ಶ್ರೀ ಮಠದ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ: ಶ್ರೀ ಶ್ರೀ ಮಹಾದೇವ ಸ್ವಾಮೀಜಿ.

ವಿಜಯ ದರ್ಪಣ ನ್ಯೂಸ್                                          ವಿಜಯಪುರ, ದೇವನಹಳ್ಳಿ ತಾಲ್ಲೂಕು,                           ಬೆಂಗಳೂರು ಗ್ರಾ ಜಿಲ್ಲೆ .ಅಗಸ್ಟ್ 01

ಶಿವಶರಣರ ಯುಗದ 12 ನೆಯ ಶತಮಾನದಲ್ಲಿ ಶಿವಶರಣ ಹಾಗೂ ವಚನಕಾರರು ಬಸವಣ್ಣನವರು ಸಮಕಾಲಿಕ ಬಸವಣ್ಣ ಚೆನ್ನಬಸವಣ್ಣ ಮೋದಲಾದವರು ವಚನಕಾರರು ಈತನನ್ನು ಸ್ಮರಿಸುವ ಬಸವಣ್ಣ ನವರು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ನಮ್ಮ ಮಠದ ಆವರಣದಲ್ಲಿ ನಿರ್ಮಿಸುತ್ತಿರುವ ಸಭಾಭವನಕ್ಕೆ ಹನಿ ಗೂಡಿದರೆ ಹಳ್ಳದಂತೆ ಇಲ್ಲಿ ಬಂದಿರುವ ಒಬ್ಬೊಬ್ಬ ಭಕ್ತರು ವಸ್ತು ರೂಪದಲ್ಲಿ ನೀಡಬೇಕಾಗಿ ಶ್ರೀಮಠದ ಹಿರಿಯ ಸ್ವಾಮೀಜಿಗಳಾದ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಶ್ರೀ ಮಹಾದೇವಸ್ವಾಮಿಗಳು ತಿಳಿಸಿದರು

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಶ್ರೀ ಬಸವಕಲ್ಯಾಣ ಮಠದಲ್ಲಿ ನೆಹರು ಯುವ ಕೇಂದ್ರ ಜೇಸಿಸ್ ದೇವನಹಳ್ಳಿ ಡೈಮಂಡ್ ಸಂಯುಕ್ತ ಆಶ್ರಯದಲ್ಲಿ 430ನೆಯ ಪೂರ್ಣಿಮೆ ಪೂಜಾ ಕಾರ್ಯಕ್ರಮ 289 ನೆಯ ಚಿಂತನಾ ಗೋಷ್ಠಿ ಯನ್ನು ಏರ್ಪಡಿಸಲಾಗಿತ್ತು.

  ಶ್ರೀ ಮಠದ ಕಾರ್ಯದರ್ಶಿ ವಸಂತ ಕುಮಾರ್ ರವರು *ಶರಣ ಶ್ರೀ ಮಾದಾರ ಚೆನ್ನಯ್ಯ* ರವರ ಬಗ್ಗೆ ಮಾತನಾಡುತ್ತಾ ಮಾದಾರ ಚೆನ್ನಯ್ಯ ತಮಿಳುನಾಡಿನ ಕ್ರಾಂತಿಕಾರಿ ಚೋಳರಾಜನ ಕುದುರೆ ಲಾಯದಲ್ಲಿ ಕಾಯಕ.ಇವರು ಅಭಯ ಅರಣ್ಯದಲ್ಲಿ ಪರಶಿವನನ್ನು ಕುರಿತು ಘೋರ ತಪಸ್ಸು ಮಾಡಿದಾಗ ಶಿವನು ಪ್ರತ್ಯೇಕನಾಗಿ ತನ್ನ ಮಡದಿಯು ತಯಾರಿಸಿದ ಅಮಲಿಯನ್ನು ಕುಡಿದು ಸಂತೃಪ್ತಿಯಾದನೆಂದು ಪುರಾಣದಿಂದ ತಿಳಿಯುತ್ತದೆ.
ಮಾದಾರ ಚೆನ್ನಯ್ಯ ಉತ್ತಮ ವಚನಕಾರರು  ನಿಜಾತ್ಮಾರಾಮ‌ ರಾಮುನಾ  ಎಂಬ ಅಂಕಿತಾ ನಾಮದಿಂದ ರಚಿತವಾದ 10 ವಚನಗಳು ದೊರೆತಿದೆ ಎಂದರು

 ಕಿರಿಯ ಸ್ವಾಮಿಗಳಾದ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಶ್ರೀ ಸದಾಶಿವಸ್ವಾಮೀಜಿರವರು ಮಾತನಾಡುತ್ತಾ ಪಟ್ಟಣದ ಬಸವ ಲೋಕದಲ್ಲಿ ಮುಂದಿನ ದಿನಗಳಲ್ಲಿ ಎರಡನೇ ಸಿದ್ದಗಂಗೆ ಮತ್ತು ವಿದ್ಯಾಸಂಸ್ಥೆಗಳು ಸ್ಥಾಪಿಸಲು ತಾವುಗಳು ತನುಮನ ಧನವನ್ನು ಅರ್ಪಿಸಬೇಕೆಂದು ಕರೆನೀಡಿದರು.

 ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಲಕ್ಷ್ಮಿದೇವಿ , ರೋಟರಿ ವಿದ್ಯಾ ಸಂಸ್ಥೆಯ ವಿಶ್ರಾಂತ ಶಿಕ್ಷಕಿ ಜಯಮ್ಮ ರವರಿಗೆ ಗೌರವ ರಕ್ಷೆ ನೀಡಿ ಅಭಿನಂದಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಂಪುರ ಶ್ರೀ ಸಿದ್ದಾಶ್ರಮ ಸರ್ವೋದಯ ಕೇಂದ್ರ ಮತ್ತು ಪೀಪಲ್ ಟ್ರಸ್ಟ್ ಗ್ರಾಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶ್ರೀ ಎಸ್. ವಿಶ್ವನಾಥ್ ರವರು ವಹಿಸಿದರು

 ಕಾರ್ಯಕ್ರಮದ ಭಕ್ತಿ ಸೇವೆಯನ್ನು ಲಿಂಗೈಕ್ಯ ಮುನಿ ಸೊಣ್ಣಪ್ಪ ರವರ ಮಗ ಲೋಕೇಶ್ ಮತ್ತು ಕುಟುಂಬದವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಹಂತಿನಮಠ ಧರ್ಮ ಸಂಸ್ಥೆಯ ವಿ. ವಿಶ್ವನಾಥ್ , ನಗರ್ತ ಯುವಕ ಸಂಘದ ಅಧ್ಯಕ್ಷರು ಎ. ಮಂಜುನಾಥ್, ನಗರೇಶ್ವರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್. ಪುನೀತ್ ಕುಮಾರ್, ಜೇಸಿಸ್ ದೇವನಹಳ್ಳಿ ಡೈಮಂಡ್ ಅಧ್ಯಕ್ಷ ಪ್ರಶಾಂತ್ ಬಿ ವಿ ಬಸವರಾಜ್ ಡಾ.ವಿ. ಪ್ರಶಾಂತ್, ವಿಜಯಕುಮಾರ್, ಆನಂದಪ್ಪ ಶ್ರೀಮತಿ ದಾಕ್ಷಾಯಣಮ್ಮ ರವರು ಉಪಸ್ಥಿತರಿದ್ದರು.

 

£££££££££££££££££££££££££££££££

 

 ಆಗಸ್ಟ್ 5 ರಿಂದ 8 ರವರೆಗೆ ಉಪ ಲೋಕಾಯುಕ್ತರ ಭೇಟಿ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ.

ಬೆಂಗಳೂರು ಗ್ರಾಮಾಂತರ ಜಿಲ್ಲೆ. ಆಗಸ್ಟ್ 01

ಕರ್ನಾಟಕ ರಾಜ್ಯ ಉಪ ಲೋಕಾಯುಕ್ತರಾದ ಗೌರವಾನ್ವಿತ ಕೆ.ಎನ್. ಫಣೀಂದ್ರ ಅವರು 2023 ರ ಆಗಸ್ಟ್ 05 ರಿಂದ 08 ರ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವುದು, ದೂರು/ಅರ್ಜಿಗಳನ್ನು ಸ್ವೀಕರಿಸುವುದು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಮಾಡಲಿದ್ದಾರೆ.

2023 ರ ಆಗಸ್ಟ್ 05 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ 01:30 ಗಂಟೆಯವರೆಗೆ ವರೆಗೆ ಮತ್ತು ಮಧ್ಯಾಹ್ನ 2:30 ಗಂಟೆಯಿಂದ ರಿಂದ 5:00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ. ನಂತರ ಸಂಜೆ 5:30 ಗಂಟೆಯಿಂದ 6:30 ಗಂಟೆಯವರೆಗೆ ಕರ್ನಾಟಕ ರಾಜ್ಯ ಮಟ್ಟದ ಸೇವಾ ಪ್ರಾಧಿಕಾರ ಸಹಯೋಗದೊಂದಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕರ್ನಾಟಕ ಸಾಕ್ಷರತೆ ಯೋಜನೆಯ ಕುರಿತು ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಆಗಸ್ಟ್ 6 (ಭಾನುವಾರ) ರಂದು ಬೆಳಗ್ಗೆ 10:00 ಗಂಟೆಯಿಂದ 1:00 ಗಂಟೆಯ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ಜೊತೆ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಪ್ರಾಧಿಕಾರದ ಪಾತ್ರ ಕುರಿತ ಸಭೆಯನ್ನು ಸಿಟಿ ಸಿವಿಲ್ ಕೋರ್ಟ್ ನ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11:15 ಗಂಟೆಯಿಂದ 12:30 ಗಂಟೆಯವರೆಗೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಜೊತೆ ಕರ್ನಾಟಕ ಲೋಕಾಯುಕ್ತ ಕಛೇರಿಯ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. ಸಂಜೆ 4:00 ಗಂಟೆಗೆ ಜಿಲ್ಲೆಯ ತಾಲ್ಲೂಕುಗಳಿಗೆ ಭೇಟಿ ನೀಡಲಿದ್ದಾರೆ‌.

ಆಗಸ್ಟ್ 7 (ಸೋಮವಾರ) ರಂದು ಬೆಳಗ್ಗೆ 10:00 ಗಂಟೆಯಿಂದ 11:00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11:00 ಗಂಟೆಯಿಂದ 1:30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2:30 ಗಂಟೆಯಿಂದ 4:30 ಗಂಟೆಯವರೆಗೆ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ ಅಥವಾ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ನಡೆಸಲಾಗುತ್ತದೆ.

ಆಗಸ್ಟ್ 7 ರ ಬಾಕಿ ಪ್ರಕರಣಗಳನ್ನು ಆಗಸ್ಟ್ 8 ರಂದು ಬೆಳಗ್ಗೆ 10:00 ಗಂಟೆಯಿಂದ ಪ್ರಕರಣಗಳು ಮುಕ್ತಾಯ ಆಗುವವರೆಗೂ ನಡೆಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.