ವಿಜಯ ದರ್ಪಣ ನ್ಯೂಸ್….
ಎರಡನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ…! ಪೊರಕೆ ಚಳುವಳಿ ಮೂಲಕ ಎಚ್ಚರಿಕೆ…!

ತಾಂಡವಪುರ ಜೂನ್ 9 ದಕ್ಷಿಣ ಕಾಶಿ: ನಂಜನಗೂಡು ತಾಲೂಕು ಕಚೇರಿಯಲ್ಲಿ ತಾಂಡವವಾಡುತ್ತಿರುವ ಲಂಚಾವತಾರದ ವಿರುದ್ದ ಸಿಡಿದೆದ್ದ ರೈತರು ಎರಡನೇ ದಿನವಾದ ಇಂದು ಪ್ರತಿಭಟನೆ ನಡೆಸಿದರು.ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪೊರಕೆ ಚಳುವಳಿ ಹಮ್ಮಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೇಡಿಕೆಗೆ ಸ್ಪಂದಿಸದ ತಹಸಿಲ್ದಾರ್ ಡಾ. ಸ್ಮಿತಾ ರಾಮು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಕಚೇರಿಯಲ್ಲಿ ಲಂಚಾವತಾರ ಮಿತಿಮೀರುತ್ತಿದೆ. ರೈತರ ಜೇಬಿನಲ್ಲಿ ಹಣ ಇಲ್ಲ ಎಂದರೆ ಕೆಲಸವೂ ನಡೆಯಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕೃಷಿ ಭೂಮಿಯ ದಾಖಲಾತಿ ವಂಶವೃಕ್ಷ, ಖಾತೆ ಬದಲಾವಣೆ ಸೇರಿದಂತೆ ಪ್ರತಿಯೊಂದು ವಿಚಾರಕ್ಕೂ ಹಣಕ್ಕಾಗಿ ಪೀಡಿಸಲಾಗುತ್ತಿದೆ.
ಈ ವಿಚಾರವನ್ನು ಸಾಕಷ್ಟು ಬಾರಿ ಕಂದಾಯ ಅಧಿಕಾರಿಗಳು ತಿದ್ದಿ ಕೊಳ್ಳಲು ಮನವರಿಕೆ ಮಾಡಲಾಗಿದೆ.ಲಂಚ ಪಡೆಯುವುದನ್ನು ಬಿಡದ ಕಂದಾಯ ಅಧಿಕಾರಿಗಳ ವಿರುದ್ಧ ಈಗ ರೈತ ಸಮೂಹ ಸಿಡಿದೆದ್ದಿದೆ.ಕೇವಲ ನಂಜನಗೂಡಿಗೆ ಆರು ತಿಂಗಳ ಹಿಂದೆ ಆಗಮಿಸಿದ ತಹಸಿಲ್ದಾರ್ ಡಾ. ಸ್ಮಿತಾ ರಾಮು ಲಂಚಬಾಕರ ಬೆನ್ನಿಗೆ ನಿಲ್ಲುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ ಗಂಭೀರ ಆರೋಪ ಮಾಡಿದರು.
ರೈತರ ಗಂಭೀರ ಪ್ರತಿಭಟನೆಯನ್ನು ತಿರಸ್ಕಾರ ಮಾಡಿದರೆ ತಕ್ಕ ಸಾಸ್ತಿ ಎದರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಆರ್ ಐ ಮತ್ತು ವಿ ಎ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿರುವುದೇ ಅಧಿಕಾರಿ ಸಿಬ್ಬಂದಿಗಳಿಂದ.
ಲಂಚದ ಹಣ ಕೊಟ್ಟರೆ ಕೆಲಸ ನಡೆಯುತ್ತದೆ ಇಲ್ಲದಿದ್ದಲ್ಲಿ ಸಮಸ್ಯೆ ಇತ್ಯರ್ಥ ಆಗುವುದಿಲ್ಲ.
ರೈತರ ಪ್ರತಿಭಟನೆ ನಿರತ ಸ್ಥಳಕ್ಕೆ ಧಾವಿಸಿ ಸರಿಯಾದ ಉತ್ತರ ನೀಡದ ತಹಸಿಲ್ದಾರ್ ಡಾ ಸ್ಮಿತಾ ರಾಮು ತಾಲೂಕು ಬಿಟ್ಟು ತೊಲಗಬೇಕು ಎಂದು ರೈತರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಧ್ಯಕ್ಷ ವಿದ್ಯಾಸಾಗರ್ ಜಿಲ್ಲಾ ಅಧ್ಯಕ್ಷ ಸತೀಶ್ ಕಾರ್ಯದರ್ಶಿ ಇಮ್ಮವು ರಘು ತಾಲೂಕು ಅಧ್ಯಕ್ಷ ಸೂರಳ್ಳಿ ಮಹದೇವ ನಾಯಕ 50ಕ್ಕೂ ಹೆಚ್ಚು ರೈತ ಮಹಿಳೆಯರು ಮುಖಂಡರು ಕಾರ್ಯಕರ್ತರು ಹಾಜರಿದ್ದರು










