--Ads--

ನಾನು, ನಂದು, ನಾನೇ, ನನ್ನಿಂದ…? ಎನ್ನುವ ಮಾತುಗಳನ್ನು ಆಂಜಿನಪ್ಪ(ಪುಟ್ಟು) ಮೊದಲು  ಬಿಡಿ : ರಾಜೀವ್ ಗೌಡ

On: June 28, 2026 4:50 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನಾನು, ನಂದು, ನಾನೇ, ನನ್ನಿಂದ…? ಎನ್ನುವ ಮಾತುಗಳನ್ನು ಆಂಜಿನಪ್ಪ (ಪುಟ್ಟು) ಮೊದಲು ಬಿಡಿ :  ರಾಜೀವ್ ಗೌಡ

ಶಿಡ್ಲಘಟ್ಟ : “ನಾನು” ಎನ್ನುವುದರ ಬದಲು “ನಾವು” ಎಂದಾಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗಟ್ಟಿಗೊಳ್ಳುತ್ತದೆ ಮತದಾರ ದೇವರುಗಳ ತೀರ್ಮಾನವೇ ಅಂತಿಮ ಎಂಬುದನ್ನು ಮರೆಯಬಾರದು “ಕಾಂಗ್ರೆಸ್ ಪಕ್ಷವೇ ನನ್ನ ತಾಯಿ ಮತ್ತು ದೇವರು” ಎಂದು ಯಾರು ತಿಳಿದು ಅದರಂತೆ ನಡೆದುಕೊಳ್ಳುತ್ತಾರೋ ಅವರಿಗೆ ಪಕ್ಷ ಖಂಡಿತವಾಗಿಯೂ ಸ್ಥಾನಮಾನಗಳನ್ನು ನೀಡುತ್ತದೆ ಎಂದು ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ತಿಳಿ ಹೇಳಿದರು.

ಕ್ಷೇತ್ರದಲ್ಲಿ ಮುಂಬರುವ 2028 ರ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಎನ್.ರವಿಕುಮಾರ್ ಹಾಗು ತಮ್ಮ ನಡುವೆ ಮಾತ್ರ ಸ್ಪರ್ಧೆ (ಪೈಪೋಟಿ) ಇರಲಿದೆ ಉಳಿದವರು ಮೂರನೇ ಅಥವ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಡುತ್ತಾರೆ ಎಂದು 2023 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಆಂಜಿನಪ್ಪ(ಪುಟ್ಟು) ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆಂಜಿನಪ್ಪ(ಪುಟ್ಟು) ಅವರು ಹುಡುಕಬಾರದು ,ಈ ಹಿಂದೆ ಕೂಡ ಎರಡು ಬಾರಿ ದುಡುಕಿ ಪಕ್ಷ ವಿರೋಧಿಯಾಗಿ ಕೆಲಸ ಮಾಡಿದ್ದೀರಿ ಸ್ವತಂತ್ರ ಅಭ್ಯರ್ಥಿ ಎಂಬುದಾಗಿ ತಮ್ಮನ್ನು ಬಿಂಬಿಸಿಕೊಂಡು ತಮ್ಮ ಜೊತೆಗಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರಕ್ಕೀಡು ಮಾಡಬೇಡಿ, ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ, ಒಡೆಯುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

“ನಾನು, ನಂದು, ನಾನೇ, ನನ್ನಿಂದ…” ಎನ್ನುವ
ದುರಹಂಕಾರದ ಮಾತುಗಳನ್ನು ಮೊದಲು ಬಿಟ್ಟು, ಬಿಡಿ
ದೇವರ ಕೃಪೆಯಿಂದ, ಕಾಂಗ್ರೆಸ್‌ ಕಾರ್ಯಕರ್ತರ, ಗುರು-ಹಿರಿಯರ ಆಶೀರ್ವಾದದಿಂದ ಮತ್ತು ಎಲ್ಲರ ಸಹಕಾರದಿಂದ ಎಂಬ ವಿನಯಪೂರ್ವಕ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷದಲ್ಲಿರುವವರಿಗೆ ವ್ಯಕ್ತಿ ಪೂಜೆಯಿಲ್ಲ ಇಲ್ಲಿ ಪಕ್ಷವೇ ದೊಡ್ಡದು ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿದ್ದು ಪಕ್ಷವನ್ನು ಸಂಘಟಿಸೋಣ ಪಕ್ಷದೊಳಗೆ ಇದ್ದು, ಸ್ವತಂತ್ರ ಅಭ್ಯರ್ಥಿ ಎಂಬಂತೆ ಮಾತನಾಡಿ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಬೇಡಿ ಎಂದು ಹೇಳಿದರು.

ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸೋಣ ,
ನಮ್ಮದೇ ಸರ್ಕಾರವಿದೆ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸೋಣ, ಕಾಂಗ್ರೆಸ್‌ ಪಕ್ಷದೊಳಗಿದ್ದು ಕತ್ತು ಕೊಯ್ಯುವ ಕೆಲಸ ಮಾಡುವುದು ಬೇಡ ಒಳಗೊಂದು ಹೊರಗೊಂದು ಮುಖವಾಡ ಧರಿಸಬಾರದು, 2028 ರ ಚುನಾವಣೆಯಲ್ಲಿ ಯಾರು ಕಾಂಗ್ರೆಸ್ ಶಾಸಕ ಎಂಬುದನ್ನು ತೀರ್ಮಾನಿಸುವುದು ಕ್ಷೇತ್ರದ ಮತದಾರ ದೇವರುಗಳು ಎಂಬ ಎಚ್ಚರವಿರಲಿ ಸಂಯಮ ಮೆರೆಯಿರಿ ಎಂದರು.

WhatsApp

Join Now

Telegram

Join Now

Instagram

Join Now