ವಿಜಯ ದರ್ಪಣ ನ್ಯೂಸ್….
ರಕ್ಷಾಬಂಧನ

ಒಂದು ಕಾಳಜಿಯ ನೋಟ
ಒಂದು ಆಶೀರ್ವಾದದ ಸ್ಪರ್ಶ
ಒಂದು ನಿಸ್ವಾರ್ಥ ಪ್ರಾರ್ಥನೆ ಸಾಕು
ಅವುಗಳನ್ನು ಜೀವನಪೂರ್ತಿ ಹೃದಯದಲ್ಲಿ ಉಳಿಸಿಕೊಳ್ಳಲು
ರಕ್ಷಾಬಂಧನ
ಕೈಗೆ ಕಟ್ಟುವ ಒಂದು ದಾರವಲ್ಲ
ಹೃದಯಕ್ಕೆ ಕಟ್ಟುವ ಒಂದು ನಂಬಿಕೆ
ಬಾಲ್ಯದ ಜಗಳಗಳ ನಡುವೆ ಅರಳಿದ ನಗು
ಸಣ್ಣ ಸಣ್ಣ ಕೋಪಗಳ ಹಿಂದೆ ಅಡಗಿದ ಮಮತೆ
ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರೆಸಿದ ಕ್ಷಣಗಳು
ಒಬ್ಬರ ಸಂತೋಷದಲ್ಲಿ ಇನ್ನೊಬ್ಬರು ನಗಿದ ದಿನಗಳು
ಇವೆಲ್ಲವೂ ಇಂದು ರಾಖಿಯ ಒಂದು ಗಂಟಿನಲ್ಲಿ ಮತ್ತೆ ಜೀವ ಪಡೆಯುತ್ತವೆ
ಅಕ್ಕನ ಕೈಯಿಂದ ಕಟ್ಟಿದ ಆ ಸೂತ್ರದಲ್ಲಿ
ಪ್ರೀತಿ ಇರುತ್ತದೆ
ಕಾಳಜಿ ಇರುತ್ತದೆ
ಮಾತುಗಳಲ್ಲಿ ಹೇಳಲಾಗದ ಆತ್ಮೀಯತೆ ಇರುತ್ತದೆ
ಅಣ್ಣನ ಮೌನದಲ್ಲಿಯೂ
ಒಂದು ಭರವಸೆ ಇರುತ್ತದೆ
ಏನೇ ಆಗಲಿ ನಾನು ನಿನ್ನೊಂದಿಗಿದ್ದೇನೆ ಎನ್ನುವ
ಅದೃಶ್ಯವಾದ ಭಾವ
ಕಾಲ ಬದಲಾಗಬಹುದು
ದೂರಗಳು ಹೆಚ್ಚಾಗಬಹುದು
ಜೀವನ ತನ್ನದೇ ದಾರಿಯಲ್ಲಿ ಸಾಗಬಹುದು
ಕೆಲವು ಸಂಬಂಧಗಳು ಮಾತ್ರ
ಸ್ಮೃತಿಗಳ ಮರದ ನೆರಳಿನಂತೆ
ಯಾವತ್ತೂ ನಮ್ಮೊಂದಿಗೆ ನಡೆಯುತ್ತವೆ
ರಾಖಿಯ ದಾರವು ಕಳಚಬಹುದು
ಆದರೆ ಅದನ್ನು ಕಟ್ಟಿದ ಪ್ರೀತಿಯ ಬಂಧ
ಎಂದಿಗೂ ಕಳಚುವುದಿಲ್ಲ
ಒಬ್ಬರಿಗಾಗಿ ಮತ್ತೊಬ್ಬರು
ಹೃದಯದಾಳದಲ್ಲಿ ಉಳಿಸಿಕೊಂಡಿರುವ
ಪ್ರೀತಿ ವಿಶ್ವಾಸ ಮತ್ತು ಕಾಳಜಿಯ
ನಿಶ್ಯಬ್ದ ಸಂಭ್ರಮ
*ಬಂಧಗಳು ರಕ್ತದಿಂದ ಹುಟ್ಟಬಹುದು
*ಆದರೆ ಅವು ಬದುಕುವುದು ಪ್ರೀತಿಯಿಂದ
*ಎಲ್ಲಾ ಸಹೋದರ ಸಹೋದರಿಯರಿಗೂ
*ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು
✍️ ಎಂ ಎಂ ದಾವೂದ್
9945375180










