ಸಾಧನೆಗೆ ಬೇಕು ಸಹನೆ : ಜಯಶ್ರೀ ಜೆ. ಅಬ್ಬಿಗೇರಿ
ವಿಜಯ ದರ್ಪಣ ನ್ಯೂಸ್….
ಸಾಧನೆಗೆ ಬೇಕು ಸಹನೆ: ಜಯಶ್ರೀ ಜೆ. ಅಬ್ಬಿಗೇರಿ

ಒಮ್ಮೆ ಭಗವಾನ್ ಬುದ್ಧ ತನ್ನ ಪ್ರೀತಿಯ ಶಿಷ್ಯನೊಂದಿಗೆ ಬೋಧಿ ವೃಕ್ಷದ ಕೆಳಗೆ ಕುಳಿತಾಗ ಶ್ರೀಮಂತನೊಬ್ಬ ಅಲ್ಲಿಗೆ ಬಂದ. ಶ್ರೀಮಂತನು ಬುದ್ಧನನ್ನು ಬಾಯಿಗೆ ಬಂದ ಹಾಗೆ ಬೈಯ್ಯಲು ಶುರು ಮಾಡಿದ. ಬುದ್ಧ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೇ ಕುಳಿತಿದ್ದ. ಅಜ್ಞಾನಿಯಾದ ಶ್ರೀಮಂತ ಬುಧನನ್ನು ಬೈಯ್ಯುತ್ತಿದ್ದಾನೆಂದು ಶಿಷ್ಯ, ಕೋಪಗೊಂಡ, ಬುಧನಿಗೆ ಶಿಷ್ಯನ ಕೋಪದ ಬಗ್ಗೆ ತಿಳಿದಾಗ ಸುಮ್ಮನಿರೆಂದು ಸನ್ನೆ ಮಾಡಿದ. ಬೈದು ಬೈದು ಸಾಕಾದ ಮೇಲೆ ಶ್ರೀಮಂತ ಹೋದ, “ಆತ ನಿಮ್ಮನ್ನು ವೈಯ್ಯುತ್ತಿದ್ದಾನೆ ಹಾಗಿದ್ದರೂ ಸುಮ್ಮನೇ ಕೂತಿದ್ದೀರಿಲ್ಲ.” ನನಗೂ ಸುಮ್ಮನೇ ಇರಲು ಹೇಳಿದಿರಿ ಎಂದು ಕೇಳಿದೆ. ಶಿಷ್ಯ. ಬೈದದ್ದರಿಂದ ಈಗ ಏನಾಯ್ತು? ಎಂದ ಬುದ್ಧ. ಅವನು ಬೈದಿದ್ದು ನಿಮಗೆ ನೋವೆನಿಸಲಿಲ್ಲವೇ? ಎನ್ನುವ ಪ್ರಶ್ನೆಗೆ ಬುದ್ಧನ ಉತ್ತರ ಇಲ್ಲ ಎಂದಾಗಿತ್ತು. ಬುದ್ಧ ಮುಂದುವರೆದು ಹೀಗೆ ಹೇಳುತ್ತಾನೆ. ನಿನಗೆ ಯಾರೋ ಕಾಣಿಕೆ ಕೊಡುತ್ತಾರೆ ಅದನ್ನು ಸ್ವೀಕರಿಸಿದರೆ ಅದು ನಿನ್ನದಾಗುತ್ತದೆ. ನೀನು ತೆಗೆದುಕೊಳ್ಳದಿದ್ದರೆ? ‘ಮರಳಿ ತೆಗೆದುಕೊಂಡು ಹೋಗುತ್ತಾರೆ. ಎಂದು ಉತ್ತರಿಸಿದ ಆನಂದ. ಅವನು ಬೈದಿದ್ದನ್ನು ನಾನು ತೆಗೆದುಕೊಳ್ಳಲೇ ಇಲ್ಲ. ಹೀಗಾಗಿ ಬೈಗುಳಗಳನ್ನು ಅವನು ವಾಪಸ್ ತೆಗೆದುಕೊಂಡು ಹೋದ ಎಂದು ಸಮಾಧಾನವಾಗಿ ಬುದ್ದಿವಾದ ಹೇಳಿದ.
