ಭಿನ್ನಾಭಿಪ್ರಾಯ ಬಿಟ್ಟು ಪಕ್ಷ ಬಲವರ್ಧನೆ ಮಾಡೋಣ : ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

ವಿಜಯ ದರ್ಪಣ ನ್ಯೂಸ್…..

ದೇವನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಂಘಟನಾ ಸಭೆ

ಭಿನ್ನಾಭಿಪ್ರಾಯ ಬಿಟ್ಟು ಪಕ್ಷ ಬಲವರ್ಧನೆ ಮಾಡೋಣ : ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ ಮಾರ್ಚ್ 02: ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ ಸಹ ಅವುಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟಿನಿಂದ ಹೋಗಬೇಕು ಹಾಗೂ ಪಕ್ಷವನ್ನು ಸಂಘಟಬೇಕೆಂದು ಮಾಜಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ದೇವನಹಳ್ಳಿ ಪಟ್ಟಣದಲ್ಲಿ ಇರುವ  ಅಂಬೇಡ್ಕರ್ ಭವನದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಪದಾಧಿಕಾರಿಗಳ ಪುನರ್ ನೇಮಕ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಹ ಕುಳಿತು ಮಾತನಾಡೋಣ, ಇದನ್ನು ಸರಿಪಡಿಸೋಣ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹೆಚ್ಚಿನ ಸ್ಥಾನಗಳನ್ನು ಬರುವಂತೆ ಮಾಡಬೇಕೆಂದರು.

ಮುಂಬರುವ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಸರ್ಕಾರದ ವೈಫಲ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಪ್ರತಿ ಹೋಬಳಿಯಲ್ಲಿಯೂ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಭೆಗಳನ್ನು ಮಾಡಿ ಜೆಡಿಎಸ್ ಪಕ್ಷ ಬಲಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎನ್ ಡಿ ಎ ಮೈತ್ರಿ ಅಭ್ಯರ್ಥಿ  ಹೆಚ್ ಡಿ ಕುಮಾರಸ್ವಾಮಿ  ಅವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುತ್ತಾರೆಂಬ ಆಶಾಭಾವನೆ ಹೊಂದಿದ್ದೇನೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಧ್ಯಕ್ಷರಾಗಿದ್ದ ಮುನೇಗೌಡಗೆ ಮತ್ತೆ ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ಶಿಫಾರಸು ಮಾಡಿದ್ದೆ. ಈಗ ನೂತನ ಜಿಲ್ಲಾಧ್ಯಕ್ಷರಾಗಿದ್ದ ಮಂಜುನಾಥ್ ಅವರಿಗೆ ನಾನು ಶಿಫಾರಸು ಮಾಡಿರಲಿಲ್ಲ. ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಅವರು ಕೆ.ವಿ.ಮಂಜುನಾಥ್ ಅವರಿಗೆ  ಪಕ್ಷ ಸಂಘಟನೆ ಮಾಡಲು ಜವಾಬ್ದಾರಿ ನೀಡಿದ್ದಾರೆಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷ ಕೊಡಗುರ್ಕಿ ಮಂಜುನಾಥ್  ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಿಲ್ಲಾಧ್ಯಕ್ಷರ ಹುದ್ದೆ  ಆಕಾಂಕ್ಷಿಯಾಗಿರಲಿಲ್ಲ. ಅದು ಬಯಸದೇ ಬಂದ ಭಾಗ್ಯವಾಗಿದೆ ನಾನು ಜೆಡಿಎಸ್‌ ಜಿಲ್ಲಾಧ್ಯಕ್ಷರಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಮಾಜಿ ಪ್ರಧಾನಮಂತ್ರಿ  ಹೆಚ್ ಡಿ ದೇವೇಗೌಡರು, ಕೇಂದ್ರ ಸಚಿವ ಹೆಚ್ ಡಿ  ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸುತ್ತೇನೆ.

ಹಾಗಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಿ ಪಕ್ಷವನ್ನು ಸುಭದ್ರವಾಗಿ ಕಟ್ಟಲು ಬೇಕಾದ ವಾತಾವರಣವನ್ನು ಸೃಷ್ಟಿಸಲಾಗುವುದು. ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರತಿಭಟನೆ ಮಾಡಿ ಚಾಟಿ ಬೀಸುವ ಕೆಲಸ ಮಾಡುತ್ತೇನೆ ಎಂದರು.

ಜೆಡಿಎಸ್ ಪಕ್ಷದ ಬೆನ್ನೆಲುಬು ಕಾರ್ಯಕರ್ತರು, ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ ಮುಂದಿನ ಚುನಾವಣೆಗಳನ್ನು ಎದುರಿಸುತ್ತೇವೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾಜಿ ಬಮುಲ್ ನಿರ್ದೇಶಕ ಇರಗೇನಹಳ್ಳಿ ಶ್ರೀನಿವಾಸ್ ಮಾತನಾಡುತ್ತಾ ಪಕ್ಷದ ಮುಖಂಡರುಗಳಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಜಿಲ್ಲಾಧ್ಯಕ್ಷರಿಗೆ ಸಲಹೆಯನ್ನು ನೀಡಿದರು.

ದೇವನಹಳ್ಳಿ ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ನಿರ್ದೇಶಕ ಚಿಕ್ಕನಹಳ್ಳಿ ಸುಬ್ಬಣ್ಣ ಮಾತನಾಡುತ್ತಾ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ, ಇವತ್ತು ಜೆಡಿಎಸ್ ಪಕ್ಷಕ್ಕೆ ಅನ್ಯಾಯವಾಗುತ್ತಿರುವುದು ಮುಖಂಡರಿಂದ ಹೊರತು ಕಾರ್ಯಕರ್ತರಿಂದ ಅಲ್ಲ ಎಂದರು. ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ , ಹಾಗಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅವರಿಗೆ ಸ್ಥಾನಮಾನವನ್ನು ನೀಡಿದರೆ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅನುಕೂಲವಾಗುತ್ತದೆ ಸಲಹೆ ನೀಡಿದರು.

