ಬೆಂಗಳೂರು ಗ್ರಾ.ಜಿಲ್ಲೆ ವ್ಯಾಪ್ತಿಯಲ್ಲಿ 36 ವಿಶೇಷ ಮತಗಟ್ಟೆಗಳ ಸ್ಥಾಪನೆ

ವಿಜಯ ದರ್ಪಣ ನ್ಯೂಸ್ 

ಬೆಂಗಳೂರು.ಗ್ರಾ ಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 36 ವಿಶೇಷ ಮತಗಟ್ಟೆಗಳ ಸ್ಥಾಪನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 25 :- ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ಹೆಚ್ಚಿಸುವ ಸಲುವಾಗಿ ಹಾಗೂ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಸಲುವಾಗಿ ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲಾಗಿದೆ.

36 ವಿಶೇಷ ಮತಗಟ್ಟೆಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 04 ಯುವ ಮತಗಟ್ಟೆಗಳು, 20 ಮಹಿಳಾ ಮತಗಟ್ಟೆಗಳು(ಸಖಿ), ೦4 ವಿಶೇಷ ಚೇತನ ಮತಗಟ್ಟೆಗಳು, 04 ವಿಷಯಾಧಾರಿತ ಮತಗಟ್ಟೆಗಳು , 04 ಮಾದರಿ ಮತಗಟ್ಟೆಗಳು ಸೇರಿ ಒಟ್ಟು 36 ವಿಶೇಷ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.

ವಿಶೇಷ ಮತಗಟ್ಟೆಗಳ ವಿವರ ಕೆಳಕಂಡಂತಿದೆ

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಯುವ ಮತಗಟ್ಟೆಗಳು -1:- ಮತಗಟ್ಟೆ ಸಂಖ್ಯೆ -232 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಮಂಗಲ.

ಮಹಿಳಾ ಸಿಬ್ಬಂದಿ ನಿರ್ವಹಿಸುವ (ಸಖಿ) ಮತಗಟ್ಟೆಗಳು05:- ಮತಗಟ್ಟೆ ಸಂಖ್ಯೆ-103, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ರೂಂ ನಂ-1 ದೇವನಹಳ್ಳಿ ರಸ್ತೆ , ವಿಜಯಪುರ ಟೌನ್, ಮತಗಟ್ಟೆ ಸಂಖ್ಯೆ -85 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ- 2 ಕಾರಹಳ್ಳಿ, ಮತಗಟ್ಟೆ ಸಂಖ್ಯೆ 200 ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ-2 ಬೆಂಗಳೂರು -ಬಳ್ಳಾರಿ ರೋಡ್ ದೇವನಹಳ್ಳಿ ಟೌನ್, ಮತಗಟ್ಟೆ ಸಂಖ್ಯೆ 29 ಉಪ ತಹಶೀಲ್ದಾರ್ ಕಚೇರಿ ತೂಬಗೆರೆ ಕೊಠಡಿ ಸಂಖ್ಯೆ -1, ಮತಗಟ್ಟೆ ಸಂಖ್ಯೆ 290 ಶ್ರೀ ಸಿದ್ದಗಂಗಾ ಸಯುಕ್ತ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಬೂದಿಗೆರೆ ಕೊಠಡಿ ಸಂಖ್ಯೆ 2.

ವಿಶೇಷ ಚೇತನ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆ 01:-ಮತಗಟ್ಟೆ ಸಂಖ್ಯೆ 199-ಸರ್ಕಾರಿ ಪದವಿಪೂರ್ವ ಕಾಲೇಜು ಕೊಠಡಿ ಸಂಖ್ಯೆ-1 ಬೆಂಗಳೂರು ಬಳ್ಳಾರಿ ರಸ್ತೆ ದೇವನಹಳ್ಳಿ.

ಮಾದರಿ ಮತಗಟ್ಟೆ-01:-

ಮತಗಟ್ಟೆ ಸಂಖ್ಯೆ-80 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ವೆಂಕಟಗಿರಿ ಕೋಟೆ.

ವಿಶೇಷ/ವಿಷಯಾಧಾರಿತ ಮತಗಟ್ಟೆ-01:-

ಮತಗಟ್ಟೆ ಸಂಖ್ಯೆ-238 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಅಣ್ಣೇಶ್ವರ.

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ

ದೊಡ್ಡಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಸಲುವಾಗಿ ಒಂದು ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ -238 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಾಪುರ.

