ಕರ್ನಾಟಕ ಬಂದ್ ಗೆ ಕದಂಬ ಸೈನ್ಯ ಕನ್ನಡ ಸಂಘಟನೆ ಸಂಪೂರ್ಣ ಬೆಂಬಲ 

ವಿಜಯ ದರ್ಪಣ ನ್ಯೂಸ್ 

ದೇವನಹಳ್ಳಿ ಸೆಪ್ಟೆಂಬರ್ 28: 

ಕನಾ೯ಟಕ ಸರ್ಕಾರ ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ನ್ನು ಹತ್ತಿಕ್ಕಲು ಸಿದ್ದತೆ ನಡೆಸಿರುವುದನ್ನು ಕದಂಬ ಸೈನ್ಯ  ತೀವ್ರವಾಗಿ ಖಂಡಿಸಿದೆ.

ಕಾವೇರಿ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಸರ್ಕಾರ ತಮಿಳುನಾಡಿನ ಪರ ನಿಂತಿರುವುದು ಸಮಸ್ತ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ, ಕನಾ೯ಟಕ ಬಂದ್ ಗೆ ಸಂಪೂರ್ಣವಾಗಿ ಸಹಕರಿಸಿ ಬಂದ್ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದೆ

ಕಾವೇರಿ, ಕೃಷ್ಣ ಮಹಾದಾಯಿ ನನ್ನದು ಎಂಬ ಭಾವನಾತ್ಮಕ ಸಂಬಂಧ ಬೆಳೆಯಬೇಕು ಎಂದು ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಉಪಾಧ್ಯಕ್ಷ ಡಾ ದೇವನಹಳ್ಳಿ ದೇವರಾಜ್, ರಾಜ್ಯ ಕಾರ್ಯದರ್ಶಿ ಎನ್ ಸಿ ಕಾಂಬಳೆ ವಿಜಯಪುರ, ರಾಜ್ಯ ಸಂಚಾಲಕ ಎಸ್ ಶಿವಕುಮಾರ್, ರಾಜ್ಯ ಸಹ ಕಾರ್ಯದರ್ಶಿ ಶಿವಕುಮಾರ್ ಮೈಸೂರು,
ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಜೋಸೆಫ್ ರಾಮು, ರಾಮನಗರ ತಾಲೂಕು ಅಧ್ಯಕ್ಷ ಶಿವಕುಮಾರ ಪಟ್ಲಿ, ಮೈಸೂರು ಜಿಲ್ಲಾ ಉಪಾಧ್ಯಕ್ಷ ಆಟೋ ಪುಟ್ಟಸ್ವಾಮಿ,
ರಾಜ್ಯ ಸಮಿತಿ ಸದಸ್ಯರಾದ ಆರಾಧ್ಯ ಗುಡಗೇನಹಳ್ಳಿ ಥಾಮಸ್ ಬೆಂಜಮಿನ್ ಕಿಟ್ಟಿ ಸಿ ಶಿವಪ್ಪ ,ಚಿಕ್ಕಬಳ್ಳಾಪುರ ಜಿಲ್ಲೆ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ,ಗದಗ ಜಿಲ್ಲೆ ಅಧ್ಯಕ್ಷ ವಿನಾಯಕ ಸಂಡೂರ ,ವಿಜಯಪುರ ಜಿಲ್ಲೆ ಅಧ್ಯಕ್ಷ ಕಾರ್ಯದರ್ಶಿ ಸಂತೋಷ್ ಭಾಸ್ಕರ್  ರವರು 
ಮನವಿ ಮಾಡಿದ್ದಾರೆ.