ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ : ಚಿತ್ರ ನಟ ನವೀನ್ ಶಂಕರ್

ವಿಜಯ ದರ್ಪಣ ನ್ಯೂಸ್

ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ :ಚಿತ್ರ ನಟ ನವೀನ್ ಶಂಕರ್

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ : ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಆಂಗ್ಲ ಭಾಷೆ ವ್ಯವಹಾರಿಕವಾಗಿ ಬಳಸಿ, ಸಾಂಸಾರಿಕ ಬದುಕಿನಲ್ಲಿ ಮಾತೃಭಾಷೆಗೆ ಕನ್ನಡವನ್ನು‌ ಮಾತನಾಡಿ, ಅನ್ಯ ಭಾಷಿಗರಿಗೂ ಕನ್ನಡ ಕಲಿಸಲು ಮುಂದಾಗಬೇಕು ಎಂದು ಭಾರತೀಯ ಚಿತ್ರನಟ ನವೀನ್ ಶಂಕರ್ ತಿಳಿಸಿದರು.

ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ನಲ್ಲೂರು ಗ್ರಾಮದಲ್ಲಿರುವ ರಂಗಭಾರತ್ ಅಡಿ ಏಕತ್ ಖಾಸಗಿ ಶಾಲೆಯ 2ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟನೆ ಬಳಿಕ ಮಾತನಾಡಿ, ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕ ರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಾಕ್ಷಿಯಾಗುವರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಾಡು, ನುಡಿ, ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯ ಸಾದ್ಯವೆಂದು ತಿಳಿಸಿದರು.

ಪೋಷಕರು ತಮ್ಮ ಮಕ್ಕಳಿಗೆ ವ್ಯಕ್ತಿ ವಿಕಸನಕ್ಕೆ ಬೇಕಾಗುವ ವಿಚಾರಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ನಮ್ಮ ಅಜ್ಜ – ಅಜ್ಜಿ ನೀತಿಕಥೆ, ಪಂಚತಂತ್ರ ಕಥೆಗಳನ್ನು ಹೇಳುತ್ತ ನಮ್ಮನ್ನು ನಿದ್ದೆಗೆ ಜಾರಿಸುತಿದ್ದರು. ಅದು ನಮ್ಮೆಲ್ಲರಲೂ ಹಾಗೂ ಸ್ನೇಹಿತರೊಂದಿಗೆ ಪರಸ್ಪರ ಹೇಳಿಕೊಳ್ಳುತ್ತ ಬಾಲ್ಯದ ಸಿಹಿ-ಕಹಿ ಮೆಲುಕು ಹಾಕಿಕೊಳ್ಳಲು ಸಾದ್ಯವಾಗುತ್ತಿದೆ.

ಪೋಷಕರು ತಮ್ಮ ದುಡಿಮೆಯ ಜತೆಗೆ ಮಗು ಕಲಿಕೆಯ ಪ್ರಗತಿ ಸಾಗುತ್ತಿರುವ ರೀತಿ-ನೀತಿ, ಅವರ ಆಟ-ಪಾಠದಲ್ಲಿ ತಮ್ಮನ್ನು ತಾವು ಕೆಲ ಸಮಯ ಮೀಸಲಿಡಬೇಕೆಂದು ಪೋಷಕರಿಗೆ ಭಾರತೀಯ ಚಲನಚಿತ್ರನಟಿ ಅರ್ಚನಾ ಜೋಷಿ ಕಿವಿಮಾತು ಹೇಳಿದರು.

ಏಕತ್ ಖಾಸಗಿ ಶಾಲಾ ಸಂಸ್ಥಾಪಕ ನಾಗೇಶ್ ಮಾತನಾಡಿ, ನಮ್ಮಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಕ್ರೀಡೆ, ಸಾಹಿತ್ಯ, ದೇಶದ ವಿವಿಧ ಶೈಲಿಯ ಮನರಂಜನೆ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತಿದ್ದೇವೆ. ಮಗುವಿನ ಪ್ರತಿಬೆಗೆ ಅನುಗುಣವಾಗಿ ನಮ್ಮ ಶಿಕ್ಷಕವೃಂದ ಕಲಿಕೆ ಹಾಗೂ ಫಲಿತಾಂಶದಲ್ಲಿ ಮುನ್ನಡೆ ಸಾಧಿಸುವಲ್ಲಿ ಹಾದಿಯಲ್ಲಿ ಕೊಂಡ್ಯುತಿದ್ದಾರೆ. ಈಗಾಗಲೇ ಶಾಲಾ ದಾಖಲಾತಿ ಪ್ರಾರಂಭವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ದಾಖಲಿಸಬಹುದಾಗಿದೆ ಎಂದು ತಿಳಿಸಿದರು.

ಈ ವೇಳೆ ಏಕತ್ ಖಾಸಗಿ ಶಾಲೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ನಾಗೇಶ್, ಕಾರ್ಯದರ್ಶಿ ಮೋನಿಷಾ ಮಧನ್, ಪ್ರಾಂಶುಪಾಲೆ ಹೆಮಲತಾ ಕಠಾರಿ,
ಶಿಕ್ಷಕರು, ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು, ಸಮಾರಂಭದಲ್ಲಿ ಶಾಲಾ ಮಕ್ಕಳು ವಿವಿಧ ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.