ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ: ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ.

ವಿಜಯ ದರ್ಪಣ ನ್ಯೂಸ್, ಬೆಂಗಳೂರು 

ಬಾಡಿಕೇರ್ ಕಿಡ್ಸ್, ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ. ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ ಮಕ್ಕಳಿಗೆ ಆಹ್ಲಾದಕರ ವಾರ್ಡ್‍ರೋಬ್ ಅನ್ನು ನೀಡುತ್ತದೆ. ಹಿಂದಿನ ಸಂಗ್ರಹಗಳಂತೆಯೇ ಬಾಡಿಕೇರ್ ಕಿಡ್ಸ್ ನ ಹೊಸ ಸಂಗ್ರಹವು ವೈವಿಧ್ಯಮಯ ಬಣ್ಣಗಳ ಶ್ರೇಣಿ, ಹೊಸ ವಿನ್ಯಾಸ ಮತ್ತು ಸೇರ್ಪಡೆ ಮಾಡಲಾಗಿರುವ ಅಕ್ಷರ ಮುದ್ರಣಗಳ ಮೂಲಕ ಗಮನ ಸೆಳೆಯುತ್ತದೆ. ಭಾರತದಾದ್ಯಂತ ಸುಮಾರು 450ಕ್ಕೂ ಅಧಿಕ ವಿತರಕರು, 19,000ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳು ಮತ್ತು 20+ ಎಕ್ಸ್‍ಕ್ಲೂಸೀವ್ ಬ್ರಾಂಡ್ ಔಟ್‍ಲೆಟ್ (ಇಬಿಒ)ಗಳಲ್ಲಿ ಹೊಸ ಸಂಗ್ರಹ ಲಭ್ಯವಿದೆ.

ಹೊಸ ಸಂಗ್ರಹವು ಪೆಪ್ಪಾ ಬಿಗ್, ಬೇಬಿ ಶಾರ್ಕ್, ಡಿಸ್ನಿ, ಹೆಲ್ಲೊ ಕಿಟ್ಟಿ, ಕಾರ್ಟೂನ್ ನೆಟ್‍ವರ್ಕ್ ಮತ್ತು ಮಾರ್ವೆಲ್‍ನ ಮಕ್ಕಳ ಪ್ರೀತಿಯ ಪಾತ್ರಗಳು ಹಾಗೂ ಅಕ್ಷರ ಮುದ್ರಣಗಳನ್ನು ಹೊಂದಿದ ವೈವಿಧ್ಯಮಯ ಶ್ರೇಣಿಯ ಟಿ-ಶರ್ಟ್‍ಗಳನ್ನು ಒಳಗೊಂಡಿದೆ. ಇದಲ್ಲದೆ, ಬೇಸಿಗೆ ಸಂಗ್ರಹವು ಬೇಸಿಗೆ ಋತುವಿಗೆ ಸೂಕ್ತವಾದ ಬೀಚ್ ಮೋಟಿಫ್‍ಗಳು, ಟ್ರೋಪಿಕಲ್ ಪ್ರಿಂಟ್ಸ್, ಚಿತ್ತಾಕರ್ಷಕ ಹೂವುಗಳ ಮುದ್ರಣ, ಮನಮೋಹಕ ಪ್ರಾಣಿಗಳ ಗ್ರಾಫಿಕ್ಸ್‍ಗಳನ್ನೂ ಒಳಗೊಂಡಿದೆ. ಐಸ್‍ಕ್ರೀಮ್ ಕೋನ್‍ಗಳು, ಸರ್ಫ್‍ಬೋರ್ಡ್‍ಗಳು, ಸೂರ್ಯನ ಕಿರಣ ಮೊದಲಾದ ಬೇಸಿಗೆ ಚಟುವಟಿಕೆಗಳಿಂದ ಪ್ರೇರಿತವಾದ ವಿನ್ಯಾಸಗಳು ಮಕ್ಕಳನ್ನು ನಿಜಕ್ಕೂ ಖುಷಿಯ ಅಲೆಯಲ್ಲಿ ತೇಲಿಸುತ್ತವೆ.

