ದೊಡ್ಡಬಳ್ಳಾಪುರ ನಾಗರಕೆರೆ ಪುನರುಜ್ಜೀವನಗೊಳಿಸಲು ಕ್ರಮ:ಡಿಸಿ ಎ.ಬಿ ಬಸವರಾಜು
ವಿಜಯ ದರ್ಪಣ ನ್ಯೂಸ್…..
ದೊಡ್ಡಬಳ್ಳಾಪುರ ನಾಗರಕೆರೆ ಪುನರುಜ್ಜೀವನಗೊಳಿಸಲು ಕ್ರಮ:ಡಿಸಿ ಎ.ಬಿ ಬಸವರಾಜು

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆ.05:
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ನಾಗರಕೆರೆಯನ್ನು ಪುನರುಜ್ಜೀವನಗೊಳಿಸುವ ಸಂಬಂಧ ಫಾಕ್ಸ್ ಕಾನ್ (Foxcon) ಸಂಸ್ಥೆ ರವರು ರೂ.03 ಕೋಟಿಯ ಸಿ.ಇ.ಆರ್ (ಕಾರ್ಪೋರೇಟ್ ಎನ್ವಿರಾನ್ಮೆಂಟ್ ರೆಸ್ಪಾನ್ಸಿಬಲ್) ಅನುದಾನದಡಿ ಅಭಿವೃದ್ಧಿ ಪಡಿಸಲು ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫಾಕ್ಸ್ ಕಾನ್ ಸಂಸ್ಥೆಯವರು ನಾಗರಕೆರೆ ಪುನರುಜ್ಜೀವನಗೊಳಿಸುವ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ. ಈ ಕುರಿತು ಇಂದು ವಿವಿಧ ಇಲಾಖೆಗಳ ಸಮನ್ವಯ ದೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗಿದೆ.
ಕರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗಳ್ಳಲಾಗುತ್ತಿರುವ ಕಾಮಗಾರಿಯ ಸಂಬಂಧ ವಿವಿದ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಸಲಹೆಗಳನ್ನು ಪಡೆದು ಅಂತಿಮವಾಗಿ ಫಾಕ್ಸ್ ಕಾನ್ (Foxcon) ರವರು ಸಿಇಆರ್ (corporate environment responsible) ಅನುದಾನದಡಿ ಸಿದ್ಧಪಡಿಸಲಾಗಿರುವ ವಿಸ್ತ್ರತ ಯೋಜನಾ ವರದಿಯನ್ನು ಅನುಮೋದನೆಗಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅನುಮೋದನೆ ಬಂದ ನಂತರ ನಾಗರಕೆರೆ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೈಗಾರಿಕೆಗಳ ವಿಸ್ತೃತ ವರದಿ ನೀಡಲು ಸೂಚನೆ
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿನ ಕೈಗಾರಿಕೆಗಳು, ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ನೀರಿನ ಮೂಲ, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ, ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ರಮೇಶ್.ಬಿ.ಎಸ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಶ್ರೀಕಾಂತ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ಅಂತರ್ಜಲ ಇಲಾಖೆ ಹಿರಿಯ ಭೂ ವಿಜ್ಞಾನಿ ಪಲ್ಲವಿ ಪರಿಸರ ಅಧಿಕಾರಿ ವಿಜಯ, Foxcon ಸಂಸ್ಥೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
ಶ್ರೀ ವಾದಿರಾಜರ ವಿರಚಿತ
“ಶ್ರೀ ಲಕ್ಷ್ಮೀ ಶೋಬಾನೆ ಪದ”
(ಧಾರ್ಮಿಕ ಪ್ರವಚನ)
ಬೆಂಗಳೂರು : ಪ್ರವಚನ ಬಳಗದ ವತಿಯಿಂದ ಫೆಬ್ರವರಿ 7 ರಿಂದ 17ರ ವರೆಗೆ ಪ್ರತಿದಿನ ಸಂಜೆ 6-15ಕ್ಕೆ ಮ||ಶಾ||ಸಂ|| ಶ್ರೀ ಚಂದ್ರಶೇಖರ ಆಚಾರ್ಯರಿಂದ ಶ್ರೀ ವಾದಿರಾಜರ ವಿರಚಿತ “ಶ್ರೀ ಲಕ್ಷ್ಮೀ ಸೋಬಾನೆ ಪದ” ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಭೀಮನಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಬೆಂಗಳೂರು-560097
ಕರ್ನಾಟಕ ಶಾಸ್ತ್ರೀಯ ಸಂಗೀತ

ಬೆಂಗಳೂರು : ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಫೆಬ್ರವರಿ 8, ಭಾನುವಾರ ಸಂಜೆ 5-30ಕ್ಕೆ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮ. ಗಾಯನ : ಶ್ರೀ ಪ್ರಭಂಜನಾಚಾರ್ ಹಾವೇರಿ, ಪಿಟೀಲು : ಶ್ರೀ ಆನಂದ್ ವಿಶ್ವನಾಥನ್, ಮೃದಂಗ : ಶ್ರೀ ಸಮರ್ಥ್ ರಘುನಂದನ್. ಸ್ಥಳ : #48, ‘ಸುಮಧ್ವ ಧಾಮ’, 6ನೇ ಮುಖ್ಯರಸ್ತೆ, ಕಾವೇರಿ ರಸ್ತೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು-560061

