--Ads--

ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಶಾಲೆಯ ಕವನಾ ಅವಿಸ್ಮರಣೀಯ ಸಾಧನೆ

On: June 9, 2026 3:45 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಶಾಲೆಯ ಕವನಾ ಅವಿಸ್ಮರಣೀಯ ಸಾಧನೆ

ಶಿಡ್ಲಘಟ್ಟ : ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಎಸ್‌.ಎಸ್.ಕವನಾ
ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್
(ಎನ್‌ಎಂಎಂಎಸ್) ಪರೀಕ್ಷೆ ತೇರ್ಗಡೆಯಾಗುವ ಮೂಲಕ ರಾಷ್ಟ್ರೀಯ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ.

ನವದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯೊಂದಿಗೆ ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಮಾರ್ಗದರ್ಶನದಲ್ಲಿ ಫೆಬ್ರುವರಿ ಮಾಹೆಯಲ್ಲಿ ಈ ಪರೀಕ್ಷೆ ನಡೆದಿತ್ತು ,ಪ್ರತಿವರ್ಷ 8ನೇ ತರಗತಿಯಲ್ಲಿ ಕಲಿಯುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಆಯೋಜಿಸಲಾಗುತ್ತದೆ.

ಈ ಬಾರಿ ಕೂಡ ಸುಗಟೂರು ಶಾಲೆಯ ವಿದ್ಯಾರ್ಥಿಗಳು
ತಮ್ಮ ಪ್ರತಿಭೆಯನ್ನು ಮುಂದುವರೆಸಿದ್ದಾರೆ, ಕವನಾ
ಅವರ ಈ ಸಾಧನೆಯು ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ನಿಸ್ಸಂದೇಹವಾಗಿ ನೆರವಾಗಲಿದೆ ಎಂದು ಅವರ ಪೋಷಕರಾದ ರಾಧಾ ಮತ್ತು ಸುಬ್ರಮಣಿ ಸಂತಸ ವ್ಯಕ್ತಪಡಿಸಿದರು.

ಪ್ರತಿವರ್ಷವೂ ನಮ್ಮ ಮಾರ್ಗದರ್ಶಿ ಶಿಕ್ಷಕರಾದ ಎಚ್‌. ಎಸ್‌.ರುದ್ರೇಶಮೂರ್ತಿ ಮತ್ತು ಇತರ ಶಿಕ್ಷಕರು ವಿಶೇಷ ತರಬೇತಿ ನೀಡುವ ಮೂಲಕ ಮಕ್ಕಳ ಸಾಧನೆಗೆ ಅಗತ್ಯ ದಾರಿ ತೋರುತ್ತಿದ್ದಾರೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿದ್ಯಾರ್ಥಿನಿ 
ಎಸ್‌.ಕವನಾ ತಿಳಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿನಿಯ ಯಶಸ್ಸಿಗೆ ಪ್ರಬಾರಿ ಕ್ಷೇತ್ರ
ಶಿಕ್ಷಣಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್, ಮಾರ್ಗದರ್ಶಿ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ,ಶಿಕ್ಷಣ ಸಂಯೋಜಕ ಎಂ.ಸಿ.ವೆಂಕಟರೆಡ್ಡಿ ಹಾಗೂ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

WhatsApp

Join Now

Telegram

Join Now

Instagram

Join Now