ಮಹಿಳಾ ಸಿಬ್ಬಂದಿ ನಿರ್ವಹಿಸುವ ಸಲುವಾಗಿ 5 ಮತಗಟ್ಟೆಗಳು ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-104 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-2,ಕೋನಘಟ್ಟ., ಮತಗಟ್ಟೆ ಸಂಖ್ಯೆ -241 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ -2, ಬಾಶೆಟ್ಟಹಳ್ಳಿ , ಮತಗಟ್ಟೆ ಸಂಖ್ಯೆ-122 ‌ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-4,ಖಾಸಬಾಗ್ ದೊಡ್ಡಬಳ್ಳಾಪುರ, ಮತಗಟ್ಟೆ ಸಂಖ್ಯೆ-138 ಸರ್ಕಾರಿ ಪ್ರೌಢಶಾಲೆ ಹೊಸ ಕಟ್ಟಡ ಕೊಠಡಿ ಸಂಖ್ಯೆ-1 ಅರಳುಮಲ್ಲಿಗೆ ಬಾಗಿಲು ದೊಡ್ಡಬಳ್ಳಾಪುರ, ಮತಗಟ್ಟೆ ಸಂಖ್ಯೆ-209 ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ-1, ದೊಡ್ಡ ಬೆಳವಂಗಳ.

ವಿಶೇಷ ಚೇತನರು ನಿರ್ವಹಿಸುವ ಸಲುವಾಗಿ ಒಂದು ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ 192 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1, ದರ್ಗಾ ಜೋಗಿಹಳ್ಳಿ.

ಮಾದರಿ ಮತಗಟ್ಟೆ ಒಂದು ತೆರೆಯಲಾಗಿದ್ದು ಮತಗಟ್ಟೆ ಸಂಖ್ಯೆ-200 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1, ಅರಳುಮಲ್ಲಿಗೆ.

ವಿಶೇಷ/ವಿಷಯಾಧಾರಿತ ಮತಗಟ್ಟೆ ಒಂದು ತೆರೆಯಲಾಗಿದ್ದು, ಮತಗಟ್ಟೆ ಸಂಖ್ಯೆ-271 ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಣಸವಾಡಿ.

178- ಹೊಸಕೋಟೆ ವಿಧಾನಸಭಾ ಕ್ಷೇತ್ರ

ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 05:-

ಮತಗಟ್ಟೆ ಸಂಖ್ಯೆ. 251 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂ.1 ಸಮೇತನಹಳ್ಳಿ, ಮತಗಟ್ಟೆ ಸಂಖ್ಯೆ. 162 ಸ್ವತಂತ್ರ ಪದವಿ ಪೂರ್ವ ಕಾಲೇಜು ದಕ್ಷಿಣ ಭಾಗ-1 ಕೊಠಡಿ ಸಂ. 4 ಹೊಸಕೋಟೆ ಟೌನ್, ಮತಗಟ್ಟೆ ಸಂಖ್ಯೆ. 14 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 2 ನೆಲವಾಗಿಲು, ಮತಗಟ್ಟೆ ಸಂಖ್ಯೆ. 30 ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ. 1 ನಂದಗುಡಿ, ಮತಗಟ್ಟೆ ಸಂಖ್ಯೆ. 175 ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಖಾಜಿಮೊಹಲ್ಲ, ಪೂರ್ವ ಭಾಗ- ಕೊಠಡಿ ಸಂಖ್ಯೆ. 1 ಹೊಸಕೋಟೆ ಟೌನ್,

ವಿಶೇಷ ಚೇತನರ ಮತಗಟ್ಟೆಗಳು:-

ಮತಗಟ್ಟೆ ಸಂಖ್ಯೆ. 154 ಸ್ವತಂತ್ರ ಪದವಿ ಪೂರ್ವ ಕಾಲೇಜು (ಪೂರ್ವ ಭಾಗ-1 ಕೊಠಡಿ ಸಂಖ್ಯೆ. 1) ಎಮ್.ವ್ಹಿ ಎಕ್ಸ್ಟೆನ್ಷನ್ ಹೊಸಕೋಟೆ ಟೌನ್.

ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 145 ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಎಮ್.ವ್ಹಿ ಎಕ್ಸ್ಟೇನ್ಷನ್ ಕೊಠಡಿ ಸಂ. 1 ಪೂರ್ವ ಭಾಗ) ಹೊಸಕೋಟೆ.

