ್ಳಿ ತಾಲ್ಲೂಕು: ಕಬಾಡಿ ಸುಂದರ ಸಾ ದತ್ತಿಯ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳನ್ನು ಜ್ಞಾನ ಗಂಗಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ದತ್ತಿ ನೀಡಿದವರು ಶಿಕ್ಷಣ ಪರಿಸರ ನೀರಾವರಿ ಬಗ್ಗೆ ಮಂಡಿಸಬೇಕೆಂದು ಅವರ ಅಪೇಕ್ಷೆಯಾಗಿತ್ತು ಎಂದು ಶರಣಯ್ಯ ಹಿರೇಮಠ್ ಪ್ರಾಸ್ತಾವಿಕವಾಗಿ ತಿಳಿಸಿದರು.
ವಿಜಯಪುರ ಪಟ್ಟಣದ ಸಮೀಪದಲ್ಲಿರುವ ಜ್ಞಾನ ಗಂಗಾ ಲಾ ಕಾಲೇಜಿನಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಬಾಡಿ ಸುಂದರ ಸಾ ದತ್ತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿಎನ್ ಕೃಷ್ಣಪ್ಪ ನೆರವೇರಿಸಿ ಮಾತನಾಡುತ್ತಾ ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಿ 10 ದತ್ತಿಗಳಿರುತ್ತದೆ. ಎಂದು ತಿಳಿಸುತ್ತಾ ಕನ್ನಡ ವ್ಯಾಕರಣ ವರ್ಗಗಳ ಸಂಕ್ಷಿಪ್ತಾವಾಗಿ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಬಿಲ್ಲಾಶರನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ಶಿಕ್ಷಣ ಬಗ್ಗೆ ಮಾತನಾಡುತ್ತಾ ಸಾಮಾನ್ಯ ಅರ್ಥದಲ್ಲಿ ಶಿಕ್ಷಣ, ಎಂದರೆ ಜ್ಞಾನ, ಕೌಶಲ್ಯ ಮತ್ತು ಜನರು ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆಯ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ವ್ಯವಸ್ಥೆ. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ ಆಗಾಗ್ಗೆ ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಯಾವುದೇ ಒಂದು ಅನುಭವ, ಭಾವನೆ ಅಥವಾ ಕೃತ್ಯಗಳನ್ನು ಶೈಕ್ಷಣಿಕವೆಂದು ಪರಿಗಣಿಸಬಹುದು. ಶಿಕ್ಷಣವು ಸಾಮಾನ್ಯವಾಗಿ ಪ್ರಿಸ್ಕೂಲ್, ಪ್ರಾಥಮಿಕ ಶಾಲೆ, ಸೆಕೆಂಡರಿ ಶಾಲೆ ಮತ್ತು ನಂತರ ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಷ್ಯವೃ ಶಿಕ್ಷಣದಿಂದ ನಮ್ಮಲ್ಲಿ ಕೌಶಲ್ಯ ಶಿಕ್ಷಣ ಸಾಮರ್ಥ್ಯ ಹೆಚ್ಚುತ್ತದೆ.
ಪರಿಸರವು ಅದರೊಳಗೆ ವಾಸಿಸುವವರ ಬದುಕುಳಿಯುವಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಒಂದು ಪ್ರಾಣಿಗೆ ಪರಿಸರವು ತುಂಬಾ ಬಿಸಿಯಾಗಿದ್ದರೆ ಅಥವಾ ತಂಪಾಗಿದ್ದರೆ ಪರಿಸರ ಚೆನ್ನಾಗಿರುತ್ತದೆ
ನೀರಾವರಿ ಎಂದರೆ ಬೆಳೆಗಳಿಗೆ ಕೃತಕವಾಗಿ ನೀರನ್ನು ಅನ್ವಯಿಸುವ ಪ್ರಕ್ರಿಯೆಯಾಗಿದ್ದು, ಅವುಗಳ ನೀರಿನ ಅವಶ್ಯಕತೆಗಳನ್ನು ಪೂರೈಸಲು ನೀರಾವರಿ ಮೂಲಕ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸಬಹುದು. ನೀರಾವರಿಗಾಗಿ ನೀರಿನ ವಿವಿಧ ಮೂಲಗಳು ಬಾವಿಗಳು, ಕೊಳಗಳು, ಸರೋವರಗಳು, ಕಾಲುವೆಗಳು, ಕೊಳವೆ ಬಾವಿಗಳು ಮತ್ತು ಅಣೆಕಟ್ಟುಗಳು. ನೀರಾವರಿ ಬೆಳವಣಿಗೆ ಮತ್ತು ಅಭಿವೃದ್ಧಿ, ಮೊಳಕೆಯೊಡೆಯುವಿಕೆ ಮತ್ತು ಇತರ ಸಂಬಂಧಿತ ಕಾರ್ಯಗಳಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ.
