ವ್ಯಕ್ತಿ ಮತ್ತು ಸಮಾಜದ ಘನತೆಯನ್ನು ಕಾಪಾಡೋಣ……..
ವಿಜಯ ದರ್ಪಣ ನ್ಯೂಸ್…. ವ್ಯಕ್ತಿ ಮತ್ತು ಸಮಾಜದ ಘನತೆಯನ್ನು ಕಾಪಾಡೋಣ…….. ಧರ್ಮಸ್ಥಳದ ಪರ ವಿರೋಧದ ವಾದ ವಿವಾದಗಳು, ಚರ್ಚೆಗಳು, ಮಾತುಗಳು ದಿಕ್ಕು ತಪ್ಪುತ್ತಿದೆ. ಭಾಷೆ ಮತ್ತು ಭಾವನೆಗಳು ತೀರಾ ಕೆಳಹಂತಕ್ಕೆ ಇಳಿದಿವೆ ಮತ್ತು ಕ್ರೌರ್ಯವನ್ನು ಸೃಷ್ಟಿಸುತ್ತಿವೆ ಹಾಗು ಹೊರಹಾಕುತ್ತಿದೆ. ನಮ್ಮದೇ ಜನಗಳು, ನಾವೆಲ್ಲ ಭಾರತೀಯರು, ಬಹುತೇಕ ಕನ್ನಡಿಗರು, ಹೆಚ್ಚು ಕಡಿಮೆ ಸಹಪಾಠಿಗಳು, ಸಹವರ್ತಿಗಳು, ಸಮಕಾಲೀನರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ, ಎಲ್ಲರಿಗೂ ಬಹುತೇಕ ವಿದ್ಯಾಭ್ಯಾಸ ಇದೆ. ಸಾಮಾನ್ಯ ತಿಳುವಳಿಕೆಯೂ ಇದೆ. ಪರವಾಗಿ ವಾದ ಮಾಡುವವರಿಗೆ ಧರ್ಮ, ಭಕ್ತಿ, ಸಂಪ್ರದಾಯ…
