ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವ

ವಿಜಯ ದರ್ಪಣ ನ್ಯೂಸ್…..

ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವ

ಶಿಡ್ಲಘಟ್ಟ : ನಗರದ ಶ್ರೀಗಂಗಮ್ಮ ದೇವಾಲಯದಲ್ಲಿ ಆರನೇ
ವರ್ಷದ ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವವು ವೈಭವದೊಂದಿಗೆ ನೆರವೇರಿತು. ನಗರದಾದ್ಯಂತ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತರು ಸೇರಿ ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡರು.

ಮುಳಬಾಗಿಲಿನ ನಾಗರಾಜ್ ಅವರು ತಲೆ ಮೇಲೆ ಹೂವಿನ ಕರಗ ಹೊತ್ತು ಭಕ್ತಿಯಲ್ಲಿ ಮುಳುಗಿ ಕುಣಿದರೆ,ಅವರ ಸುತ್ತಲೂ ನಿಂತಿದ್ದ ಭಕ್ತರೂ ತಮ್ಮ ಸ್ಥಾನದಲ್ಲೇ ಕುಣಿದು ಉಲ್ಲಾಸ ವ್ಯಕ್ತಪಡಿಸಿದರು.

ತಮಟೆಯ ಸದ್ದಿನಲ್ಲಿ ಹಾಗು ಕರಗದ ನೃತ್ಯ ಭಕ್ತರನ್ನು ಕಣ್ಮನ ಸೆಳೆಯಿತು,ದೇವಾಲಯದಲ್ಲಿ ಶ್ರೀಗಂಗಮ್ಮ ಹಾಗೂ ಶ್ರೀದೌಪದಮ್ಮ ದೇವಿಯರಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

ಈ ವೇಳೆ ಶಾಸಕ ಬಿ.ಎನ್.ರವಿಕುಮಾ‌ರ್, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹಾಗೂ ಆನಂದಗೌಡ ಸೇರಿ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾಗಿ ಅಮ್ಮನವರ ದರ್ಶನ ಮಾಡಿದರು.

ಹೂವಿನ ಕರಗ ಉತ್ಸವದ ಪ್ರಯುಕ್ತ ಹೂವಿನ ವೃತ್ತದಲ್ಲಿ ನಡೆದ ಆರ್ಕೆಸ್ಟ್ರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಯ ಹಾಡುಗಳಿಗೆ ನೃತ್ಯ ಪ್ರದರ್ಶನಗಳು ಕಲಾಭಿಮಾನಿಗಳ ಮನಕುಲುಕಿತು.