ವಿಜಯ ದರ್ಪಣ ನ್ಯೂಸ್…..
ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಪರಿಗಣಿಸಿ ಸಮ್ಮೇಳನ ಅದ್ಯಕ್ಷರ ಆಯ್ಕೆ : ಕಸಾಪ ಅದ್ಯಕ್ಷ ನಾರಾಯಣಸ್ವಾಮಿ

ಶಿಡ್ಲಘಟ್ಟ : ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಹೊಂದಿರುವ ಆಸಕ್ತಿ ಪರಿಗಣಿಸಿ ಅರ್ಹ ವ್ಯಕ್ತಿಯೋರ್ವರನ್ನು 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ತಿಳಿಸಿದರು.
ನಗರದ ಶ್ರೀ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಕಸಾಪದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜ್ರಾವ್ ಮಾತನಾಡಿ, ಅಧ್ಯಕ್ಷರ ಆಯ್ಕೆ ಮಾಡುವಾಗ ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆ, ಕನ್ನಡ ಭಾಷಾ ಬೆಳವಣಿಗೆಗೆ ನೀಡಿರುವ ಸೇವೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಹೊಂದಿರುವ ಆಸಕ್ತಿ ಪರಿಗಣಿಸುವ ಕುರಿತು ತಿಳಿಸಿದರು.
10ನೇ ತಾಲೂಕು ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದ ರೂಪಿಸಿ ರಮೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಒಂದು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಕನ್ನಡದ ‘ಹಿರಿಮೆ ಹಾಗೂ ಸಾಹಿತ್ಯದ ಮಹತ್ವವನ್ನು ಸಾರುವ ರೀತಿಯಲ್ಲಿ ಆಯೋಜಿಸುವುದು ಅಗತ್ಯ ಎಂದರು.
ಸಮ್ಮೇಳನಗಳಲ್ಲಿ ಸಾಹಿತ್ಯಾಸಕ್ತರು, ಕವಿಗಳು, ಸಾಹಿತಿಗಳು ಹಾಗೂ ಕನ್ನಡಪರ ಚಿಂತಕರು ಭಾಗವಹಿಸುವಂತಾಗಬೇಕು ಎಂದರು.
ಸಾಹಿತ್ಯ ಸಮ್ಮೇಳನವನ್ನು ಒಂದು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಕನ್ನಡದ ‘ಹಿರಿಮೆ ಹಾಗೂ ಸಾಹಿತ್ಯದ ಮಹತ್ವವನ್ನು ಸಾರುವ ರೀತಿಯಲ್ಲಿ ಆಯೋಜಿಸುವುದು ಅಗತ್ಯ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ರೂಪಿಸಿರಮೇಶ್ ,ಕಾರ್ಯದರ್ಶಿ ಟಿ.ಟಿ.ನರಸಿಂಹಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ಮುನಿನಾರಾಯಣಪ್ಪ, ಕೋಶಾಧ್ಯಕ್ಷ ದೇವರಾಜ್, ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ಪದಾಧಿಕಾರಿಗಳಾದ ಸುಂದರಾಚಾರಿ, ಈಧರೆ ಪ್ರಕಾಶ್,ಎನ.ಜಿ.ಮಂಜುನಾಥ್, ಜಯಂತಿಗ್ರಾಮ ನಾರಾಯಣಸ್ವಾಮಿ, ಡಿ.ಎಸ್.ಸತ್ಯನಾರಾಯಣರಾವ್,
ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ರವಿ,
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲೂಕು ಅಧ್ಯಕ್ಷ ಸುರೇಶ್ ಭಗತ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ವರದರಾಜ್,ಬಿ.ಸಿ.ಗಂಗಾಧರ್, ಬುಜ್ಜಿನಾಯಕ್ ಮುಂತಾದವರು ಹಾಜರಿದ್ದರು.











