--Ads--

ಫೆಬ್ರವರಿ 8 ಕ್ಕೆ ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ ಸಾಧಕರಿಗೆ ಪ್ರಶಸ್ತಿ ಪ್ರದಾನ :ಡಾ.ಎಸ್. ರಾಮಲಿಂಗೇಶ್ವರ

On: February 6, 2026 5:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಫೆಬ್ರವರಿ 8 ಕ್ಕೆ ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ ಸಾಧಕರಿಗೆ ಪ್ರಶಸ್ತಿ ಪ್ರದಾನ :ಡಾ.ಎಸ್. ರಾಮಲಿಂಗೇಶ್ವರ

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇದೇ ಫೆಬ್ರವರಿ 8 ನೇ ತಾರೀಖು ಭಾನುವಾರ ಬೆಳಗ್ಗೆ 9: 00 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ ಆಯೋಜಿಸಿದೆ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ ( ಸಿಸಿರಾ) ತಿಳಿಸಿದ್ದಾರೆ .

ಸಿಸಿರಾ ಮಾತಾನಾಡುತ್ತಾ  ಸಮ್ಮೇಳನ ಅಧ್ಯಕ್ಷರಾಗಿ ಕವಿ, ಪ್ರಾಧ್ಯಾಪಕ, ಕೃಷಿಕರೂ ಆಗಿರುವ ಡಾ.ಎಂ.ಆರ್.ಉಪೇಂದ್ರ ಕುಮಾರ್ ಆಯ್ಕೆ ಮಾಡಲಾಗಿದ್ದು, ಸಮಾರಂಭವನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಉದ್ಘಾಟಿಸುವರು,

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ‌ ಸಮಾಜ ಸೇವಕ ಶಶಿಕಾಂತ್ ರಾವ್ ವಹಿಸುವರು. ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನ ಇಂದಿರಾ ಕೃಷ್ಣಪ್ಪ ಅವರು ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ ‘ಕಾಲದ ಜೊತೆ ನಾನೂ’ ಕೃತಿ ಲೋಕಾರ್ಪಣೆ ಮಾಡುವರು.

ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್ ಪ್ರದಾನ ಮಾಡುವರು.

ಮಧ್ಯಾಹ್ನ ನಡೆಯುವ ಕವಿಗೋಷ್ಠಿ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಚಿಂತಕ ಡಾ.ಹುಲಿಕುಂಟೆ ಮೂರ್ತಿ ವಹಿಸುವರು, ಕೃಷಿ ಇಲಾಖೆ ವಿಶ್ರಾಂತ ನಿರ್ದೇಶಕ ಮ.ವೀ.ಶಿವಪ್ರಸಾದ್ ಬಿಎಂಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ ಮಾಡುವರು.

ಕವಯಿತ್ರಿ ಆಶಾ ಶಿವು ಅವರು ವಿಜಯನಗರ ಜಿಲ್ಲೆಯ ಲೇಖಕ ಡಾ.ಹಾದಿಮನಿ ರಮೇಶ್ ಅವರ ಕೃತಿ ಲೋಕಾರ್ಪಣೆ ಮಾಡುವರು,

ಸಮಾರೋಪದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಜಿ.ಸುಶೀಲಮ್ಮ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡುವರು, ಹಿರಿಯ ಲೇಖಕಿ ಡಾ.ಲಲಿತಾ ಹೊಸಪ್ಯಾಟಿ ಅವರು ಸಮಾರೋಪ ನುಡಿಗಳಾಡುವರು.

ಹಿರಿಯ ನ್ಯಾಯವಾದಿ ನಂಜಪ್ಪ ಕಾಳೇಗೌಡ, ಶಿಕ್ಷಣ ತಜ್ಞೆ ಪ್ರೊ.ಬಿ.ಕೆ.ವಿದ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ.ಆರ್.ವಾದಿರಾಜು, ಜಯಶ್ರೀ ರಾಜು, ಶಾಂತಿ ವಾಸು ಮುಂತಾದವರು ವಿಶೇಷ ಆಹ್ವಾನಿತರಾಗಿ ಇರುತ್ತಾರೆ.

ಜೊತೆಗೆ ಸಾಂಸ್ಕೃತಿಕ ಗಾಯನ, ನೃತ್ಯ ಕಾರ್ಯಕ್ರಮಗಳೂ ಇದ್ದು ಸಮಾರಂಭಕ್ಕೆ ಸಾಹಿತ್ಯ ಸಂಸ್ಕೃತಿ ಪ್ರಿಯರು ಆಗಮಿಸಿ ಯಶಸ್ವಿಗೊಳಿಸಿ‌ಲು ಸಂಸ್ಥೆಯ ಅಧ್ಯಕ್ಷರು ಡಾ.ಎಸ್.ರಾಮಲಿಂಗೇಶ್ವರ ( ಸಿಸಿರಾ) ಮನವಿ ಮಾಡಿದ್ದಾರೆ.

WhatsApp

Join Now

Telegram

Join Now

Instagram

Join Now