ಹೊಸ ಬೇಸಿಗೆ ಸಂಗ್ರಹದ ಘೋಷಣೆಗೆ ಮತ್ತಷ್ಟು ಹುರುಪು ತುಂಬಿದ ಶ್ರೀ ಮಿಥುನ್ ಗುಪ್ತಾ, ನಿರ್ದೇಶಕರು, ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್ ಅವರು ಹೇಳಿದರು, `ಬಾಡಿಕೇರ್ ಕಿಡ್ಸ್ ಡೆನಿಮ್ಸ್ ಮತ್ತು ಸ್ಪೋರ್ಟ್‍ವೇರ್‍ಗಳಲ್ಲಿ ಇನ್ನೂ ಎರಡು ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಡೆನಿಮ್ಸ್ ಸಂಗ್ರಹವು ಸ್ಟೈಲಿಶ್ ಮತ್ತು ಟ್ರೆಂಡಿ ವಿನ್ಯಾಸಗಳನ್ನು ಹೊಂದಿದ್ದರೆ, ಸ್ಪೋಟ್ರ್ಸ್‍ವೇರ್ ಸಂಗ್ರಹವು ಕ್ರಿಯಾಶೀಲ ಜೀವನಶೈಲಿಗಾಗಿ ಆರಾಮದಾಯಕ ಮತ್ತು ಅಥ್ಲೆಟಿಕ್ ಉಡುಪುಗಳನ್ನು ಮಕ್ಕಳಿಗೆ ಒದಗಿಸುತ್ತದೆ. ನಿರಂತರವಾಗಿ ವಿಕಸನಗೊಳ್ಳುವ ಮತ್ತು ಮಕ್ಕಳ ಫ್ಯಾಷನ್‍ನಲ್ಲಿ ಇತ್ತೀಚಿನ ಟ್ರೆಂಡ್‍ಗಳ ಜತೆ ಹೆಜ್ಜೆ ಹಾಕುವ ಬ್ರಾಂಡ್‍ನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ನಮ್ಮ ಚಿತ್ತಾಪಹಾರಿ ವಿನ್ಯಾಸಗಳು ಮತ್ತು ವೈವಿಧ್ಯಮಯ ಆಯ್ಕೆಗಳೊಂದಿಗೆ ಬಾಡಿಕೇರ್ ಕಿಡ್ಸ್, ಪ್ರತಿ ಮಗುವೂ ಸಂಗ್ರಹದಲ್ಲಿ ಏನಾದರೂ ವಿಶೇಷವನ್ನು ಕಂಡುಕೊಳ್ಳುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ’.

ಬಾಡಿಕೇರ್ ಕಿಡ್ಸ್ ಮಕ್ಕಳಿಗೆ ಆರಾಮದಾಯಕ ಉಡುಪುಗಳನ್ನು ಒದಗಿಸುವುದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದೆ. ಇದು ಮಕ್ಕಳು ಬೇಸಿಗೆ ಚಟುವಟಿಕೆಗಳನ್ನು ಮುಕ್ತವಾಗಿ ಆನಂದಿಸಲು ಅನುವು ಮಾಡಿಕೊಡುತ್ತದೆ, ಜತೆಗೆ ದೀರ್ಘಕಾಲದ ಬಾಳಿಕೆಯನ್ನೂ ಖಚಿತಪಡಿಸುತ್ತದೆ. ಸಂಗ್ರಹದಲ್ಲಿನ ಉಡುಪುಗಳನ್ನು ಮೂಲಭೂತವಾಗಿ ಮೃದುವಾದ ಮತ್ತು ಉಸಿರಾಡುವ ಹತ್ತಿಯಿಂದ ತಯಾರಿಸಲಾಗಿದ್ದು, ಅತ್ಯಂತ ಸೆಖೆಯ ಬೆಸಿಗೆ ದಿನಗಳಲ್ಲಿಯೂ ಮಕ್ಕಳಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಬಾಡಿಕೇರ್‍ನ ವಿಶಿಷ್ಟವಾದ ಆ್ಯಂಟಿ-ಬ್ಯಾಕ್ಟೀರಿಯಲ್ ತಂತ್ರಜ್ಞಾನದಿಂದ ಸಂಗ್ರಹವು ಮಕ್ಕಳಿಗೆ ಆರಾಮದಾಯಕ ಮಾತ್ರವಲ್ಲ, ಸುರಕ್ಷಿತವೂ ಆಗಿದೆ.