ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಮೌಕ್ತಿಕಾಂಬ ಕರಗ ಮಹೋತ್ಸವ
ವಿಜಯ ದರ್ಪಣ ನ್ಯೂಸ್….
ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಮೌಕ್ತಿಕಾಂಬ ಕರಗ ಮಹೋತ್ಸವ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಮೌಕ್ತಿಕಾಂಬ ದೇವಾಲಯದಲ್ಲಿ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ಸಂಪನ್ನ ಗೊಂಡಿದ್ದು. ನೂರಾರು ಭಕ್ತರು ಐತಿಹಾಸಿಕ ಕರಗ ಉತ್ಸವ ನೋಡಿ ಕಣ್ತುಂಬಿಕೊಂಡರು. ಈ ಬಾರಿಯ ಕರಗ ಮಹೋತ್ಸವದಲ್ಲಿ ದಾಖಲೆಗಿಂತ ಮಿಗಿಲಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ವಿಶೇಷ ವಾಗಿತ್ತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆರಂಭ ವಾದ ಅದ್ಧೂರಿ ಕಗರ ಉತ್ಸವ ಬೆಳಗ್ಗೆ 9. 35 ರ ಹೊತ್ತಿಗೆ ಕರಗವು ದೇವಾಲಯಕ್ಕೆ ಪ್ರವೇಶವಾಗಿತ್ತು.
ಉತ್ಸವಕರ್ತರು ಮತ್ತು ವೀರಕುಮಾರರು ಪೂಜಾರಿ ಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಮೊಳಗಿಸಿದರು.
ಕರಗ ಹಿನ್ನೆಲೆಯಲ್ಲಿ ಧರ್ಮರಾಯ ಸ್ವಾಮಿ ದೇವ ಸ್ಥಾನದ ಆವರಣದಲ್ಲಿ ಮಲ್ಲಿಗೆ ಹಾಗೂ ಕರ್ಪೂರದ ಪರಿಮಳ ಘಮಘಮಿಸಿತ್ತು. ಇಷ್ಟಾರ್ಥ ಗಳ ಸಿದ್ದಿಗಾಗಿ ದೇವಾಲಯದ ಮುಂದೆ ಕರ್ಪೂರ ವನ್ನು ಹಚ್ಚುವು ಮೂಲಕ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಅರ್ಪಿಸಿದರು.
ದೇವನಹಳ್ಳಿಯ ಹೃದಯ ಭಾಗದಲ್ಲಿ ಮುಕ್ತಿ ಕಾಂಬ ದೇವಾಲಯವಿದ್ದು ತಾಯಿಯ ಕುಲಬಾಂಧವರು ಐದು ವಾರ್ಡ್ ಗಳಲ್ಲಿ ಶ್ರದ್ಧಾ ಭಕ್ತಿಯಿಂದ ಹಲವಾರು ದಶಕಗಳಿಂದ ಕರಗ ಮಹೋತ್ಸವವನ್ನು ಹಮ್ಮಿಕೊಂಡು ಬಂದಿದ್ದೇವೆ. ಸರ್ವಧರ್ಮಗಳು ಸರ್ವ ಜನಾಂಗವು ಕಾರ್ಯಕ್ರಮ ಮಹೋತ್ಸವದಲ್ಲಿ ಪಾಲ್ಗೊಂಡು ಅಮ್ಮನವರಲ್ಲಿ ಇಷ್ಟಾರ್ಥ ಸೇವೆಗಳನ್ನು ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳು ತ್ತಿರುವುದು ಸಂತಸ ತಂದಿದೆ ಎಂದು ಧಾರ್ಮಿಕ ಮುಖಂಡರು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಪುಲಕೇಶಿ ವಿಧಾನಸಭಾ ಕ್ಷೇತ್ರದ ಶಾಸಕ ಎಸಿ ಶ್ರೀನಿವಾಸ್,ಮಾಜಿ ಪಿಳ್ಳಮುನಿಶಾಮಪ್ಪ, ಚಂದ್ರಣ್ಣ, ಬೆಂಗಳೂರು ಕರಗದ ಪೂಜಾರಿ ಜ್ಙಾನೇಂದ್ರ, ಮೌಕ್ತಿಕಾಂಬ ದೇವಾಲಯ ಅದ್ಯಕ್ಷ ವಿಜಯ ಕುಮಾರ್, ಜನಾಂಗದ ಮಹಾಸಭಾ ಖಜಾಂಚಿ ರಂಗಪ್ಪ, ಲೋಕೇಶ್, ಕರಗದ ಪೂಜಾರಿ ಉಮೇಶ್, ಮೌಕ್ತಿಕಾಂಬ ವನ್ಹಿಕುಲ ಕ್ಷತ್ರಿಯರ ತಿಗಳರ ಸಂಘದ ರಾಜ್ಯ ಉಪಾದ್ಯಕ್ಷ ಶಾಮಣ್ಢ, ತಾಲೂಕು ಅದ್ಯಕ್ಷ ಗೋಪಾಲಕೃಷ್ಣ, ಪುರಸಭೆ ಅದ್ಯಕ್ಷ ಮುನಿಕೃಷ್ಣ, ಸದಸ್ಯರಾದ ಬಾಂಬೆ ನಾರಾಯಣ ಸ್ವಾಮಿ, ಎಸ್. ಸಿ. ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಮಂಜುನಾಥ್,ಆವತಿ ಪಂ. ಸದಸ್ಯ ರಾಮಣ್ಣ, ತಾಲ್ಲೂಕಿನ ಎಲ್ಲ ಕುಲ ಬಾಂದ ವರು ಸೇರಿದಂತೆ ಕಮಿಟಿ ಪದಾಧಿಕಾರಿಗಳು,ಮರಳು ಬಾಗಿಲಿನ ಹಿರಿಯರ ಸಮ್ಮುಖದಲ್ಲಿ ಅನ್ನ ಸಂತರ್ಪಣೆ ಸಹಕರಿ ಸಿದ ದಾನಿಗಳು ಹಾಗೂ ವಾರ್ಡಿನ ಜನಾಂಗದ ಮುಖಂಡರಾದ, ಮೊಟಪ್ಪ, ಮುನಿರಾಜಪ್ಪ, ನಾರಾಯಣ್, ಜಗದೀಶ್, ಕುಮಾರ್, ಅಶೋಕ್, ನಂಜುಂಡಪ್ಪ, ಆಂಜಿನಪ್ಪ, ವಿಜಯ ಕುಮಾರ್, ಲೋಕೇಶ್, ವಿಜಯಕುಮಾರ್, ಉಮೇಶ್, ಶ್ರೀನಿವಾಸ್, ಪೆದ್ದಣ್ಣ, ರಾಮು, ಲಕ್ಷ್ಮಣ, ರವಿ, ಮನು, ಪ್ರಸಾದ್ ಮತಿತರರು ಇದ್ದರು.