ವಿಜಯ ದರ್ಪಣ ನ್ಯೂಸ್…..
ತಾಂಡವಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕೊನೆಯ ಹಂತದ ಪರಿಶೀಲನೆ ಕಾರ್ಯ ಆರಂಭ

ತಾಂಡವಪುರ ಸೆಪ್ಟೆಂಬರ್ 21 ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಎಸ್ಐಆರ
ಕಾರ್ಯಕ್ರಮ ಬಹಳ ಪ್ರಗತಿಯಲ್ಲಿ ಸಾಗಿದ್ದು ಇಂದು ನಂಜನಗೂಡು ತಾಲೂಕು ಚಿಕ್ಕಯ್ಯ ಛತ್ರ ಹೋಬಳಿ ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ಮತದಾರ ಪಟ್ಟಿ ಪರಿಷ್ಕರಣೆಯ ಕೊನೆ ಹಂತದ ಪರಿಶೀಲನೆ ಕಾರ್ಯಕ್ರಮ ಆರಂಭವಾಗಿದೆ.
ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಶಿರುವ ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಮಹೇಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ಪ ಹಾಗೂ ಕಂದಾಯ ಇಲಾಖೆಯ ವೀರೇಶ್ ಸಮ್ಮುಖದಲ್ಲಿ ಮತದಾರ ಪಟ್ಟಿ, ಕೊನೆಯ ಹಂತದ ಪರಿಸರ ಕಾರ್ಯಕ್ರಮ ಆರಂಭವಾಗಿದೆ.
ಬಳಿಕ ಮಾತನಾಡಿದ ಮಹೇಶ್ ರವರು ಯಾರು ಚುನಾವಣಾ ಪಟ್ಟಿಯಲ್ಲಿ ದೋಷ ಕಂಡು ಬಂದಿದೆ ಅಂತವರಿಗೆ ನಮ್ಮ ಮತದಾರ ಪಟ್ಟಿಯ ಪರಿಷ್ಕರಣೆಯ ಬಿ ಎಲ್ ಓ ಗಳು ಅವರಿಗೆ ತಮ್ಮ ಮತದಾರ ಪಟ್ಟಿಯನ್ನು ಸರಿಪಡಿಸಿಕೊಳ್ಳಲು ನೋಟಿಸಿ ನೀಡಿದ್ದು ಈ ಹಿನ್ನಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯುತ್ತಿದ್ದು ಮತದಾರರ ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ತಿದ್ದುಪಡಿ ಅಥವಾ ವರ್ಗಾವಣೆ ಅಥವಾ ಮತ್ತೊಂದು ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ತಿದ್ದುಪಡಿ ಮಾಡಿಕೊಳ್ಳಲು ಅವರಿಗೆ ಕೊನೆಯ ಅವಕಾಶ ನೀಡಲಾಗಿದ್ದು ಬಿ ಎಲ್ ಓ ಗಳು ಮತದಾರರಿಗೆ ನೀಡಿರುವ ನೋಟಿಸ್ ನಲ್ಲಿ ಆ ದಿನಾಂಕದೊಳಗೆ ಬಂದು ತಮ್ಮ ಮತದಾರರ ಪಟ್ಟಿಯ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳಲು ಅವಕಾಶವಿದ್ದು ಈ ಅವಕಾಶವನ್ನ ಮತದಾರರು ಪಡೆದುಕೊಂಡು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳುವ ಅವಕಾಶ ಇದ್ದು ತಪ್ಪದೇ ಬಂದು ಮತದಾರರು ಸರ್ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾದ ಮಹೇಶ್ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕಂದಾಯ ಇಲಾಖೆಯ ಚುನಾವಣಾಧಿಕಾರಿ ವೀರೇಶ್ ಕಾರ್ಯದರ್ಶಿ ಕೆಕೆ ಮರಯ್ಯ ಪಂಚಾಯಿತಿ ಲೆಕ್ಕ ಸಹಾಯಕ ಎಸ್ ಪುಟ್ಟರಾಜು ಹಾಗೂ ಬಿ ಎಲ್ ಓ ಗಳು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು
–Tk ಬಸವರಾಜು











