--Ads--

ಆಡಂಬರದಿಂದ ಆದ ಮದುವೆ ಮತ್ತು ಅವರ ಜೀವನ ಶಾಶ್ವತವಾಗುತ್ತಿಲ್ಲ :ಸಾಹಿತಿ ಡಾ.ಬೈರಮಂಗಲ ರಾಮೇಗೌಡ ವಿಷಾದ

On: August 24, 2026 4:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುವೆಂಪು ಮಂತ್ರ ಮಾಂಗಲ್ಯ

ಆಡಂಬರದಿಂದ ಆದ ಮದುವೆ ಮತ್ತು ಅವರ ಜೀವನ ಶಾಶ್ವತವಾಗುತ್ತಿಲ್ಲ :ಸಾಹಿತಿ ಡಾ.ಬೈರಮಂಗಲ ರಾಮೇಗೌಡ ವಿಷಾದ

ಬೆಂಗಳೂರು : ಇಂದು ಸಮಾಜದಲ್ಲಿ ನಡೆಯುತ್ತಿರುವ ಆಡಂಬರದ ಮದುವೆ ಮತ್ತು ಅವರ ಜೀವನ ಶಾಶ್ವತವಾಗಿ ಉಳಿಯುತ್ತಿಲ್ಲ
ಎಂದು ಹಿರಿಯ ಸಾಹಿತಿಗಳು, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡರು ಅಭಿಪ್ರಾಯಪಟ್ಟರು.
ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲುಕುಡಿ ಮುಕ್ಕಣ್ಣೇಶ್ವರ ವಿವಾಹ ಮಂಟಪದಲ್ಲಿ ಏರ್ಪಡಿಸಿದ್ದ ಕುವೆಂಪು ಮಂತ್ರ ಮಾಂಗಲ್ಯ ಸಾಹಿತ್ಯ ಪ್ರಚಾರ ಹಾಗೂ ಕವಯಿತ್ರಿ ಕೆ.ಟಿ.ಲತ ಅವರ “ನಿನ್ನೇಕೆ ಆಯ್ದುಕೊಂಡೆ” ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ವಧುವರರಿಗೆ ಮಂತ್ರ ಮಾಂಗಲ್ಯ ಬೋಧಿಸಿದ ಮಾತನಾಡಿದರು.
ಇಂದು ತಮ್ಮ ವೈಯಕ್ತಿಕ ಅಭಿಲಾಷೆಗಳನ್ನು, ಶ್ರೀಮಂತಿಕೆಯನ್ನು, ಹಣ ಅಂತಸ್ತು ತೋರಿಸಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡುವ ಮದುವೆಗಳು ಶಾಶ್ವತವಾಗಿ ಉಳಿಯುತ್ತಿಲ್ಲ, ಕುವೆಂಪು ಮಂತ್ರ ಮಾಂಗಲ್ಯ ವಿವಾಹಗಳು ಹೆಚ್ಚು ಹೆಚ್ಚು ಆಗಬೇಕಿದೆ, ಯುವಜನರಿಗೆ, ಪೋಷಕರಿಗೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ ಎಂದರು.
ವರದಕ್ಷಿಣೆ, ಮೌಡ್ಯ, ಆಡಂಬರ ಇವು ದೂರ ಮಾಡಬೇಕಿದೆ ಎಂದರು. ಲತಾ ಅವರ *ನಿನ್ನೇಕೆ ಆಯ್ದುಕೊಂಡೆ* ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ವೈಚಾರಿಕ ಚಿಂತಕಿ , ಲೇಖಕಿ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನ ಇಂದಿರಾ ಕೃಷ್ಣಪ್ಪ ಅವರು ಮಾನವ ಸಂಪನ್ಮೂಲ ಸದ್ಭಳಕೆ ಮಾಡಿಕೊಂಡು , ಜನರಲ್ಲಿ ಅರಿವು, ವಿಶ್ವಾಸ, ನಂಬಿಕೆ ಹುಟ್ಟಿಸುವ ಇಂತಹ ಸರಳ ವಿವಾಹಗಳು ಅತ್ಯವಶ್ಯಕ, ಗ್ರಾಮೀಣ ಪ್ರದೇಶದ ಜನರು ಸಂಬಂಧ, ಸಂಸ್ಕೃತಿ, ಸಂಸ್ಕಾರಯುತವಾಗಿ ನಡೆಯುತ್ತಿದ್ದ ಮದುವೆಗಳು ನೂರಾರು ವರ್ಷಗಳ ಕಾಲ ತುಂಬು ಸಂಸಾರ ನಡೆಸುವಂತಹದ್ದು ಮತ್ತೆ ಮರುಕಳುಹಿಸಬೇಕಿದೆ. ವಿದ್ಯಾವಂತರಾದ ಶಿಕ್ಷಕಿ , ನಿರೂಪಕಿ, ಕೆ.ಟಿ.ಲತ‌ ಹಾಗೂ ಬಿಎಂಟಿಸಿ ನಿರ್ವಾಹಕ ಸಿ.ಹೆಚ್.ಭರತ್ ಕುಮಾರ್ ಇಬ್ಬರೂ ದೊಡ್ಡ ಮನಸ್ಸು ಮಾಡಿ ಯಾವ ಆಡಂಬರವೂ ಇಲ್ಲದೆ ತಂದೆ ತಾಯಿ ಪೋಷಕರನ್ನು ಒಪ್ಪಿಸಿ ಮದುವೆಯಾಗುತ್ತಿರುವುದು ಬಹಳ ಸಂತೋಷ ಎಂದರು.
ಲತಾ ಅವರ ನಿನ್ನೇಕೆ ಆಯ್ದುಕೊಂಡೆ ಕವನ ಸಂಕಲನವು ಮನುಷ್ಯ ಬದುಕಿನ ಅನೇಕ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಉತ್ತಮ ಕೃತಿಯಾಗಿದ್ದು, ಉತ್ತಮ ವಿಚಾರಗಳನ್ನು ಒಳಗೊಂಡಿದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ)‌ಪ್ರಾಸ್ತಾವಿಕ ನುಡಿಗಳಾಡಿದರು,
ಪತ್ರಕರ್ತರು , ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಪಿ.ಗೋವಿಂದರಾಜು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು,
ವೇದಿಕೆಯಲ್ಲಿ ವಾಗ್ಮಿ ಡಾ.ಶಾಂತರಾಜು ನಿರೂಪಿಸಿದರು , ರಂಗಭೂಮಿ ಕಲಾವಿದ, ಕವಿ, ಪೊಲೀಸ್ ಇಲಾಖೆಯ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಕುವೆಂಪು ಗೀತೆಗಳನ್ನು ಹಾಡಿದರು.
ಸಮಾರಂಭದಲ್ಲಿ ಹಿರಿಯರು, ಸಾಹಿತಿಗಳು, ಕಲಾವಿದರು, ವದುವರರ ಕಡೆಯ ಹತ್ತಾರು ಮಂದಿ ಅಕ್ಷತೆ ಹಾಕಿ ಶುಭಕೋರಿದರು. ಸರಳವಾದ ಊಟೋಪಚಾರ ಸೇರಿದ್ದ ಪ್ರೇಕ್ಷಕರ ತನು ಮನಕ್ಕೆ ಮುದ ನೀಡಿತು

WhatsApp

Join Now

Telegram

Join Now

Instagram

Join Now