ಕುಶಾಲನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ
ವಿಜಯ ದರ್ಪಣ ನ್ಯೂಸ್
ಮಡಿಕೇರಿ ಜಿಲ್ಲೆಯ ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ ಇಂದು ಸಾವಿರಾರು ಭಕ್ತರ ಹರ್ಷದ್ಗಾರದ ನಡುವೆ ಶ್ರುದ್ದಾ ಭಕ್ತಿಯಿಂದ ಜರುಗಿತು.
ಅಯ್ಯಪ್ಪ ಮಾಲೆ ಧರಿಸಿದ ವೃತ್ತದಾರಿಗಳು ಕರ್ಪೂರ ಜ್ಯೋತಿ ಬೆಳಗಿಸಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು.
ಬೆಳಗಿನಿಂದಲೇ ತಂತ್ರಿಗಳು ಹಾಗೂ ಅರ್ಚಕರು ಗಣಪತಿಗೆ ವಿಶೇಷ ಅಭಿಷೇಕ ಪೂಜೆಗಳು ನೆರವೇರಿಸಿದರು. ದಕ್ಷಿಣ ಭಾರತದಲ್ಲಿ ಶ್ರೀ ಗಣಪತಿಗೆ ರಥೋತ್ಸವ ನೆರವೇರಿಸುವ ಕ್ಷೇತ್ರ ಕುಶಾಲನಗರ ಎಂಬ ಖ್ಯಾತಿಗೆ ಒಳಪಟ್ಟಿದೆ. ಮಧ್ಯಾಹ್ನ 1ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿ ರಥ ಬೀದಿಯ ಮೂಲಕ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಸಾಗಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಈಡುಗಾಯಿ ಹರಕೆ ಹೊತ್ತ ಭಕ್ತಾದಿಗಳು ರಥೋತ್ಸವ ಹೊರಡುವ ಸಮಯದಲ್ಲಿ ಒಂದು ಬದಿಯಲ್ಲಿ ಗಣಪತಿಯನ್ನು ಪ್ರಾರ್ಥಿಸಿ ಈಡುಗಾಯಿಯನ್ನು ಹೊಡೆಯುವ ಮೂಲಕ ತಮ್ಮ ಭಕ್ತಿ ಹಾಗೂ ಪ್ರಾರ್ಥನೆಯನ್ನು ನೆರವೇರಿಸಿದರು.
ದೇವಾಲಯದ ವತಿಯಿಂದ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಗಾಯಿತ್ರಿ ಮಂಟಪದಲ್ಲಿ ಅನ್ನ ಸಂತರ್ಪಣ ವ್ಯವಸ್ಥೆ ಮಾಡಲಾಗಿತ್ತು ಸರದಿ ಸಾಲನಲ್ಲಿ ಸಾವಿರಾರು ಭಕ್ತಾದಿಗಳು ದೇವರ ಪ್ರಸಾದವನ್ನು ಸ್ವೀಕರಿಸಲು ಬಿಸಿಲಿನಲ್ಲಿ ನಿಂತಿರುವ ದೃಶ್ಯ ಗೋಚರಿಸಿತು. ಒಂದು ತಿಂಗಳವರೆಗೆ ನಡೆಯುವ ಕುಶಾಲನಗರ ಜಾತ್ರೋತ್ಸವದ ಮೈದಾನದಲ್ಲಿ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ನೆರವೇರಲಿದೆ. ಕುಶಾಲನಗರ ಶ್ರೀ ಮಹಾಗಣಪತಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್ ವಸಂತ್ ಕುಮಾರ್, ಕಾರ್ಯದರ್ಶಿ ವ್ಯವಸ್ಥಾಪಕ ಶ್ರೀನಿವಾಸ್ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಈ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಸಕಲ ಸಿದ್ಧತೆಗಳನ್ನು ಸಜ್ಜುಗೊಳಿಸಿದ್ದರು.