ರೈತ ಮತ್ತು ಸೈನಿಕ ಇಬ್ಬರು ಕಣ್ಣುಗಳಿದ್ದಂತೆ: ಸೀಕಲ್ ಆನಂದಗೌಡ

ವಿಜಯ ದರ್ಪಣ ನ್ಯೂಸ್….

ರೈತ ಮತ್ತು ಸೈನಿಕ ಇಬ್ಬರು ಕಣ್ಣುಗಳಿದ್ದಂತೆ: ಸೀಕಲ್ ಆನಂದಗೌಡ

ಶಿಡ್ಲಘಟ್ಟ : ದೇಶಕ್ಕೆ ಅನ್ನ ಕೊಡುವ ರೈತ ಮತ್ತು ದೇಶ ಕಾಯುವ ಸೈನಿಕ ಇಬ್ಬರು ಕಣ್ಣುಗಳಿದ್ದಂತೆ ಅವರಿಲ್ಲದ ದೇಶ, ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಹಾಗಾಗಿ ರೈತರಿಂದಲೇ ಶೋಭಾ ಯಾತ್ರೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಬಿಜೆಪಿ ಮುಖಂಡ ಸೀಕಲ್ ಆನಂದಗೌಡ ತಿಳಿಸಿದರು.

ನಗರದ ದಿ.ವೆಂಕಟರಾಯಪ್ಪ ಫ್ಯಾಕ್ಟರಿಯ ಆವರಣದಲ್ಲಿ ಹಸಿರುಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಕಚೇರಿಯಲ್ಲಿ ರೈತ ಮುಖಂಡರಿಗೆ ಶೋಭಾ ಯಾತ್ರೆಯ ಆಹ್ವಾನ ಪತ್ರಿಕೆ ನೀಡಿ ಅವರು ಮಾತನಾಡಿದರು.

ಮೇ-25 ರಂದು ನಗರದಲ್ಲಿ ಶ್ರೀರಾಮ ಶೋಭಾ ಯಾತ್ರೆ ಆಯೋಜಿಸಿದ್ದು, ಜಾತಿ, ಮತ, ಭಾಷೆ ಹಾಗು ಪಕ್ಷ ಬೇದ ಮರೆತು ರೈತ ಬಾಂಧವರು ಸೇರಿದಂತೆ ಎಲ್ಲಾರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್‌ನ ನೇತೃತ್ವದಲ್ಲಿ ರೈತ, ದಲಿತ, ಕನ್ನಡಪರ ಸಂಘಟನೆಗಳ ಸಹಕಾರದಿಂದ ವಿವಿಧ ಸಂಘ ಸಂಸ್ಥೆಗಳು, ನಾಗರಿಕರು, ಹಿಂದು ಬಂಧುಗಳನ್ನು ಶೋಭಾ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.

ವಿಹಿಂಪ ತಾಲೂಕು ಅಧ್ಯಕ್ಷ ಚಲುವರಾಜು ಮಾತನಾಡಿ,
ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್‌ ನ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಯಾತ್ರೆಗೆ ಚಾಲನೆ ನೀಡಲಾಗುವುದು ಅಲ್ಲಿಂದ ಬಸ್ ನಿಲ್ದಾಣದ ಸಲ್ಲಾಪುರಮ್ಮ ದೇವಾಲಯದವರೆಗೂ ಯಾತ್ರೆಯ ಮೆರವಣಿಗೆ ಸಾಗಲಿದೆ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗು ಸೂಲಿಬೆಲೆ ಚಕ್ರವರ್ತಿ ವೇದಿಕೆಯಲ್ಲಿ ಮಾತನಾಡಲಿದ್ದಾರೆ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವವರ ಜರೆ ಹಾಗು ರೈತರ ಸಮಸ್ಯೆ ಇರುವ ಕಡೆ ರೈತ ಸಂಘ ಇರುತ್ತದೆ ಒಳ್ಳೆಯ ಕೆಲಸಗಳು ಎಲ್ಲಿಯೇ ನಡೆದರೂ ಕೈಜೋಡಿಸುತ್ತೇವೆ, ಶೋಭಾಯಾತ್ರೆಯಲ್ಲಿ ರೈತ ಸಮುದಾಯ ಭಾಗವಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬಜರಂಗ ದಳದ ತಾಲ್ಲೂಕು ಸಂಚಾಲಕ ವೆಂಕೋಬರಾವ್,ಡಾ.ಸತ್ಯನಾರಾಯಣರಾವ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ರೈತ ಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್,ವೀರಾಪುರ ಮುನಿನಂಜಪ್ಪ,ಹಿತ್ತಲಹಳ್ಳಿ ರಮೇಶ್, ಎ.ರಾಮಚಂದ್ರ,ಗಾಂಧಿನಗರ ರಾಮಕೃಷ್ಣಪ್ಪ ಮುಂತಾದವರು ಹಾಜರಿದ್ದರು.