ಆದರೂ ಶಿಷ್ಯನ ಮನಸ್ಸಿನಲ್ಲಿ ಆ ಘಟನೆ ಹಾಗೆ ಉಳಿದಿತ್ತು ಮಧ್ಯಾಹ್ನ : ಕಾಡಿನೊಳಗೆ ಹೋಗುವಾಗ ಒಂದೆಡೆ ವಿಶ್ರಾಂತಿಗೆಂದು ಕೂತ ಬುದ್ದ ಆನಂದನಿಗೆ ಕುಡಿಯಲು ನೀರು ತರಲು ಹೇಳಿದ ನೀರಿಲ್ಲದೇ ಬಂದದ್ದನ್ನು : ನೋಡಿ ಬುದ್ಧ ಏನಾಯ್ತು ಎಂದು ಕೇಳಿದ ಈಗ ತಾನೆ ಆ ನೀರಿನಲ್ಲಿ ಒಂದು ಚಕ್ಕಡಿ ಹಾದು ಹೋಗಿದೆ ನೀರು ರಾಡಿಯಾಗಿದೆ. ಹಾಗಾ? ಹತ್ತು ನಿಮಿಷ ಬಿಟ್ಟು ಹೋಗು ಎಂದ ಬುದ್ಧ. ನಂತರ ಹೋದ ಆನಂದ ನೀರು ಇನ್ನೂ ರಾಡಿಯಾಗಿಯೇ ಇದೆ ಎನ್ನುತ್ತ ಬಂದ ಅರ್ಧ ತಾಸು ಬಿಟ್ಟು : ಹೋಗಿ ನೋಡು ಎಂದ ಬುದ್ಧ ಅರ್ಧ ತಾಸಿನ ನಂತರ ಆನಂದ ತಿಳಿನೀರನ್ನು ತೆಗೆದುಕೊಂಡು ಬಂದ. ಆಗ ಬುದ್ಧ ಶಿಷ್ಯನಿಗೆ ಹೇಳಿದ ಮಾತು ಬಹಳಷ್ಟು ಮಾರ್ಮಿಕವಾಗಿದೆ. ‘ನಮ್ಮ ಮನಸ್ಸು ಸಹ ಒರಟಾದದ್ದನ್ನು ಕೆಟ್ಟಿದ್ದನ್ನು ಕೇಳಿದಾಗ ರಾಡಿಯಾಗುತ್ತದೆ. ರಾಡಿಯಾಗಿದ್ದನ್ನು ತಿಳಿಯಾಗಿಸಲು ಹಾಗೆ ಬಿಟ್ಟು ಬಿಡಬೇಕು ಆಗ ಶಾಂತವಾಗುತ್ತದೆ.’
ಸಹನೆ
ಸಾಧನೆಯ ಪಥದಲ್ಲಿ ಸಾಗುವಾಗ ಹಲವರು ನಮಗೆ ಒರಟಾದ ಶಬ್ದಗಳನ್ನು ಉಪಯೋಗಿಸಿ ಮನಸ್ಸನ್ನು ನೋಯಿಸುತ್ತಾರೆ ಜನರ ಇಂಥ ಮಾತುಗಳು ತಪ್ಪಿದ್ದಲ್ಲ ಎಂಬುದನ್ನು ತಿಳಿದಿದ್ದರೂ ಅದನ್ನೇ ಮನಸ್ಸಿಗೆ : ಹಚ್ಚಿಕೊಂಡು ಕೊರಗುತ್ತೇವೆ ಅಂಥ ಸಂದರ್ಭದಲ್ಲೆಲ್ಲ ಬುದ್ಧನ : ಮಾತುಗಳನ್ನು ನೆನಪಿಸಿಕೊಳ್ಳಬೇಕು. ನೂರಾರು ಜನರು ತುಳಿದ ದಾರಿಯಲ್ಲಿ : ಕಲ್ಲು ಮುಳ್ಳುಗಳು ಕಡಿಮೆ. ಬೆರಳೆಣಿಕೆಯಷ್ಟು ಸಾಧಕರು ಸಾಗಿದ ದಾರಿ : ದುರ್ಲಭ. ದುರ್ಗಮ ದಾರಿಯಲ್ಲಿ ಸಾಗಬೇಕಾದರೆ ಮನಸ್ಸಿನ ನಿಯಂತ್ರಣ ಸಾಧಿಸಬೇಕು. ಇತರರ ಕಟು ಟೀಕೆಗಳಿಗೆ ನಿದ್ರೆಯಿಂದ ದೂರ : ಉಳಿಯುವುದು ಒಳ್ಳೆಯದಲ್ಲ. ಭಯ ಭ್ರಾಂತಿಗಳಿಗೆ ಒಳಗಾಗುವುದು ಹತಾಶರಾಗುವುದು ಅಪಾಯಕಾರಿ, ರೊಚ್ಚಿಗೆದ್ದು ಒರಟಾಗಿ ನಡೆದುಕೊಳ್ಳುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ‘ತಾಳ್ಮೆ ಕಹಿಯಾದರೂ ಅದರ ಫಲ ಸಿಹಿ.’ ಎನ್ನುವಂತೆ ಇಂತಹ ಸಮಯದಲ್ಲಿ ಎಲ್ಲವನ್ನೂ ಸಹಿಸುವ ಸ್ಥಿತಪ್ರಜ್ಞನಾಗದೇ ಹೋದರೂ ಸಹಿಸಿಕೊಳ್ಳುವ ಶಕ್ತಿಯನ್ನು ಸಾಧಿಸಬೇಕು.
