--Ads--

ಆಲಯಗಳು ನೆಮ್ಮದಿ ನೀಡುವ ದಾರ್ಮಿಕ ಕೇಂದ್ರಗಳು:ಶಾಸಕ ಬಿ ಎನ್ ರವಿಕುಮಾರ್

On: July 13, 2026 4:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಆಲಯಗಳು ನೆಮ್ಮದಿ ನೀಡುವ ದಾರ್ಮಿಕ ಕೇಂದ್ರಗಳು: ಶಾಸಕ ಬಿ ಎನ್ ರವಿಕುಮಾರ್ 

ಶಿಡ್ಲಘಟ್ಟ : ನಗರದಲ್ಲಿರುವ ಶ್ರೀರಾಘವೇಂದ್ರಸ್ವಾಮಿಯು ಭಕ್ತಾದಿಗಳ ಕಷ್ಟಗಳನ್ನು ಈಡೇರಿಸುತ್ತಿದ್ದು ಭಕ್ತಾದಿಗಳ ಮನದಲ್ಲಿ ಸ್ವಾಮಿಗಳು ಉಳಿದಿದ್ದಾರೆ ದೇವಾಲಯದ
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುವುದು,ಮಠದ ಸೇವಾ ಕಾರ್ಯಗಳನ್ನು ಶಾಸಕ ಬಿ.ಎನ್.ರವಿಕುಮಾ‌ರ್ ಅವರು
ಶ್ಲಾಘಿಸಿದರು.

ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್‌ಯಿಂದ ಹಮ್ಮಿಕೊಂಡಿದ್ದ ನಗರದ ಮುತ್ತೂರು ಬೀದಿಯಲ್ಲಿನ ಶ್ರೀರಾಘವೇಂದ್ರ ಸ್ವಾಮಿ ಮಠದ ಕಟ್ಟಡ ಉದ್ಘಾಟನೆ ಹಾಗೂ ಶ್ರೀಕ್ಷೇತ್ರ ಕಿರು ಮಂತ್ರಾಲಯ ಸ್ಮರಣ ಗ್ರಂಥದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಸಾಮಾಜಿಕ ಸೌಹಾರ್ದತೆಯನ್ನೂ ಬೆಳೆಸುವಲ್ಲಿ ಮಠಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.

ಮಂಡ್ಯದ ಶ್ರೀ ವರಾಹ ಹರಿ ವಿಠಲದಾಸರು ಮಾತನಾಡಿ,
ಶ್ರೀರಾಘವೇಂದ್ರಸ್ವಾಮಿಗಳ ಆಶಯದಂತೆ ಪರೋಪಕಾರ ಮತ್ತು ಭಕ್ತಿಮಾರ್ಗದಲ್ಲಿ ನಡೆಯುವುದೇ ಮಠದ ಮೂಲ ಉದ್ದೇಶವಾಗಿದೆ ,ಮಠದ ಇತಿಹಾಸ ಹಾಗು ದಾನಿಗಳ ಸೇವೆಯನ್ನು ದಾಖಲಿಸುವ ಈ ಗ್ರಂಥ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ ಎಂದರು.

ಶ್ರೀವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಎಸ್.ಪ್ರಕಾಶ್ ಮಾತನಾಡಿ, ಮಂತ್ರಾಲಯಕ್ಕೆ ತೆರಳಲು ಸಾಧ್ಯವಾಗದ ಭಕ್ತರಿಗೆ ರಾಯರ ಸಾನ್ನಿಧ್ಯವನ್ನು ತಲುಪಿಸುವ ಉದ್ದೇಶದಿಂದ ದೇಶದ ವಿವಿಧೆಡೆ ಮೃತ್ತಿಕಾ ಬೃಂದಾವನಗಳು ಸ್ಥಾಪನೆಯಾಗಿದ್ದು, ನಗರದ ಶ್ರೀಕ್ಷೇತ್ರ ಕಿರು ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠಗಳಲ್ಲಿ ಪ್ರಮುಖವಾಗಿದೆ, ಸೇವೆ, ಸಮರ್ಪಣೆ ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ ಮಠ 4 ದಶಕಗಳಿಂದ ಭಕ್ತರಿಗೆ ನಂಬಿಕೆಯ ದೀಪವಾಗಿದೆ ಎಂದು ಹೇಳಿದರು.

ಈ ವೇಳೆ ನಗರದ ಮುತ್ತೂರು ಬೀದಿಯ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ, ಶ್ರೀಕ್ಷೇತ್ರ ಕಿರು ಮಂತ್ರಾಲಯ ಸ್ಮರಣ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಶ್ರೀರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್‌.ವಿ.ನಾಗರಾಜರಾವ್, ಕಾರ್ಯದರ್ಶಿ ಎನ್.ಶ್ರೀಕಾಂತ್,ವಾಸುದೇವರಾವ್,ಬಿ.ಆರ್.ಅನಂತಕೃಷ್ಣ,ಆರ್.ಮಧುಸೂದನ್,ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್.ರವಿ,ಕೃಷ್ಣಮೂರ್ತಿ, ಡಾ.ಸತ್ಯನಾರಾಯಣರಾವ್, ವಿ.ನವೀನ್, ಎಸ್.ಎನ್.ವಾಣಿ ಮತ್ತಿತರರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now