--Ads--

ಹೆಣ್ಣು ಮಕ್ಕಳ ಬಗ್ಗೆ ಮೂಢನಂಬಿಕೆಗಳನ್ನು ದೂರವಿಡಬೇಕು : ಚಿ.ಮಾ.ಸುಧಾಕರ

On: March 8, 2026 1:39 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಹೆಣ್ಣು ಮಕ್ಕಳ ಬಗ್ಗೆ ಮೂಢನಂಬಿಕೆಗಳನ್ನು ದೂರವಿಡಬೇಕು : ಚಿ.ಮಾ.ಸುಧಾಕರ

ವಿಜಯಪುರ : ಮಹಿಳಾ-ದಿನಾಚರಣೆಯನ್ನು (ಮಾರ್ಚ್ 8) ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸಲು ಹಾಗೂ ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣ, ಹಕ್ಕುಗಳ ರಕ್ಷಣೆ, ತಾರತಮ್ಯದ ನಿರ್ಮೂಲನೆ ಮತ್ತು ಸಮಾಜದಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸುವುದು ಎಂದು ತಿಳಿಯಪಡಿಸುತ್ತಾ ಮಹಿಳೆಯರ ಬಗ್ಗೆ ಮೂಡನಂಬಿಕೆಗಳನ್ನು ಬಿಟ್ಟು ಸಮಾಜದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ ತಿಳಿಸಿದರು.

ವಿಜಯಪುರ ಪಟ್ಟಣದ ಕೋಟೆ ಬೀದಿಯಲ್ಲಿರುವ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸ್ವರ್ಣ ಗೌರಿ ಮಹದೇವ್ ರವರ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕದಡಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡುತ್ತಾ ಮಹಿಳೆಯರಿಗೆ ದೇಣಿಗೆ, ಜ್ಞಾನ, ಸಂಪನ್ಮೂಲಗಳು, ಮೂಲಸೌಕರ್ಯ, ಗೋಚರತೆ, ವಕಾಲತ್ತು, ಶಿಕ್ಷಣ, ತರಬೇತಿ, ಮಾರ್ಗದರ್ಶನ ಅಥವಾ ಸಮಯದ ಮೂಲಕ ಮಹಿಳೆಯರ ಪ್ರಗತಿಗೆ ಕೊಡುಗೆ ನೀಡುವುದು ಹೆಚ್ಚು ಬೆಂಬಲ ನೀಡುವ ಮತ್ತು ಪರಸ್ಪರ ಸಂಬಂಧ ಹೊಂದಿರುವ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷ ಶ್ರೀಮತಿ ಸ್ವರ್ಣ ಗೌರಿ ಮಹದೇವ್ ಮಾತನಾಡುತ್ತಾ ಅಂತರರಾಷ್ಟ್ರೀಯ ಮಹಿಳಾ ದಿನದ ಇತಿಹಾಸವು ತುಂಬಾ ಹಳೆಯದು. ಇದು 20 ನೇ ಶತಮಾನದ ಆರಂಭದ ಮೊದಲು ಭಾರತದಲ್ಲಿ ಬೇರುಗಳನ್ನು ಹೊಂದಿದ್ದು, ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಭಾರತೀಯ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿದ ಅವಧಿಯಲ್ಲಿ ವ್ಯಾಪಕ ಮನ್ನಣೆಯನ್ನು ಪಡೆಯಿತು. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮೊದಲ ಬಾರಿಗೆ ಯಾವಾಗ ಆಚರಿಸಲಾಯಿತು? ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು 1911 ರಲ್ಲಿ ಆಚರಿಸಲಾಯಿತು. ಮಹಿಳೆಯರ ಮತದಾನದ ಹಕ್ಕು, ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಲಿಂಗ ಸಮಾನತೆಗಾಗಿ ತೀವ್ರವಾದ ವಕಾಲತ್ತು ಅವಧಿಯಲ್ಲಿ ಇದು ಒಂದು ಪ್ರಮುಖ ಕ್ಷಣವಾಗಿ ಹೊರಹೊಮ್ಮಿತು.

ಮಹಿಳಾ ಹಕ್ಕುಗಳು ಮತ್ತು ಕಾರ್ಮಿಕ ಕ್ರಿಯಾಶೀಲತೆಗಾಗಿ ಚಳುವಳಿಗಳಿಂದ ಪ್ರೇರಿತರಾಗಿ, ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಚರಿಸಲಾಯಿತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಹಿಳೆಯರು ಸಮಾಜದಲ್ಲಿ ಉತ್ತಮ ಚಿಕಿತ್ಸೆ ಮತ್ತು ಪ್ರಾತಿನಿಧ್ಯಕ್ಕಾಗಿ ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಇದು ವೈವಿಧ್ಯಮಯ ಹಿನ್ನೆಲೆಗಳು, ಸಂಸ್ಕೃತಿಗಳು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಮಹಿಳೆಯರಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಸಂಕೇತಿಸುತ್ತದೆ. ಅಂದಿನಿಂದ, 1910 ರಲ್ಲಿ ಕೋಪನ್ ಹ್ಯಾಗನ್‌ನಲ್ಲಿ ನಡೆದ ಸಮಾಜವಾದಿ ಅಂತರರಾಷ್ಟ್ರೀಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ನಂತರ, ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಬೆಸ್ಕಾಂ ನೌಕರರಾದ ಶಿವಮ್ಮ(ಶುಭ) ಚಂದ್ರಶೇಖರ್ ಭಗವದ್ಗೀತೆಯ ಪರಿಚಯಕರಾದ ಶೈಲಜಾ ಶಾಂತವೀರಣ್ಣ ರವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಆರ್ ಮುನಿರಾಜು, ದೀಪ ಮೂರ್ತಿ, ಶ್ವೇತ ಮಂಜುನಾಥ್, ಸೌಮ್ಯ ಶಶಿಧರ್, ಮಂಜುಳಾ ಉಮೇಶ್ ಚಂದ್ರ ,ಆಶಾ ರವಿ, ಇಂದ್ರಾಣಿ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now