ಸಭೆಯಲ್ಲಿ  ದೇವನಹಳ್ಳಿ ಪುರಸಭೆ ಮಾಜಿ ಸದಸ್ಯ ಕಾಳಪ್ಪನವರ ವೆಂಕಟೇಶ್, ಟಿಪಿಸಿಎಂಎಸ್ ಮಾಜಿ ನಿರ್ದೇಶಕ ಕಗ್ಗಲಹಳ್ಳಿ ಗುರಪ್ಪ ,ಟಿಎಪಿಸಿಎಂಎಸ್ ನಿರ್ದೇಶಕ ಯರ್ತಿಗಾನಹಳ್ಳಿ ಶಿವಣ್ಣ, ಎಸ್ ಸಿ ಘಟಕದ ಮಾಜಿ ಅಧ್ಯಕ್ಷ ಯರ್ತಿಗಾನಹಳ್ಳಿ ಶಾಮಣ್ಣ, ಗಂಟೆಗಾನಹಳ್ಳಿ ಬಾಬು, ತಾಲೂಕು ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮನುಕೃಷ್ಣಪ್ಪ, ಇವರುಗಳು ಮಾತನಾಡಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕೆಂದು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ದೇವನಹಳ್ಳಿ ತಾಲೂಕು ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ,  ಗಂಟಿಗಾನಹಳ್ಳಿ ಬಾಬು, ಬಮೂಲ್ ಮಾಜಿ ನಿರ್ದೇಶಕ ಇರೀಗೇನಹಳ್ಳಿ ಶ್ರೀನಿವಾಸ್, ಬಮಲ್ ಮಾಜಿ ನಿರ್ದೇಶಕ ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಕಸಬಾ ಹೋಬಳಿ ಮಾಜಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಪ್ರಚಾರ ಸಮಿತಿ ಮಾಜಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಟಿ ಹೊಸಹಳ್ಳಿ ರವಿ, ದುದ್ದನಹಳ್ಳಿ ಮುನಿರಾಜು, ತಾಪಂ ಮಾಜಿ ಸದಸ್ಯ ಸಾದಹಳ್ಳಿ ಎಸ್ ಮಹೇಶ್, ರಾಜ್ಯ ಸಮಿತಿ ಮಾಜಿ ಸದಸ್ಯ ಬೂದಿಗೆರೆ ಶ್ರೀನಾಥ್, ಕುಂದಾಣ ಹೋಬಳಿ ಮಾಜಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್‌, ದೇವನಹಳ್ಳಿ ಟೌನ್‌ ಮಾಜಿ ಅಧ್ಯಕ್ಷ ಮುನಿನಂಜಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು,   ತಾಲ್ಲೂಕು ಎಸ್.ಟಿ ಘಟಕದ ಮಾಜಿ ಅಧ್ಯಕ್ಷ ವೆಂಕಟೇಶ್‌ ಮೂರ್ತಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮೀನಾಕ್ಷಮ್ಮ , ಮಾಜಿ ಪ್ರಧಾನ ಕಾರ್ಯದರ್ಶಿ ಕೆ ಬಿ ಶೈಲಜ,  ದೇವನಹಳ್ಳಿ ಪುರಸಭಾ ಮಾಜಿ ಸದಸ್ಯರಾದ ಕಾಳಪ್ಪನವರ ವೆಂಕಟೇಶ್, ಕೋಡಿಮಂಚೇನಹಳ್ಳಿ ನಾಗೇಶ್, ದೇವರಾಜ್ , ತಾಲ್ಲೂಕು ಸೊಸೈಟಿ ಉಪಾಧ್ಯಕ್ಷೆ ಕಾಂತಮ್ಮ, ನಿರ್ದೇಶಕರಾದ  ಎಂ ಗಂಗಾಧರ, ಯರ್ತಿಗಾನಹಳ್ಳಿ ಶಿವಣ್ಣ,  ಆವತಿ ಮಂಜುನಾಥ್, ಯಲಿಯೂರು ಚಂದ್ರಶೇಖರ್,  ಬೆಟ್ಟೇನಹಳ್ಳಿ ಭಾಗ್ಯಮ್ಮ, ತೆಲ್ಲಹಳ್ಳಿ ಶಿವಾನಂದ ಟಿಎಪಿಎಂಎಸ್ ಮಾಜಿ ನಿರ್ದೇಶಕ  ಯಂಬ್ರಹಳ್ಳಿ ರವಿ ,  ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ  ಅಧ್ಯಕ್ಷರಾದ ಆಲೂರು ಪಟಾಲಪ್ಪ. ಗಂಗವಾರ ಚೌಡಪನಹಳ್ಳಿ ಸಂಪಂಗಪ್ಪ ,ಯಲಿಯೂರು ಹನುಮಪ್ಪ, ಧರ್ಮಪುರ ಎಂ ಬಸವರಾಜ್, ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಬೀರಸಂದ್ರ ಅನು, ಐಬಸಾಪುರ ಎಸ್ ಮುನೇಗೌಡ,ಎಸ್‌ಎಲ್‌ಎನ್ ಮುನಿರಾಜ್, ತೂಬಿಗರೆ ಹೋಬಳಿ ಮಾಜಿ ಅಧ್ಯಕ್ಷ ದೇವರಾಜ್ ,

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಮಂಡಿಬೆಲೆ ರಾಜಣ್ಣ, ಕನ್ನಮಂಗಲ ಶ್ರೀರಾಮಣ್ಣ,  ಮುಖಂಡರಾದ ಹೊಸಹುಡ್ಯ ನಾರಾಯಣ ಚಾರ್ , ವೆಂಕಟೇಶ್, ಲಕ್ಷ್ಮಿನಾರಾಯಣ್‌, ಯುವ ಮುಖಂಡ ಗೊಡ್ಲುಮುದ್ದೆನಹಳ್ಳಿ ಸುರೇಶ್, ಗೋಣೂರು ಮನೋಹರ್, ಪ್ರಕಾಶ್ ,ಸಾವಕನಹಳ್ಳಿ ಮುನಿರಾಮಣ್ಣ, ಮತ್ತಿತರರಿದ್ದರು.