ಹಣವನ್ನು ಗಳಿಸುವುದರ ಜತೆಗೆ ಅದನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸುವುದು ಅಗತ್ಯ : ಎನ್.ಶ್ರೀಕಾಂತ್
ವಿಜಯ ದರ್ಪಣ ನ್ಯೂಸ್….
ಹಣವನ್ನು ಗಳಿಸುವುದರ ಜತೆಗೆ ಅದನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸುವುದು ಅಗತ್ಯ : ಎನ್.ಶ್ರೀಕಾಂತ್

ಶಿಡ್ಲಘಟ್ಟ : ಉಳಿತಾಯ, ಹೂಡಿಕೆ ಮತ್ತು ಸಾಲದ ನಿರ್ವಹಣೆಯ ಬಗ್ಗೆ ಪ್ರತಿಯೊಬ್ಬರೂ ಜ್ಞಾನ ಹೊಂದಿರಬೇಕು,
ಹಣವನ್ನು ಗಳಿಸುವುದರ ಜತೆಗೆ ಅದನ್ನು ಅಷ್ಟೇ
ಸಮರ್ಥವಾಗಿ ನಿರ್ವಹಿಸುವುದು ಅಗತ್ಯ ಎಂದು ಶ್ರೀಸರಸ್ವತಿ ಕಾನ್ವೆಂಟ್ ಅಧ್ಯಕ್ಷ ಎನ್.ಶ್ರೀಕಾಂತ್ ತಿಳಿಸಿದರು.
ನಗರದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಲೇಖಕ ಡಿ.ಎಸ್. ಶ್ರೀನಿಧಿ ಅವರು ರಚಿಸಿರುವ ‘ದಿ ವೆಲ್ತ್ ಬ್ಲೂಪ್ರಿಂಟ್ : ಹೌ ಇಂಡಿಯನ್ಸ್ ಬಿಲ್ಡ್ ಫೈನಾನ್ಸಿಯಲ್ ಫ್ರೀಡಂ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭವಿಷ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಬೇಕಾದ ವಿವೇಚನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಲೇಖಕರು ಈ ಪುಸ್ತಕದ ಮೂಲಕ ಉತ್ತಮ ಕೌಶಲ್ಯಗಳನ್ನು ಒದಗಿಸಿದ್ದು ,
ಜನರಿಗೆ ಆರ್ಥಿಕ ಸಾಕ್ಷರತೆ ಮತ್ತು ಉದ್ಯಮಶೀಲತೆಯ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದು ಶ್ಲಾಘಿಸಿದರು.
ಲೇಖಕ ಡಿ.ಎಸ್. ಶ್ರೀನಿಧಿ ಮಾತನಾಡಿ,ವಿಶೇಷವಾಗಿ ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಈ ಪುಸ್ತಕ ಬರೆಯಲಾಗಿದೆ ,ಹಣಕಾಸಿನ ವಿಷಯಗಳು ಕ್ಲಿಷ್ಟವಾಗಿರದೆ ಸಾಮಾನ್ಯ ಜನರಿಗೂ, ಮಕ್ಕಳು, ಮಹಿಳೆಯರು, ಯುವಕರು ಮತ್ತು ಹಿರಿಯರು ಹೀಗೆ ಎಲ್ಲ ವರ್ಗದವರಿಗೂ ಉಪಯುಕ್ತವಾಗಿದೆ ಎಂದರು.
ತಾಲ್ಲೂಕು ಬ್ರಾಹ್ಮಣರ ಮಹಾಸಭಾ ಅಧ್ಯಕ್ಷ ಎ.ಎಸ್.ರವಿ ಮಾತನಾಡಿ, ಸಮಾಜದಲ್ಲಿ ಹಣಕಾಸಿನ ಶಿಸ್ತು ಬೆಳೆಸಲು ಈ ಕೃತಿ ಸಹಕಾರಿ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ಎಸ್.ವಿ.ನಾಗರಾಜರಾವ್,ವೈ.ಎನ್.ದಾಶರಥಿ ಹಾಗು ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು.
