ರಾಜಾಜಿನಗರ ವಿಧಾನಸಭಾ ಕ್ಷೇತ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಟಿ.ಎನ್.ರಾಧಕೃಷ್ಣ ನೇಮಕ
ವಿಜಯ ದರ್ಪಣ ನ್ಯೂಸ್…..
ರಾಜಾಜಿನಗರ ವಿಧಾನಸಭಾ ಕ್ಷೇತ್ರ ಘಟಕದ ಕ.ಸಾ.ಪ ಅಧ್ಯಕ್ಷರಾಗಿ ಟಿ.ಎನ್.ರಾಧಕೃಷ್ಣ ನೇಮಕ

ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ, ಕನ್ನಡ ಭಾಷೆ ಉಳಿಸಲು ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿದೆ-ಡಾ.ಮಹೇಶ್ ಜೋಷಿ
ಕನ್ನಡ ಹಿರಿಯ ಹೋರಾಟಗಾರರಿಗೆ ರಾಜ್ಯ ಸರ್ಕಾರ ಪಿಂಚಣಿ ಕೊಡಬೇಕು-ಜಿ.ಪದ್ಮಾವತಿ
ರಾಜಾಜಿನಗರ ನಿಸರ್ಗ ಹೋಟೆಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಘಟಕ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ.ಳ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಷಿರವರು ನೂತನ ಅಧ್ಯಕ್ಷ ಟಿ.ಎನ್.ರಾಧಕೃಷ್ಣರವರಿಗೆ ಕನ್ನಡ ಬಾವುಟ ನೀಡುವ ಮೂಲಕ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿದರು.
ಮಾಜಿ ಮಹಾಪೌರರಾದ ಶ್ರೀಮತಿ ಪದ್ಮಾವತಿ, ಗೌರವ ಕಾರ್ಯದರ್ಶಿ ಪಟೇಲ್ ಪಾಂಡು, ಪತ್ರಕರ್ತ ರಾಮಚಂದ್ರರವರು, ನಿಕಟಪೂರ್ವ ಅಧ್ಯಕ್ಷ ಎಲ್.ಲೋಕೇಶ್, ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಪಲ್ಲವಿ ಪ್ರಭು, ಉಮೇಶ್ ಚಂದ್ರ, ಮುರುಳಿರವರು ಉಪಸ್ಥಿತರಿದ್ದರು.
ಕ.ಸಾ.ಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿರವರು ಮಾತನಾಡಿ ಹಚ್ಚೆವು ಕನ್ನಡ ದೀಪ ಮನೆ, ಮನೆಗಳಿಗೆ ಹೋಗಬೇಕು ಅದರೆ ಇಂದು ಮನೆ, ಮನಗಳಲ್ಲಿ ಕನ್ನಡ ಉಳಿಯುತ್ತಿಲ್ಲ ಎಂಬುದು ದುಂಖಃ ಸಂಗತಿಯಾಗಿದೆ.
ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿದೆ. ಮಾತೃಭಾಷೆ ಕನ್ನಡದಲ್ಲಿ ಶುದ್ದವಾಗಿ ನಾನು ಮಾತನಾಡಲು ತಂದೆ, ತಾಯಿ ಶಿಕ್ಷಕರು ಕಾರಣ.
ಇಂದು ಮನೆಯಿಂದಲೆ ಕನ್ನಡ ಮರೆಯುವ ದಿನಗಳು ಆರಂಭವಾಗಿದೆ. ವೈಟ್ ರೈಸ್ ಏನ್ನುತ್ತಾರೆ, ಬ್ರದರ್ ಅನ್ನುತ್ತಾರೆ ಅದರೆ ಬದಲು ಅನ್ನ, ಅಣ್ಣ ಏನ್ನುವುದಿಲ್ಲ.
ಮನೆ ಮನೆಗಳಲ್ಲಿ , ಮನಗಳಲ್ಲಿ ಕನ್ನಡ ಬೆಳಸಲು ಪ್ರತಿಯೊಬ್ಬರು ಕನ್ನಡ ರಾಯಭಾರಿಗಳಾಬೇಕು, ಉಳಿಸಬೇಕು, ಬೆಳಸಬೇಕು ಎಂದರೆ ನಾವು ಕನ್ನಡ ಭಾಷೆ ಬಳಸಬೇಕು.
ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ, ಕನ್ನಡ ಭಾಷೆ ಉಳಿಸಬೇಕು ಎಂಬ ಹೋರಾಟ ಮಾಡುವ ದುಸ್ಥಿತಿ ಬಂದಿದೆ.
ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡ ಅನ್ನದ ಭಾಷೆಯಾಗಬೇಕು ಮತ್ತು ಕನ್ನಡ ಸಾಹಿತ್ಯ ಪರಿಷತ್ ಗೆ 1ಕೋಟಿ ಸದಸ್ಯರನ್ನಾಗಿ ಮಾಡಬೇಕು ಇದು ನನ್ನ ಕನಸು ಎಂದು ಹೇಳಿದರು.
ಜಿ.ಪದ್ಮಾವತಿ ರವರು ಮಾತನಾಡಿ ರಾಜಾಜಿನಗರದಲ್ಲಿ ಕನ್ನಡ ಪರ ಹೋರಾಟಗಾರರು ಇರುವ ಪ್ರದೇಶ. ಕನ್ನಡ ಸಾಹಿತ್ಯ ಪರಿಷತ್ ನಾನು ಮಹಾಪೌರರು ಆಗಿದ್ದ ಅವಧಿಯಲ್ಲಿ ಕನ್ನಡ ಭಾಷೆ ಉಳಿಸಿ, ಬೆಳಸಲು ಅನುದಾನ ನೀಡಿಲಾಯಿತು.
ಪ್ರತಿವರ್ಷ ಪಾಲಿಕೆಯಿಂದ ಕನ್ನಡ ಸಾಹಿತ್ಯ ಪರಿಷತ್ ಅನುದಾನ ನೀಡಬೇಕು ಎಂದು ನಿರ್ಣಯಿಸಲಾಯಿತು, ಸ್ವಾತಂತ್ರ್ಯ ಹೋರಾಟಗಾರರ ಮಗಳು ನಾನು.
ರಾಜಾಜಿನಗರದಲ್ಲಿ ಡಾ.ರಾಜ್ ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ ನಾಮಕರಣಕ್ಕೆ ನಾನು ಸಹ ಪಾಲಿಕೆಯಲ್ಲಿ ನಿರ್ಣಯ ಮಾಡಲು ಮಹತ್ವಪೂರ್ಣ ಪಾತ್ರವಹಿಸಿದ್ದೇ.
ಹಿರಿಯ ಕನ್ನಡ ಪರ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಪಿಂಚಣಿ ನೀಡಿ, ಅವರನ್ನ ಗೌರವಿಸಬೇಕು ಎಂದು ಹೇಳಿದರು.
ಕ.ಸಾ.ಪ ನೂತನ ಎನ್.ರಾಧಕೃಷ್ಣ ರವರು ಮಾತನಾಡಿ ಎಲ್ಲರು ಕನ್ನಡತನ ಮೆರೆಯಬೇಕು. ರಾಜ್ಯದಲ್ಲಿ ಅಧಿಕೃತ ಭಾಷೆಯಾಗಿ ಕನ್ನಡವಿದೆ ಅದಕ್ಕೆ ಗೌರವ ಕೊಡಬೇಕು.
ರಾಜ್ಯದಲ್ಲಿ ಅನ್ಯ ಭಾಷಿಗರು ಸಹ ಕನ್ನಡ ಬಳಸಬೇಕು, ಗೌರವ ಕೊಡಬೇಕು. ಕನ್ನಡಿಗರು ಉದಾರ ಮನಸ್ಸಿನವರು.
ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದರೆ ನಮ್ಮ ಭಾಷೆ ಎಷ್ಟು ಶ್ರೀಮಂತವಾಗಿದೆ ಎಂದು ತಿಳಿಯಬೇಕು ಎಂದು ಹೇಳಿದರು.
