ಇರಿಗೇನಹಳ್ಳಿ  ಶ್ರೀನಿವಾಸ್‌ ಗೆಲುವಿಗೆ ಎಲ್ಲರು ಶ್ರಮಿಸಿ : ನಿಸರ್ಗ ನಾರಾಯಣಸ್ವಾಮಿ ಕರೆ 

ವಿಜಯ ದರ್ಪಣ ನ್ಯೂಸ್…..

ಇರಿಗೇನಹಳ್ಳಿ  ಶ್ರೀನಿವಾಸ್‌ ಗೆಲುವಿಗೆ ಎಲ್ಲರು ಶ್ರಮಿಸಿ : ನಿಸರ್ಗ ನಾರಾಯಣಸ್ವಾಮಿ ಕರೆ

ದೇವನಹಳ್ಳಿ, ಮೇ.21: ಇದೇ ತಿಂಗಳು  25 ರಂದು ನಡೆಯಲಿರುವ ಬಮೂಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಇರಿಗೇನಹಳ್ಳಿ ಶ್ರೀನಿವಾಸ್ ಅವರನ್ನು ಎಲ್ಲರೂ ಒಗ್ಗೂಡಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮನವಿ ಮಾಡಿದರು.

ತಾಲೂಕಿನ ನಂದಿ ಬೆಟ್ಟ ರಸ್ತೆಯಲ್ಲಿರುವ ಶ್ರೀ ಕತ್ತಿ ಮಾರೆಮ್ಮ ದೇವಾಲಯದ ಸಮುದಾಯ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರಿಗೆ ದೇವನಹಳ್ಳಿ ತಾಲ್ಲೂಕಿನ ಜನರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ ಈ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಎಲ್ಲರು ಒಗ್ಗೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮತ್ತು ಪುರಸಭೆ ಚುನಾವಣೆಗಳಿಗೆ ಈ ಚುನಾವಣೆ ದಿಕ್ಕೂಚಿಯಾಗಲಿದೆ. ಇರಿಗೇನಹಳ್ಳಿ  ಬಿ ಶ್ರೀನಿವಾಸ್ ಅವರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಕಳೆದ 11 ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ. ಹೆಚ್ಚು ಅನುಭವ ಇರುವ, ರೈತರ ಹಿತವನ್ನು ಕಾಪಾಡಲು ಬದ್ದರಾಗಿರುವ ಇರಿಗೇನಹಳ್ಳಿ ಬಿ ಶ್ರೀನಿವಾಸ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಬೇಕು ನಾನು ಶಾಸಕನಾಗಿದ್ದ ಅವಧಿ ಯಲ್ಲಿಯೂ ಸಹ ಸಹಕಾರ ಸಂಘಗಳ ಅಭಿವೃದ್ಧಿಗೆ ಅನೇಕ ಅನುದಾನಗಳನ್ನು ನೀಡಿದ್ದೇನೆ ಎಂದರು.

ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಬಿ ಶ್ರೀನಿವಾಸ್. ಪಿಎಲ್.ಡಿ ಬ್ಯಾಂಕಿನ ಅಧ್ಯಕ್ಷ ಆರ್. ಮುನೇಗೌಡರು, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕೋಡಗುರ್ಕಿ ಮಂಜುನಾಥ್ ,   ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ,  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಕ ಕೋರಮಂಗಲ ವೀರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಮುನಿರಾಜ್, ಮನಗೊಂಡನಹಳ್ಳಿ ಜಗದೀಶ್, ಟಿ. ರವಿ, ವೆಂಕಟೇಶ್ ಸೇರಿದಂತೆ ಪಕ್ಷದ ಮುಖ್ಯಸ್ಥರು ಉಪಸ್ಥಿತರಿದ್ದರು.