--Ads--

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ 

On: May 22, 2025 7:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ

ಶಿಡ್ಲಘಟ್ಟ : ಡಾ.ಬಿ.ಆರ್‌.ಅಂಬೇಡ್ಕ‌ರ್ ಆಶಯದಂತೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪಜೆಗಳನ್ನಾಗಿ ರೂಪಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯಲ್ಲಿ ಅಂಬೇಡ್ಕರ್ ಮತ್ತು ಜಗಜೀವನ ರಾಷ್ಟ್ರ ಬಳಗದಿಂದ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಬಾಬುಜಗಜೀವನ್ ರಾಂ ಜಯಂತಿಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.

ಮಹಿಳಾ ಆಯೋಗ ಇದೆ ಎಂಬುದು ಎಷ್ಟೋ ಮಂದಿಗೆ ಗೊತ್ತಿರಲಿಲ್ಲ, ಸಾಮಾಜಿಕ ಜಾಲತಾಣದಿಂದ ಗೊತ್ತಾಗುವಂತಾಗಿದೆ ನಮ್ಮ ಆಯೋಗದ ಎಲ್ಲಾ ಕಾರ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಂದ ಒಬ್ಬರಿಗೆ ತಿಳಿಯು ತ್ತಿದ್ದು, ಅದು ನಮ್ಮನ್ನು ಕಾರ್ಯನಿರ್ವಹಿಸಲು ಉತ್ತೇಜಿಸುತ್ತಿದೆ ಎಂದು ಹೇಳಿದರು

.ದೇಶದ ಪ್ರತಿಯೊಬ್ಬರೂ ಸಮಾನತೆ ಹಾಗೂ ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳಲು ಸಂವಿಧಾನ ಕಾರಣ ಪ್ರತಿಯೊಬ್ಬರೂ ಸಂವಿಧಾನ ಗೌರವಿಸಬೇಕು ಎಂದರು.

ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಮಾತನಾಡಿ,ಅಂಬೇಡ್ಕ‌ರ್ ಅವರನ್ನು ಒಂದು ಜಾತಿ ಮತ್ತು ಧರ್ಮದ ಕಣ್ಣಿನಿಂದ ನೋಡಿದರೆ ಅರ್ಥವಾಗಲ್ಲ ಅವರನ್ನು ಕಾಣಬೇಕಾದರೆ ತಾಯಿ ಕಣ್ಣಿಂದ ನೋಡಬೇಕು ಎಂದರು.

ಪ್ರಪಂಚದಲ್ಲಿ ಇರುವೆಯಿಂದ ಆನೆವರೆಗೂ ಎಲ್ಲಾ ಪ್ರಾಣಿ-ಪಕ್ಷಿಗಳು ತಮ್ಮದೇ ಜೀವನ ನಡೆಸುತ್ತಿವೆ ಎಂದರೆ ಅದಕ್ಕೆ ಸಂವಿಧಾನ ಕಾರಣ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯತಿ ಇ.ಒ.ಆ‌ರ್.ಹೇಮಾವತಿ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ವಿದ್ಯಾವಸ್ತ್ರದ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಗ್ರಾಮದ ಹಿರಿಯ ಮುಖಂಡ ಕೆ.ಎಂ.ವೆಂಕಟೇಶ್, ದಲಿತ ಮುಖಂಡರಾದ ಕುಂದಲಗುರ್ಕಿ ಮುನಿಂದ್ರ, ಅರುಣ್‌ಕುಮಾ‌ರ್, ಎನ್.ಎ.ವೆಂಕಟೇಶ್,ಚಂದ್ರಶೇಖರ್, ನಾಗನರಸಿಂಹ,
ವೆಂಕಟೇಶ್, ಪ್ರಮೋದ್, ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗು ಸದಸ್ಯರು ಉಪಸ್ಥಿತರಿದ್ದರು

WhatsApp

Join Now

Telegram

Join Now

Instagram

Join Now