--Ads--

ಮೃತ್ಯುಂಜಯ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ…

On: December 27, 2024 4:47 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಮೃತ್ಯುಂಜಯ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ…

ಮಡಿಕೇರಿ: ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ನೆಲೆ ನಿಂತಿರುವ ಮೃತ್ಯುಂಜಯ ದೇವಾಲಯದಲ್ಲಿ ವಾರ್ಷಿಕ ಪೂಜೆಯ ಸಂದರ್ಭ ಎರಡು ವರ್ಗದವರ ನಡುವೆ ಘರ್ಷಣೆ ನಡೆದಿರುವ ಘಟನೆ ವರದಿಯಾಗಿದೆ.

ಒಂದು ವರ್ಗದ ಜನರು ಸಾಂಪ್ರದಾಯಿಕ ಉಡುಪನ್ನು ತೊಟ್ಟುಕೊಂಡು ದೇವಾಲಯದ ಒಳಗೆ ಮತ್ತೊಂದು ಗುಂಪು ಪ್ರವೇಶಿಸದಂತೆ ನಿರ್ಬಂಧ ಹೇರಿದಾಗ ಘರ್ಷಣೆ ನಡೆದಿದೆ. ಸಾಂಪ್ರದಾಯಿಕ ಉಡುಪು ತೊಟ್ಟವರ ಜನಾಂಗದವರ ಸಂಖ್ಯೆ ಈ ಭಾಗದಲ್ಲಿ ಕಡಿಮೆಯೂ ಕೂಡ ಇದೆ ಎಂದು ಹೇಳಲಾಗಿದೆ.

ನಂತರ ಅ ವರ್ಗದ ಜನರು ಶಾಂತಿ ಕಾಪಾಡಲು ದೇವಾಲಯದ ಹೊರಬಂದು ಈ ತೀರ್ಮಾನವನ್ನು ಪ್ರತಿಪಟಿಸಿದ್ದಾರೆ.

ಘರ್ಷಣೆಯ ಸಂದರ್ಭ ಕಡಿಮೆ ಸಂಖ್ಯೆಯಲ್ಲಿರುವ ಜನಾಂಗದ ಮೇಲೆ ಕೆಲವರಿಂದ ಹಲ್ಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ.

ಕೊಡಗಿನಲ್ಲಿ ಮತ್ತೆ ಪುನಹ ಜನಾಂಗೀಯ ಘರ್ಷಣಕ್ಕೆ ಇಂದಿನ ಘಟನೆ ಸಾಕ್ಷಿ ಆಗಬಹುದೇನೋ ಎಂಬ ಆತಂಕದಲ್ಲಿ ಹಲವು ಪ್ರಜ್ಞಾವಂತರು ಇದ್ದಾರೆ.

WhatsApp

Join Now

Telegram

Join Now

Instagram

Join Now