ಇರಾನ್ ಇರಾಕ್ ಪ್ರದೇಶದಲ್ಲಿ ದೇಶಕ್ಕಾಗಿ
ಯುದ್ಧ ನಡೆದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಭಾರತಿ ಮಾತನಾಡುತ್ತಾ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಹಾಗೂ ಭಾಷಾವಾರು ಪ್ರಾಂತ್ಯಗಳಿಗಾಗಿ ನಡೆದ ಹೋರಾಟ ಬಹಳ ಮುಖ್ಯವಾದದ್ದು. 1915ರಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕದ ವಿಘಟನೆಯನ್ನು ವಿರೋಧಿಸಿತ್ತು. ಕನ್ನಡ ಭಾಷೆಗೆ ಮಹತ್ವವನ್ನು ನೀಡುವುದು ಪರಿಷತ್ನ ಆದ್ಯತೆಯಾಗಿತ್ತು. ಜತೆಗೆ ಅದು ಕನ್ನಡ ರಾಜ್ಯದ ರಚನೆಯ ಪರಿಕಲ್ಪನೆಯನ್ನು ಹೊಂದಿತ್ತು ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಾಜ್ ಮಾತನಾಡುತ್ತಾ ಕನ್ನಡವನ್ನು ಉಳಿಸಿ ಬೆಳೆಸಿ ಹಿರಿಮೆಯನ್ನು ಕಾಪಾಡಬೇಕು ಎಂದು ತಿಳಿಸುತ್ತಾ 18 ವರ್ಷ ತುಂಬಿದ ಮಕ್ಕಳು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆಯಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಭಾರತಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮತ್ತು ಸಿ ಪಿ ಎಸ್ ರೆಡ್ಡಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಮುನಿರಾಜು(ಅಪ್ಪಯ್ಯಣ್ಣ) ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ತಾಲ್ಲೂಕು ಕೋಶಾಧ್ಯಕ್ಷ ಜೆ.ಎನ್ ರಾಮಾಂಜೀನಪ್ಪ ಕೋರಮಂಗಲದ ಕೆ.ಎನ್
ಜನಾರ್ಧನ್ ಮತ್ತು ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದರು.
&&&&&&&&&&&&&&&&&&&&&&&&&&&&&&
ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಕರಗದ ದೇವತೆ ಆದಿಶಕ್ತಿ ಪರಶಕ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಏರ್ಪಡಿಸಲಾಗಿತ್ತು.
ಈ ಪೂಜಾ ಕಾರ್ಯಕ್ರಮದಲ್ಲಿ ಗೌಡರಾದ ಮಂಜುನಾಥ, ಗಣಾಚಾರಿಗಳಾದ ಮುನಿರಾಜು ಕರಗದ ಪೂಜಾರಿಗಳಾದ ಪುರಸಭಾ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಎಂ.ಕೇಶವಪ್ಪ ಪುರಸಭಾ ಮಾಜಿ ಉಪಾಧ್ಯಕ್ಷರಾದ ಕರಗದ ಶ್ರೀನಿವಾಸ್ ಜೆ ಎಸ್ ರಾಮಚಂದ್ರಪ್ಪ ಕರಗದ ಪೂಜಾರಿ ದೇವರಾಜು , ಎಂ ಡಿ ಮಂಜುನಾಥ್, ಲಕ್ಷ್ಮೀನಾರಾಯಣಪ್ಪ ,ಡಿಎಂ ಮುನಿಯಪ್ಪ , ದೇವಾಲಯ ಪೂಜಾರಿ ನಾರಾಯಣಸ್ವಾಮಿ ಹಾಗೂ ಕುಲಸ್ಥರು ವೀರ ಕುಮಾರ ಮಕ್ಕಳು ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.









