ಮಂಡಿಬೆಲೆ ಗ್ರಾಮ ಪಂಚಾಯಿತಿ ಜೆಡಿಎಸ್ ಮಡಿಲಿಗೆ….

ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ

ಬೆಂಗಳೂರು ಗ್ರಾ ಜಿಲ್ಲೆ ,ಆಗಸ್ಟ್ 02

ದೇವನಹಳ್ಳಿ ತಾಲ್ಲೂಕಿನ ಮಂಡಿಬೆಲೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಇಂದು ನಡೆದ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ  ಅಭ್ಯರ್ಥಿ ಎನ್ ಸುಜಾತ ಮಂಜುನಾಥ್  ಮತ್ತು  ಹೆಚ್ಎಂ ಶ್ರೀನಾಥ್  ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ಈ ಮೂಲಕ ಮಂಡಿಬೆಲೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳು ಜೆಡಿಎಸ್ ಮಡಿಲಿಗೆ ಬಂದಿದೆ.

ಮಂಡಿಬೆಲೆ ಗ್ರಾಮ ಪಂಚಾಯತಿಯಲ್ಲಿ 13 ಜನ ಸದಸ್ಯರಿದ್ದು ,ಅಧ್ಯಕ್ಷರ ಸ್ಥಾನಕ್ಕೆ ಎನ್ ಸುಜಾತ ಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್ ಎಂ ಶ್ರೀನಾಥ್ , ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಲಿತಾ ಶಿವಕುಮಾರ್ ಇಬ್ಬರು ನಾಮಪತ್ರ ಸಲ್ಲಿಸಿದ ಪರಿಣಾಮ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹೆಚ್ ಎಂ ಶ್ರೀನಾಥ್ ರವರು 7 ಮತಗಳು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಲಿತಾ ಶಿವಕುಮಾರ್ ರವರು 6 ಮತಗಳು ಪಡೆದರು. 7 ಮತಗಳನ್ನು ಪಡೆದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್ ಎಂ ಶ್ರೀನಾಥ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಕೃಷ್ಣಕುಮಾರ್ ಘೋಷಿಸಿದರು.


ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ಸುಜಾತ ಮಂಜುನಾಥ್ ರವರು ಮಾತನಾಡುತ್ತಾ ಇಂದು ನನ್ನನ್ನು ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ನಮ್ಮ ಪಕ್ಷದ ಪಂಚಾಯಿತಿ ಸದಸ್ಯರಿಗೂ, ನಿಕಟಪೂರ್ವ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರಿಗೂ, ಜೆಡಿಎಸ್ ಪಕ್ಷದ ಮುಖಂಡರಿಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತಾ  ಮಂಡಿಬೆಲೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಸರ್ಕಾರದಿಂದ ಬರುವ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರು ನೂತನ ಅಧ್ಯಕ್ಷೆ  ಎನ್ ಸುಜಾತ ಮಂಜುನಾಥ್, ಉಪಾಧ್ಯಕ್ಷ ಹೆಚ್ ಎಂ ಶ್ರೀನಾಥ್ ರವರಿಗೆ  ಶಾಲು ಹೊದಿಸಿ ಗೌರವಿಸಿ ತಮ್ಮ  ಅಧಿಕಾರ ಅವಧಿಯಲ್ಲಿ ಮಂಡಿಬೆಲೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗಲು  ನಮ್ಮ ಸಹಕಾರ ಇದೆ ಎಂದು ತಿಳಿಸಿ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ದೇವನಹಳ್ಳಿ ಟಿಎಪಿಸಿಎಂಎಸ್ ಅಧ್ಯಕ್ಷ ಕಾರಹಳ್ಳಿ ದೇವರಾಜ್ ನಿರ್ದೇಶಕ ಕಾಮೇನಹಳ್ಳಿ ರಮೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೋರಮಂಗಲ ವೀರಪ್ಪ , ಧರ್ಮಪುರ ಬಸವರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಮಂಡಿಬೆಲೆ ರಾಜಣ್ಣ, ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಮಂಡಿಬೆಲೆ ವಿ ಎಸ್ ಎಸ್ ಎಸ್ ಎನ್ ಅಧ್ಯಕ್ಷ ಯಲವಳ್ಳಿ ಚನ್ನೇಗೌಡ, ನಿರ್ದೇಶಕರುಗಳಾದ ಧರ್ಮಪುರ ದೇವರಾಜ್, ಚಿಕ್ಕತತ್ತಮಂಗಲ ತಿಮ್ಮರಾಯಪ್ಪ, ವಿಜಯಪುರ ಹೋಬಳಿ ಜೆಡಿಎಸ್  ಅಧ್ಯಕ್ಷ ಪುರ ಕೃಷ್ಣ,  ಜೆಡಿಎಸ್ ಮುಖಂಡರಾದ ಕೋರಮಂಗಲ ಮೂರ್ತಿ, ದೊಡ್ಡ ತತ್ತಮಂಗಲ ವೆಂಕಟೇಶ್, ದೇವನಹಳ್ಳಿ ಪಿ ಎಲ್ ಡಿ ಬ್ಯಾಂಕ್  ನಿರ್ದೇಶಕ ವೆಂಕಟೇಶ್ ರವರುಗಳು ಶುಭ ಕೋರಿ ಹಾರೈಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.