ವಿಜಯ ದರ್ಪಣ ನ್ಯೂಸ್……….
“ಕನ್ನಡ ಕರುನಾಡು ಕಸ್ತೂರಿ”

ಜಯಶ್ರೀ ಜೆ ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ ೯೪೪೯೨೩೪೧೪೨
ಕನ್ನಡದ ಕರುನಾಡು ಕಸ್ತೂರಿ ಕಲ್ಪತರು
ಕಮಲದ ಕಣ್ಣಿನಲಿ ಕಂಗೊಳಿಪ ಕಲ್ಪನೆಗೆ ಹೆಸರು
ಕಾಪಾಡುವ ಕರುಣಾಮಯಿ ಕಾಮಧೇನು ಕಾವ್ಯ
ಕಾಲದ ಕಡಲಲಿ ಕನ್ನಡಿಗರ ಕೀರ್ತಿ ಭವ್ಯ
ಕಾವೇರಿ ಕೃಷ್ಣೆಯ ಕರಾವಳಿ ಕಡಲ ಕಂಪು
ಕನ್ನಡದ ಕಂಠದಲಿ ಕರಗುವ ಕಾವ್ಯ ತಂಪು
ಕೋಟಿ ಕೋಟಿ ಕನ್ನಡಿಗರ ಕರುಳ ಕುಡಿಗಳು
ಕಾವ್ಯದ ಕಡಲಲಿ ಕೀಳುವರು ಕಷ್ಟದ ಕಲ್ಲುಗಳು
ಕಲ್ಲಿನ ಕಾವ್ಯವ ಕೆತ್ತಿದ ಕಲಿಗಳ ನಾಡು
ಕಲ್ಪನೆಯ ಕಡಲಲಿ ಕಂಗೊಳಿಪ ಕಾವ್ಯದ ಬೀಡು
ಕಲಿಯುಗದ ಕತ್ತಲೆಯ ಕಳೆಯುವ ಕ್ರಾಂತಿ ಜ್ಯೋತಿ
ಕನ್ನಡ ಕರುನಾಡು ಕರುಣೆಯ ಕೀರ್ತಿ ಮೂರ್ತಿ
ಕಣ್ಣಿನ ಕರೆಯಲಿ ಕರಗುವ ಕಲ್ಪನಾ ಲೋಕ
ಕನ್ನಡ ಕಂಠದ ಕಹಳೆಯಲಿ ಕಳೆಯುವುದು ಶೋಕ
ಕಾಲದ ಪುಟದಲಿ ಕೆತ್ತಿದ ಕನ್ನಡಿಗರ ಕಥೆ
ಕರುನಾಡ ಮಣ್ಣಲಿ ಕಂಗೊಳಿಪ ಕಲ್ಪನಾ ಲತೆ
ಕಾವ್ಯದ ಕಡಲ ಕಿನಾರೆಯ ಕಲ್ಪನಾ ವಿಹಾರಿ
ಕನ್ನಡಿಗರ ಕಿವಿಗೆ ಇಂಪನು ನೀಡುವ ಕಾವ್ಯ ಲಹರಿ
ಕಪ್ಪು ಮಣ್ಣಿನ ಕರುಳಿನ ಕರುಣೆಯ ಕಣಜ
ಕರುನಾಡ ಕೀರ್ತಿಯಲಿ ಕಂಗೊಳಿಪ ಕಮಲಜ
ಕನ್ನಡದ ಕಾವ್ಯ ಕಸ್ತೂರಿ ಕಂಪು ಕಡಲು
ಕನ್ನಡಿಗರ ಕರುಳಿನಲಿ ಕರಗಲಿ ಕಷ್ಟದ ಮುಗಿಲು
============











