ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ಕಾವೇರಿ ಹೋರಾಟ ಮುಂದುವರಿಸಲು ತೀರ್ಮಾನ

ವಿಜಯ ದರ್ಪಣ ನ್ಯೂಸ್ 

ಮಂಡ್ಯ :- ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟ ಮುಂದುವರಿಸಲು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಿರ್ಣಯಿಸಿದೆ.


ಮಂಡ್ಯ  ನಗರದ ಸರ್ ಎಂ ವಿ ಪ್ರತಿಮೆ ಎದುರು ನಿರಂತರ ಧರಣಿ ಸ್ಥಳದಲ್ಲಿ ನಡೆದ ಸಭೆಯಲ್ಲಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನೀರು ಪ್ರಾಧಿಕಾರ ನೀರು ಬಿಡುಗಡೆ ಮಾಡುವಂತೆ ಆದೇಶ ಮಾಡಿರುವುದನ್ನು ಸಭೆ ತೀವ್ರವಾಗಿ ಖಂಡಿಸಿತು.

ಕಾವೇರಿ ನದಿ ನೀರು ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಖಂಡಿಸುತ್ತಾ ಆಳುವ ಸರ್ಕಾರಗಳು ತಮ್ಮ ನಡೆಯನ್ನು ಬದಲಾಯಿಸಿಕೊಂಡು ರೈತರ ಹಿತ ಕಾಪಾಡಲು ಮುಂದಾಗಬೇಕು.
ರಾಜ್ಯ ಸರ್ಕಾರ ರೈತರು, ಹೋರಾಟಗಾರರು ಮತ್ತು ನೀರಾವರಿ ತಜ್ಞರ ಸಭೆ ಕರೆದು ಚರ್ಚಿಸಬೇಕು ಹಾಗೂ ವಿಧಾನ ಮಂಡಲದ ತುರ್ತು ಅಧಿವೇಶನ ಕರೆಯಬೇಕು,
ಚುನಾಯಿತ ಜನಪ್ರತಿನಿಧಿಗಳು ಸಮಿತಿ ಕರೆಯುವ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಸಲಹೆ ಸೂಚನೆ ಜೊತೆಗೆ ಸಮಿತಿಯ ನಿರ್ಧಾರಕ್ಕೆ ಬದ್ಧರಾಗಬೇಕು.ಸಭೆಗೆ ಗೈರು ಹಾಜರಾಗುವ ಜನಪ್ರತಿನಿಧಿಗಳು ಸಮಿತಿಯ ನಿಲುವಿಗೆ ಬದ್ಧರಾಗಿರಬೇಕು ಎಂದು ನಿರ್ಣಯ ಮಾಡಿತು.

ಸಭೆಯಲ್ಲಿ ಸಮಿತಿಯ ಸುನಂದ ಜಯರಾಂ. ಕೆ ಬೋರಯ್ಯ, ಜಿ.ಬಿ.ಶಿವಕುಮಾರ್, ಕೆ.ಟಿ ಶ್ರೀಕಂಠೇಗೌಡ, ಗುರುಪ್ರಸಾದ್ ಕೆರಗೋಡು,ಅಂಬುಜಮ್ಮ ರೈತ ಸಂಘದ ಇಂಡು ವಾಳು ಚಂದ್ರಶೇಖರ್ ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್,ಮಹಾಂತಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವೆಂಕಟ ಗಿರಿಯಯ್ಯ, ಬಸವೇಗೌಡ, ಸುಜಾತ ಕೃಷ್ಣ ಪ್ರಶಾಂತ್ ಬಾಬು, ಕೀಲಾರ ಸೋಮಶೇಖರ್, ಪತ್ರಕರ್ತ ಬಸವೇಗೌಡ, ನಾರಾಯಣ್, ಶಿವಶಂಕರ್, ಕೋಮಲ ಇತರರಿದ್ದರು.