--Ads--

ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್‌ಆರ್ (CSR) ನಿಧಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ

On: October 29, 2026 5:28 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

 ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್‌ಆರ್ (CSR) ನಿಧಿಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ 

ತಾಂಡವಪುರ ಅಕ್ಟೋಬರ್ 27 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವಕಳಲೆ ಗ್ರಾಮದಲ್ಲಿ ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಎಸ್‌ಆರ್ (CSR) ನಿಧಿಯಡಿ ಒಟ್ಟು ₹4 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ ನೆರೆವೇರಿಸಿದರು

ಬಳಿಕ ಮಾತನಾಡಿದ ಶಾಸಕರು ಸರ್ಕಾರಿ ಪ್ರೌಢಶಾಲೆಯಲ್ಲಿ  ನೂತನ ತರಗತಿ ಕೊಠಡಿ ನಿರ್ಮಾಣ ಹಾಗೂ 7 ತರಗತಿ ಕೊಠಡಿಗಳ ನವೀಕರಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ ಮತ್ತು ತರಗತಿ ಕೊಠಡಿ ನವೀಕರಣ, ಆರ್‌.ಒ. ಘಟಕದ ದುರಸ್ತಿ, ಕೊಳ ಮತ್ತು ಕಲ್ಯಾಣಿ ನವೀಕರಣ, ಘನತ್ಯಾಜ್ಯ ನಿರ್ವಹಣಾ ಘಟಕದ ಶೆಡ್ ನಿರ್ಮಾಣ ಹಾಗೂ ಅಂಗನವಾಡಿ ನವೀಕರಣ ಸೇರಿದಂತೆ ಹಲವು ಕಾಮಗಾರಿಗಳು ಈ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ಎಂದು ತಿಳಿಸಿದರು

ನೆಸ್ಲೆ ಕಂಪನಿ ಅವರ ಈ ಅನುದಾನದಲ್ಲಿ ಉತ್ತಮವಾದ ಶಾಲಾ ಕಚಡವನ್ನು ನಿರ್ಮಿಸಲು ಸಂಬಂಧಪಟ್ಟ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಆದಷ್ಟು ಬೇಗನೆ ಕಾಮುಗಾರಿ ಮುಗಿಸಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು

ಅಲ್ಲದೆ ಕಂಪನಿಯ ಈ ಸೇವೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು ಇದೇ ರೀತಿ ಇನ್ನೂ ಹಲವಾರು ಶಾಲಾ ಕಟ್ಟಡಗಳು ಶಿಥಿಲ ವ್ಯವಸ್ಥೆಯಲ್ಲಿವೆ ಅದನ್ನು ಸಹ ಇದೇ ರೀತಿ ಇನ್ನು ಹೆಚ್ಚಿನ ಅನುದಾನ ನೀಡಿ ಶಾಲಾ ಕಟ್ಟಡಕ್ಕೆ ಮುಂದಾಗ ಬೇಕೆಂದು ಕಂಪನಿಯ ಮಾಲೀಕರಿಗೆ ತಿಳಿಸಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರೋಡ್ರಿಗೋ, ಬಿಇಒ ಮಹೇಶ್, ಇಒ ಜೆರಾಲ್ಡ್ ರಾಜೇಶ್, ಸಿಡಿಪಿಒ ಭವ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್, ನೆಸ್ಲೆ ಕಂಪನಿಯ ಆಡಳಿತ ವರ್ಗದವರು ನಾರಾಯಣ, ಕಳಲೆ ರಾಜೇಶ್, ಕೆ.ಡಿ. ಮಂಜು ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು: ಸಂಸದ ಸುನಿಲ್ ಬೋಸ್

ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದೆ ಶಾಸಕ ದರ್ಶನ್ ಧ್ರುವನಾರಾಯಣ್

ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ಸಹೋದರಿ ಬನ್ನಿ ಕಾಳಮ್ಮ ತಾಯಿಯ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡಿ ಭಕ್ತರ ಕೋರಿಕೆ

ಹದಿನಾರು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ 

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳು ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು :ಶಾಸಕ ದರ್ಶನ್ ಧ್ರುವನಾರಾಯಣ್

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಚಾಲನೆ