ವಿಜಯ ದರ್ಪಣ ನ್ಯೂಸ್……
ಶ್ರೀಕೃಷ್ಣ ಮೂರ್ತಿಯ ಅಶ್ವರೂಢ ಪಲ್ಲಕ್ಕಿ ಉತ್ಸವ
ವ
ದೇವನಹಳ್ಳಿ ತಾಲ್ಲೂಕು: ವಿಜಯಪುರ ಪಟ್ಟಣದ ದೌಪತಮ್ಮ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ದ ಅಂಗವಾಗಿ ದೇವರಿಗೆ ಅಭಿಷೇಕ, ಪುಷ್ಪ ಅಲಂಕಾರ, ವಿಶೇಷ ಪೂಜೆ ನಡೆಯಿತು. ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೃಷ್ಣ ಮೂರ್ತಿಯ ಅಶ್ವರೂಢ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಸಲಾಯಿತು.
ಕೆ.ಎಂ.ಮಹೇಶ್, ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಮಾತನಾಡಿದರು. ದೇವಾಲಯದ ಅಧ್ಯಕ್ಷ ಕೆ.ವಿ.ಮುನಿರಾಜು, ಉಪಾಧ್ಯಕ್ಷ ಬಿರ್ಲಾ ನಾಗರಾಜ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ತರಕಾರಿ ರಮೇಶ್, ರವಿಕುಮಾರ್, ರಮೇಶ್, ನಂಜುಂಡಪ್ಪ, ಅಂಜಿನಪ್ಪ, ಕರಗದ ಪೂಜಾರಿ ಭೀಮಣ್ಣ, ಎಂ.ಪಿ.ಸಿ.ಎಸ್. ಅಧ್ಯಕ್ಷ ನಾಗರಾಜು, ಕೃಷ್ಣ ಯುವ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.











