ವಿಜಯ ದರ್ಪಣ ನ್ಯೂಸ್…..
ಸಮೇತನಹಳ್ಳಿ ಗ್ರಾಮ ಪಂಚಾಯಿತಿ ತಿರುಮಲ ಶೆಟ್ಟಿ ಗ್ರಾಮದಲ್ಲಿ ಸ್ವಚ್ಛತೆಯೇ ಸೇವೆ 2026 ಚಾಲನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ 01:
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿರುಮಲ ಶೆಟ್ಟಿ ಗ್ರಾಮ ದಲ್ಲಿ ಇಂದು ಸ್ವಚ್ಛತೆಯೇ ಸೇವೆ 2026′ (Swachhata Hi Seva) ಅಭಿಯಾನದ ಅಂಗವಾಗಿ ಮಾನ್ಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಡಾ. ವಾಸಂತಿ ಅಮರ್ IAS ರವರು ಮುಖ್ಯ ರಸ್ತೆ ಸ್ವಚ್ಛ ಗೊಳಿಸುವುದರ ಜೊತೆಗೆ ಕಾರ್ಯಕ್ರಮ ಚಾಲನೆ ನೀಡಿದರು .
ಕೇಂದ್ರ ಸರ್ಕಾರದ ಈ ಮಹತ್ವದ ಅಭಿಯಾನವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿ ವರೆಗೆ ದೇಶಾದ್ಯಂತ ನಡೆಯುತ್ತಿದ್ದು, ಈ ವರ್ಷ “ಸ್ವಚ್ಛತೆಯಲ್ಲೇ ಸಹಭಾಗಿತ್ವ – ಸ್ವಚ್ಛ ಭಾರತ, ವಿಕಸಿತ ಭಾರತ” ಎಂಬ ಧ್ಯೇಯವಾಕ್ಯದೊಂದಿಗೆ ಜಾರಿಗೆ ತರಲಾಗಿದೆ.
ಅಭಿಯಾನದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು (ಕಸದ ರಾಶಿ ಬಿದ್ದಿರುವ ಜಾಗ) ಗುರುತಿಸಿ ಸಂಪೂರ್ಣ ಸ್ವಚ್ಛಗೊಳಿಸುವುದು, ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಜನ ಸಹಭಾಗಿತ್ವ ಅಕ್ಟೋಬರ್ 1 ರಂದು ಜಿಲ್ಲೆದ್ಯಂತ ಬೃಹತ್ ಶ್ರಮದಾನ, ಸಾರ್ವಜನಿಕರು ತಮ್ಮ ಊರುಗಳನ್ನು ಕಸಮುಕ್ತಗೊಳಿಸಲು ಕೈಜೋಡಿಸುವಂತೆ ಅಧಿಕಾರಿಗಳು ಕರೆ ನೀಡಿದ್ದಾರೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವಚ್ಛತೆಗಾರರಿಗೆ ಗೌರವ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ್ ಬಿ ಉಪ ಕಾರ್ಯದರ್ಶಿ ಯೋಜನಾ ನಿರ್ದೇಶಕರು, ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಧಿಕಾರಿ ಸಹಾಯಕ ನಿರ್ದೇಶಕರು, ಪಿಡಿಒ ಜಿಲ್ಲಾ ತಾಲ್ಲೂಕು ಗ್ರಾಮ ಪಂಚಾಯಿತಿ ಅಧಿಕಾರಿಗಳು VBGRAMG ಮತ್ತು ಎಸ್ ಬಿ ಎಂ ಸಮಾಲೋಚಕರು, ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.









