ಬಿಜೆಪಿ ಐಟಿ ಸೆಲ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಪಕ್ಷದ ನಿಯೋಗ ಪೊಲೀಸ್ ಠಾಣೆಗೆ ದೂರು

ವಿಜಯ ದರ್ಪಣ ನ್ಯೂಸ್…..

ಬಿಜೆಪಿ ಐಟಿ ಸೆಲ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಪಕ್ಷದ ನಿಯೋಗ ಪೊಲೀಸ್ ಠಾಣೆಗೆ ದೂರು

ತಾಂಡವಪುರ ಫೆಬ್ರವರಿ 12 ಬಿಜೆಪಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ರವರನ್ನು “ವರ್ಗಾವಣೆ ದಂದೆ ಹಾಗೂ ಕಮಿಷನ್ ವಸೂಲಿ ಇಲಾಖೆ ಕರ್ನಾಟಕ ಸರ್ಕಾರದ ಸಚಿವರು” ಎಂದು facebook ನಲ್ಲಿ ಹಾಕಿರುವುದಲ್ಲದೆ ಮಾಜಿ ಸಂಸದ ಪ್ರತಾಪ್ ಸಿಂಹರವರು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಸುದ್ದಿ ಗೋಷ್ಠಿ ನಡೆಸಿ ಯತೀಂದ್ರ ಸಿದ್ದರಾಮಯ್ಯ ಅವರನ್ನ ವರ್ಗಾವಣೆ ದಂದೆ ಸಚಿವರು ಎಂದು ನಿಂದಿಸಿರುವ ಕಾರಣ ಗುರುವಾರ ಬಿಜೆಪಿ ಐಟಿ ಸೆಲ್ ಮತ್ತು ಪ್ರತಾಪ್ ಸಿಂಹ ವಿರುದ್ಧ ಕಾನೂನು ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿ ಪೊಲೀಸ್ ಕಮೀಷನರ್ ಗೆ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಮುಖಂಡರ ನಿಯೋಗ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಗೆ ದೂರು ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ ವಿಜಯಕುಮಾರ್, ನಗರ ಅಧ್ಯಕ್ಷ ಆರ್ ಮೂರ್ತಿ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ನೇತೃತ್ವದಲ್ಲಿ ದೂರು ನೀಡಲಾಯಿತು.ಇದೇ ವೇಳೆ ಸುದ್ದಿಮಾಧ್ಯಮಗಳ ಜೊತೆ ಮಾತನಾಡಿದ ಅಧ್ಯಕ್ಷ ಬಿಜೆ ವಿಜಯಕುಮಾರ್ ಗುರುವಾರ ಸಂಜೆ ಒಳಗೆ ಬಿಜೆಪಿ ಐಟಿ ಸೆಲ್ ಮತ್ತು ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ಆಗಬೇಕು ಇಲ್ಲದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಇದೇ ವೇಳೆ ಬಿಜೆಪಿ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿ ಕೂಡಲೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ಹೋರಾಟವನ್ನು ನಾವು ರೂಪಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿಎಂ ರಾಮು,ಶಿವಣ್ಣ ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಎಂಸಿ ಹುಂಡಿ ಶಿವಪ್ರಸಾದ್ ಗುಡ್ಡಪ್ಪ,ಈಶ್ವರ್ ಚಕ್ಕಡಿ, ಕುಂಬ್ರಳ್ಳಿ ರಾಹುಲ್,ಹುಣಸೂರು ಬಸವಣ್ಣ,ಮಹೇಶ್,ಚಂದನ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

&&&&&&&&&&&&&&&&&&&&

“ಭೂ ಕೈಲಾಸ” ಹರಿಕಥೆ

ಬೆಂಗಳೂರು : ಶೇಷಾದ್ರಿಪುರ ವನಿತಾ ವೃಂದದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 14, ಶನಿವಾರ ಸಂಜೆ 7-00ಕ್ಕೆ ಹರಿಕಥಾ ವಿದ್ವಾನ್ ಶ್ರೀ ಮೋಹನ್ ಕುಮಾರ್ ಶಿಷ್ಯೆ ಕು|| ಅನಘಾ ಪ್ರಸಾದ್ ಇವರಿಂದ “ಭೂ ಕೈಲಾಸ” ಹರಿಕಥೆ ಏರ್ಪಡಿಸಲಾಗಿದೆ. ವಾದ್ಯ ಸಹಕಾರ : ಶ್ರೀ ಮಧುಸೂದನ್ (ಹಾರ್ಮೋನಿಯಂ), ಶ್ರೀ ವಸಂತ್ (ತಬಲಾ). ಸ್ಥಳ : 1ನೇ ಅಡ್ಡರಸ್ತೆ, ಮಾರುತಿ ಆಸ್ಪತ್ರೆ ಎದುರು) ಶೇಷಾದ್ರಿಪುರಂ, ಬೆಂಗಳೂರು-560020