ಭಾರತದಲ್ಲಿ ನಿರ್ಮಿತವಾದ ಸಾಧನವನ್ನು ಬಳಸಿಕೊಂಡು ಕರ್ನಾಟಕದ ಮೊದಲ ಯಶಸ್ವಿ ಟೀರ್ ವಿಧಾನವು ರೋಗಿಯ ಹೃದಯದ ಆರೋಗ್ಯವನ್ನು ಪುನ: ಸ್ಥಾಪಿಸಿದೆ
ವಿಜಯ ದರ್ಪಣ ನ್ಯೂಸ್…
ಭಾರತದಲ್ಲಿ ನಿರ್ಮಿತವಾದ ಸಾಧನವನ್ನು ಬಳಸಿಕೊಂಡು ಕರ್ನಾಟಕದ ಮೊದಲ ಯಶಸ್ವಿ ಟೀರ್ ವಿಧಾನವು ರೋಗಿಯ ಹೃದಯದ ಆರೋಗ್ಯವನ್ನು ಪುನ: ಸ್ಥಾಪಿಸಿದೆ
ಬೆಂಗಳೂರು, ಅಕ್ಟೋಬರ್ 8, 2025: ತೀವ್ರ ಹೃದಯದ ಕಾಯಿಲೆಯಿಂದಬಳಲುತ್ತಿದ್ದ 70 ವರ್ಷ ವಯಸ್ಸಿನ ಗೃಹಿಣಿಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಭಾರತದ ಮೊದಲ ಮೇಕ್ ಇನ್ ಇಂಡಿಯಾ ಮೈಟರಲ್ ಕ್ಲಿಪ್ ಅನ್ನು ಬಳಸಿಯಶಸ್ವಿಯಾಗಿ ಚಿಕಿತ್ಸೆಯನ್ನು ನೀಡಲಾಯಿತು.
ಕಳೆದ ಎರಡು ವರ್ಷಗಳಿಂದ ತೀವ್ರ ಉಸಿರಾಟದ ತೊಂದರೆ, ಪಾದಗಳು ಊದಿಕೊಳ್ಳುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥತೆಗಳಿಂದಾಗಿ ಬಳಲುತ್ತಿದ್ದ 70 ವರ್ಷ ವಯಸ್ಸಿನ ಗೃಹಿಣಿಯೊಬ್ಬರಿಗೆ ಕರ್ನಾಟಕ ರಾಜ್ಯದಲ್ಲಿ ಭಾರತದ ಮೊದಲ ಮೇಕ್ ಇನ ಇಂಡಿಯಾ ಮೈಟರಲ್ ಕ್ಲಿಪ್ ಸಾಧನದ (ಮೈಕ್ಲಿಪ್) ಮೂಲಕ ಯಶಸ್ವಿಯಾಗಿಚಿಕಿತ್ಸೆಯನ್ನು ನೀಡಲಾಗಿದೆ.
ಈ ಪ್ರಕರಣದ ಕುರಿತು ಮಾತನಾಡಿದ ಡಾ. ಕಿಶೋರ್ ಕೆ. ಎಸ್. ಅವರು ಹೀಗೆ ಹೇಳಿದರು “ತೀವ್ರವಾದ ಮೈಟರಲ್ ರಿಗರ್ಗಿಟೇಶನ್ ಹೊಂದಿರುವ ರೋಗಿಗಳು ಅವರವಯಸ್ಸು, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ದೌರ್ಬಲ್ಯ ಅಥವಾಸಹ-ಅಸ್ತಿತ್ವದಲ್ಲಿರುವ ಮೂತ್ರಪಿಂಡ, ಶ್ವಾಸಕೋಶ ಮತ್ತು ಯಕೃತ್ತಿನ ಸಮಸ್ಯೆಗಳಿಂದಾಗಿ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಪಾಯವನ್ನು ಹೊಂದಿರುತ್ತಾರೆ. ಚಿಕಿತ್ಸೆಯನ್ನು ನೀಡದಿದ್ದರೆ, MR ವಿನಾಶಕಾರಿ ಪರಿಣಾಮಗಳನ್ನು ಬೀರುತ್ತದೆ – ಶೇ. 50% ಕ್ಕಿಂತ ಹೆಚ್ಚು ಜನರು ಬದುಕುಳಿಯದಿರಬಹುದು ಮತ್ತು ಒಂದು ವರ್ಷದ ಮರಣವು ಶೇ. 57% ರವರೆಗೆ ಇರಬಹುದು. ಅಂತಹ ರೋಗಿಗಳಿಗೆ, ಈ ಶಸ್ತ್ರಚಿಕಿತ್ಸೆ ಇಲ್ಲದ ಮೈಕ್ಲಿಪ್ ವಿಧಾನವು ಜೀವ ಉಳಿಸುವ ಪರ್ಯಾಯ ಮಾರ್ಗವನ್ನು ನೀಡುತ್ತದೆ.”
,##########₹₹₹₹#############₹₹₹₹###
ಅಕ್ಟೋಬರ್ 18 ಕ್ಕೆ ಜಿಲ್ಲಾ ಮಟ್ಟದ ಯುವಜನೋತ್ಸವ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಅಕ್ಟೋಬರ್ : ಸ್ವಾಮಿ ವಿವೇಕಾನಂದ ರವರ ಜನ್ಮ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನಾಚಾರಣೆಯನ್ನು ಸಂಘಟಿಸಲಾಗುತ್ತದೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಯುವಜನೋತ್ಸವ ಕಾರ್ಯಕ್ರಮವನ್ನು ಅಯೋಜಿಸಲಾಗುತ್ತಿದ್ದು ಇದರ ಅಂಗವಾಗಿ ವಿಜ್ಞಾನ ಮೇಳ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 18 ಶನಿವಾರ ಬೆಳಿಗ್ಗೆ 9.30 ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾದಗೊಂಡನಹಳ್ಳಿ ರಸ್ತೆ, ದೊಡ್ಡಬಳ್ಳಾಪುರ ತಾಲ್ಲೂಕು ಇಲ್ಲಿ ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ 15 ರಿಂದ 29ರ ವಯೋಮಿತಿಯಲ್ಲಿರುವ ಜಿಲ್ಲೆಯ ಎಲ್ಲಾ ಯುವಕ-ಯುವತಿಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬಹುದು.ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಲಾಗುವುದು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಥೆ ಬರೆಯುವ ಸ್ಪರ್ಧೆ, ಕವಿತೆ ಬರೆಯುವ ಸ್ಪರ್ಧೆ,ಭಾಷಣ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಜಾನಪದ ನೃತ್ಯ (ಗುಂಪು), ಜಾನಪದ ಗೀತೆ (ಗುಂಪು) ಹಾಗೂ ವಿಜ್ಞಾನ ಮೇಳ (ಗುಂಪು).
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕಛೇರಿ ದೂರವಾಣಿ ಸಂಖ್ಯೆ :080-29787443 ಹಾಗೂ ಮೊಬೈಲ್ ಸಂ:9632778567 ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.