ನಗರ್ತ ಯುವಕ ಸಂಘದಿಂದ ಬಸವಣ್ಣನವರ ಅದ್ದೂರಿ ಮೆರವಣಿಗೆ

ವಿಜಯ ದರ್ಪಣ ನ್ಯೂಸ್ 

ಶ್ರೀ ಜಗಜ್ಯೋತಿ ಬಸವಣ್ಣನವರ ಅದ್ದೂರಿ ಮೆರವಣಿಗೆ-
ನಗರ್ತ ಯುವಕ ಸಂಘವು ಸುಮಾರು 25 ವರ್ಷಗಳಿಂದ ಯಶಸ್ವಿಯಾಗಿ ಬಸವ ಜಯಂತಿ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆಂದು ಕಾರ್ಯಧ್ಯಕ್ಷ
ಜೆ ಆರ್ ಪಿ ಮುರುಳೀಧರ್ ತಿಳಿಸಿದರು.

 

 ವಿಜಯಪುರ ಪಟ್ಟಣದಲ್ಲಿರುವ ಗಾಂಧಿ ಚೌಕದಲ್ಲಿ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಯುವಕ ಸಂಘ ಮತ್ತು ಶ್ರೀ ನಗರೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಬಸವದಳ ಸಂಯುಕ್ತ ಆಶ್ರಯದಲ್ಲಿ ಕ್ರಾಂತಿಯೋಗಿ ವಿಶ್ವಗುರು ಬಸವಣ್ಣನವರ 891ನೆಯ ಜಯಂತಿಯ ಅಂಗವಾಗಿ ಜಗಜ್ಯೋತಿ ಬಸವಣ್ಣನವರ ಪಂಚಲೋಹ ಮೂರ್ತಿಯನ್ನು ಆನೇಕಲ್ ನಗರದ ಹಂಸ ರಥದೊಂದಿಗೆ ಕೇರಳದ ಸುಪ್ರಸಿದ್ಧ ಸಾಗರಂ ಕಲಾ ತಂಡ ಸಮಿತಿಯ ಚಂಡೆ ವಾದ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಹಂಸ ವಾಹನ ಪಲ್ಲಕ್ಕಿ ಸೇವೆಯನ್ನು ಪುರಸಭಾ ಸದಸ್ಯ ಎಂ. ಸತೀಶ್ ಕುಮಾರ್ ಮತ್ತು ಸಹೋದರರು ಚೆಂಡೆ ವಾದ್ಯ ಸೇವೆ ನವೀನ್ ಕುಮಾರ್ ಎ ಆರ್ ಸಿ ಚಿಕ್ಕ ವೀರಣ್ಣ ಮಿಠಾಯಿ ಅಂಗಡಿ ಮಾಲೀಕ ಸಿ ಸುರೇಶ್ ಅಜಿತ್ ರವರನ್ನು , ಬಾದಾಮಿ ಹಾಲು ಸೇವೆ ರಾತ್ರಿ ದಾಸೋಹ ಸೇವೆಯನ್ನು ಲಿಂಗೈಕ್ಯ ಶಾರದಮ್ಮ ಚಿಕ್ಕ ಗುಂಡಪ್ಪ ಈ ರುದ್ರಪ್ಪ ನವರ ಸ್ಮರಣಾರ್ಥವಾಗಿ ಆರ್ ರಾಜಣ್ಣ ಮತ್ತು ಸಹೋದರರು ಸೇವೆಯನ್ನು ನಡೆಸಿಕೊಟ್ಟ ಸೇವಾಕರ್ತರನ್ನು  ಸನ್ಮಾನಿಸಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ನಗರ್ತ ಯುವಕ ಸಂಘದ ಅಧ್ಯಕ್ಷರು ಬೇಕರಿ ಮಂಜುನಾಥ್ ಮಹಂತಿನ ಮಠದ ಅಧ್ಯಕ್ಷ ಪುನೀತ್ ಶಿವಕುಮಾರ್ ಗೌರವ ಕಾರ್ಯದರ್ಶಿ ವಿ ವಿಶ್ವನಾಥ್ ಬೇಕರಿ ಶಿವಣ್ಣ ಬೇಕರಿ ಆನಂದಪ್ಪ ವಿ ಬಸವರಾಜ್ ಮತ್ತು  ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.