ಮನ್ನಣೆ

ಎಲ್ಲವೂ ನಿಮಗೆ ಎಲ್ಲ ಸಮಯದಲ್ಲಿ ಅನುಕೂಲವಾಗಿರುತ್ತದೆ ಅಂತ ಅಂದುಕೊಳ್ಳಬಾರದು ನಿಮಗೆ ಸಮಸ್ಯೆ ಎದುರಾದಾಗ ‘ಇದ್ದಾಗ ನಿಮ್ಮೊಂದಿಗೆ ತಿಂದುಂಡವರು ಕೂಡ ಹತ್ತಿರ ಸುಳಿಯುವುದಿಲ್ಲ.’ ಸರಿಯಾದ ಮನ್ನಣೆ ಇಲ್ಲದಿದ್ದರೂ ಆ ಸ್ಥಿತಿಯಿಂದ ಮೇಲಕ್ಕೆ ಬರಲು ಯೋಚಿಸಬೇಕು. ಅಂಬೇಡ್ಕರ್ ಓದುತ್ತಿದ್ದ ಸಮಯದಲ್ಲಿ ಅವರು ಅನುಭವಿಸಿದ ಅವಮಾನಗಳು ಅಷ್ಟಿಷ್ಟಲ್ಲ. ಅವರು ಕಷ್ಟಪಟ್ಟು ಓದಿ ಮೇಲೆ ಬಂದು ತನ್ನವರಿಗೆ ಎಣೆಯಿಲ್ಲದ ಸೇವೆ ಮಾಡಿದರು. ಮನ್ನಣೆ ಸಾಧಿಸಿದರು.
ನರಿ ಬರೆ
ಗುರಿ ಸಾಧನೆಯಲ್ಲಿ ಪ್ರಗತಿ ಸಾಧಿಸಬೇಕಾದರೆ ನೀವು ಮಾಡಲಿರುವ ಕೆಲಸಕ್ಕೆ ಒಳ್ಳೆಯ ಯೋಜನೆ ರೂಪಿಸಲು, ಯಾವಾಗ ಏನು ಮಾಡುವುದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಎನಃ ಬೇರೆಯವರ ಕೆಟ್ಟ ಮಾತುಗಳಿಗಲ್ಲ. ಇತರರ ಮಾತುಗಳಿಗೆ ತಲೆಕೆಡಿಸಿಕೊಳ್ಳುವವರೆಲ್ಲ ರಾತ್ರೋರಾತ್ರಿ ಯಶಸ್ಸು ಸಂಪಾದಿಸಬೇಕೆಂದು ಓಡಾಡುತ್ತಾರೆ. ಇಂಥವರ ಸ್ಥಿತಿ ಹುಲಿಯನ್ನು ನೋಡಿ ನರಿ ಬರೆ ಇಟ್ಟುಕೊಂಡಂತೆಯೇ, ಕುರುಕ್ಷೇತ್ರದಲ್ಲಿ ಅರ್ಜುನ ಗೊಂದಲದಲ್ಲಿದ್ದಾಗ ಶ್ರೀಕೃಷ್ಣ ಹೇಳಿದ ಮಾತು ನಿನ್ನ ಮನಸ್ಸು ಯಾವಾಗಲೂ ಸ್ಥಿತಪ್ರಜ್ಞವಾಗಿರಲಿ ಎಂದು. ಭಾವನಾತ್ಮವಾಗಿ ಹೆಚ್ಚು ತೊಡಕಿಗೆ ಸಿಲುಕಿಕೊಳ್ಳದವರು ಜೀವನದಲ್ಲಿ ಹೆಚ್ಚು ಸಾಧಿಸುತ್ತಾರೆ ಹಾಗಾದರೆ ತಡವೇಕೆ ಭಾವನಾತ್ಮಕ ನಿಯಂತ್ರಣ ಹೊಂದಿದವರ ಪಟ್ಟಿಯಲ್ಲಿ ಸೇರಲು ಸಿದ್ಧರಾಗಿ ಹೆಚ್ಚೆಚ್ಚು ಸಾಧಿಸಲು ಸನ್ನದ್ಧರಾಗಿ!

ಜಯಶ್ರೀ ಜೆ. ಅಬ್ಬಿಗೇರಿ. ಇಂಗ್ಲೀಷ್ ಉಪನ್ಯಾಸಕರು ಮೊಬೈಲ್ :9449234142