ಮಾದರಿ ಮತಗಟ್ಟೆಗಳು 1:-

ಮತಗಟ್ಟೆ ಸಂಖ್ಯೆ. 165 ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ಕೊಠಡಿ ಸಂಖ್ಯೆ. 1 ಹೊಸಕೋಟೆ ಟೌನ್.

ವಿಶೇಷ/ವಿಷಯಾಧಾರಿತ ಮತಗಟ್ಟೆಗಳು 1:-

ಮತಗಟ್ಟೆ ಸಂಖ್ಯೆ. 245 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೊಠಡಿ ಸಂಖ್ಯೆ. 1 ಮಲ್ಲಸಂದ್ರ) ಸಮೇತನಹಳ್ಳಿ.

181-ನೆಲಮಂಗಲ ವಿಧಾನಸಭಾ ಕ್ಷೇತ್ರ

ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 1:-

ಮತಗಟ್ಟೆ ಸಂಖ್ಯೆ. 183 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ ಭಾಗ, ಕೊಠಡಿ ಸಂಖ್ಯೆ. 2 ಅಡೆಪೇಟೆ) ನೆಲಮಂಗಲ.

ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 5:-

ಮತಗಟ್ಟೆ ಸಂಖ್ಯೆ. 233 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಚಿಪುರ, ಮತಗಟ್ಟೆ ಸಂಖ್ಯೆ. 46 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 3 (ಉತ್ತರ ಭಾಗ) ಸೊಂಪುರ-3, ಮತಗಟ್ಟೆ ಸಂಖ್ಯೆ. 148 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 1 ಬಸನಹಳ್ಳಿ-1, ಮತಗಟ್ಟೆ ಸಂಖ್ಯೆ. 250 ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಸೋಲೂರು-4, ಮತಗಟ್ಟೆ ಸಂಖ್ಯೆ. 52 ಸರ್ಕಾರಿ ಹಿರಿಯ ಹೊಸ ಪ್ರಾಥಮಿಕ ಶಾಲೆ ಹೊನ್ನೇನಹಳ್ಳಿ.

ವಿಶೇಷ ಚೇತನರ ಮತಗಟ್ಟೆಗಳು 1:-

ಮತಗಟ್ಟೆ ಸಂಖ್ಯೆ. 176 ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ. 2 ನೆಲಮಂಗಲ ಟೌನ್-5.

ಮಾದರಿ ಮತಗಟ್ಟೆಗಳು 1:-

ಮತಗಟ್ಟೆ ಸಂಖ್ಯೆ. 47 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 4 (ಉತ್ತರ ಭಾಗ) ಸೋಂಪುರ-4.

ವಿಶೇಷ/ವಿಷಯಾಧಾರಿತ ಮತಗಟ್ಟೆಗಳು 1:-

ಮತಗಟ್ಟೆ ಸಂಖ್ಯೆ. 88 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿವಗಂಗೆ.

ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಿಶೇಷ ವಿಷಯಾಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ತೋಟಗಾರಿಕೆ, ಪುಷ್ಪ ಕೃಷಿ ವಿಶೇಷ ವಿಷಯಾಧಾರಿತವಾಗಿ ಚಕ್ಕೊತ,ನೀಲಿ ದ್ರಾಕ್ಷಿ ಮತ್ತು ಗುಲಾಬಿ ಹೂವಿನ ಆಕರ್ಷಕ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-238 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಅಣ್ಣೇಶ್ವರ.

ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಸಾಂಸ್ಕೃತಿಕ ವಿಷಯಾಧಾರಿತವಾದ ಸುಗ್ಗಿ ಹಬ್ಬ,ಎತ್ತಿನ ಬಂಡಿಯ ಆಕರ್ಷಕ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-88 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಿವಗಂಗೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ರೇಷ್ಮೆ ಸೀರೆ ತಯಾರಿಕೆ ವಿಶೇಷ ವಿಷಯಾಧಾರಿತ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-271 ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಣಸವಾಡಿ.

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸಾಂಸ್ಕೃತಿಕ ವಿಷಯಾಧಾರಿತವಾದ ಕರಗ,ಡೈರಿ ಉತ್ಪನ್ನಗಳು ಮತ್ತು ಫಲಪುಷ್ಪ ಅಲಂಕಾರಿಕ ಆಕರ್ಷಕ ಮತಗಟ್ಟೆಯನ್ನು ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-245 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1, ಮಲ್ಲಸಂದ್ರ ಸಮೇತನಹಳ್ಳಿ.