ವಿಜಯ ದರ್ಪಣ ನ್ಯೂಸ್……
ಗೋವಾದ ನಡೆದ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ: 751 ಪೂರ್ಣ ಕುಂಭ ಹೊತ್ತ ಮಹಿಳೆಯರ ಮೆರವಣಿಗೆಗೆ ಚಾಲನೇ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ.
ಬಿಚ್ಚೋಲಿಯಂ, ಗೋವಾ : ಕನ್ನಡ ಪ್ರಾಚೀನ ಭಾಷೆಗಳಲ್ಲಿ ಒಂದು ಅಲ್ಲದೆ ಈ ಕನ್ನಡವು ಭಾರತದ 4 ಪ್ರಮುಖ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದ್ದು, ದೀರ್ಘ ಇತಿಹಾಸ ಮತ್ತು ಸ್ವತಂತ್ರ ಸಾಹಿತ್ಯ ಪರಂಪರೆಯವನ್ನು ಹೊಂದಿದೆ. ಕನ್ನಡವು ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆಯಾಗಿದೆ.
ಕನ್ನಡ ಸಾಹಿತ್ಯದ ಅನೇಕ ಕೃತಿಗಳು ಜಗತ್ತಿನ ಬೇರೆ ಎಲ್ಲಾ ಭಾಷೆಗಳಿಗೆ ಭಾಷಾಂತರ ಕೊಂಡು ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಕನ್ನಡಪರ ಚಿಂತಕ ಕನ್ನಡದ ನುಡಿ ಸೇವಕ ಜನಪ್ರಿಯ ಸಮಾಜಸೇವಕರು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ.ಸಂಗನ ಬಸಪ್ಪ ಬಿರಾದಾರ್ ಹೇಳಿದರು.
ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿಶಿಷ್ಟ ಪೂರ್ಣವಾಗಿದ್ದು ಸುಮಾರು 751 ಮಹಿಳೆಯರು ಪೂರ್ಣ ಕುಂಬದೊಂದಿಗೆ ಸಾಂಸ್ಕೃತಿಕ ಕಲಾತಂಡಗಳ ವೈಭವಯುತ ಅದ್ದೂರಿ ಮೆರವಣಿಗೆಯಲ್ಲಿ ನನ್ನನ್ನು ಸಮ್ಮೇಳನ ಅಧ್ಯಕ್ಷನಾಗಿ ಸ್ಥಳೀಯರಿಂದ ಅಪಾರ ಗೌರವ ಸನ್ಮಾನ ಪ್ರೀತಿ ಗೌರವ ಆದರಗಳೊಂದಿಗೆ ಆತಿಥಿ ಸತ್ಕಾರ ನೀಡಿ ಕಾರ್ಯಕ್ರಮವನ್ನು ಅದ್ಭುತ ಪೂರ್ವ ಯಶಸ್ಸು ಗೂಳಿಸಲು ಗೋವಾದ ಕನ್ನಡಿಗರು ಕಾರಣ ಎಂದು ಡಾ. ಸಂಗನ ಬಸಪ್ಪ ಬಿರಾದಾರ್ ಭಾವುಕರಾಗಿ ಹೇಳಿದರು.
ಈ ಗೋವಾದ ಕರ್ಮಭೂಮಿಯಲ್ಲಿ ನಮ್ಮ ಕನ್ನಡ ಪದ ಸಹೋದರ ಸಹಕಾರ ಇಲ್ಲಿನ ಜನತೆಯೊಂದಿಗೆ ಅವರ ರೀತಿ ನೀತಿ ಸಂಸ್ಕಾರದೊಂದಿಗೆ ಬೆರೆತು ತಾವು ಬೆಳೆದು ತಮ್ಮ ಉದ್ಯೋಗ ಅಭಿವೃದ್ಧಿ ಮಾಡಿಕೊಂಡು ಗೋವಾದಲ್ಲಿ ಕನ್ನಡದ ಕನ್ನಡಿಗರ ಅಭಿವೃದ್ಧಿಗಾಗಿ ಕನ್ನಡ ಜನತೆಗೆ ದೊಡ್ಡ ಕೊಡುಗೆಯಾಗಿ ಸಮಾಜವನ್ನು ಮುನ್ನಡೆಸುವ ಕಾರ್ಯ ಈ ರೀತಿ ನಿರಂತರವಾಗಿ ಆಗಬೇಕು ಎಂದರು.
ಅವರು ಸಮ್ಮೇಳನ ಅಧ್ಯಕ್ಷರ ನುಡಿಯಲ್ಲಿ ಕನ್ನಡ ನಾಡು ನುಡಿ ಪರಂಪರೆಯ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತಾ ಗೋವಾದ ಬಿಚ್ಚುಲಿಯಂ ಕನ್ನಡಿಗರ ಒಳ್ಳೆಯ ಗುಣ ಗೋವಾದಲ್ಲಿ ಕನ್ನಡ ತೇರನ್ನು ಎಳೆಯಲು ಸಹಕಾರಿಯಾಗಿದೆ ಎಂದರು.
ಗೋವಾ ರಾಜ್ಯದಲ್ಲಿ ಕರ್ಮ ಭೂಮಿ ಕನ್ನಡ ಸಂಘ ಬಿಚ್ಚೋಲಿ ಮತ್ತು ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಜಂಟಿ ಆಶ್ರಯದಲ್ಲಿ ಗೋವಾದಲ್ಲಿ 16ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲಿ ಪದ್ಮಶ್ರೀ ಸದ್ಗುರು ಬ್ರಮ್ಹೇಶಾನಂಧ ಸ್ವಾಮಿಜಿ ಗೋವಾ, ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ,
ಶ್ರೀ ಕರಿಸಿದ್ದೇಶ್ವರ ಪಟ್ಟದ ಪೂಜ್ಯರು ಹಳೆತೋರಗಲ್ಲ ಇವರು ದಿವ್ಯ ಸಾನಿಧ್ಯದಲ್ಲಿ ಹಾಗೂ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರ ಉಪಸ್ಥಿತಿಯಲ್ಲಿ ಕನ್ನಡಿಗರಿಗೆ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಯಿತು ಎಂದರು.
ಗೋವಾದ ಹನುಮಂತರೆಡ್ಡಿ ಶಿರೂರ್ ಬೆಂಗಳೂರಿನ ಮಹೇಶ್ ಬಾಬು ಸುರ್ವೆ ಅವರ ಮುಂದಾಳತ್ವದಲ್ಲಿ ನಡೆದ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಡಾ. ಸಂಗನ ಬಸಪ್ಪ ಬಿರಾದಾರ ಪಂಪ, ರನ್ನ, ಪೊನ್ನರಿಂದ ಹಿಡಿದು ಆಧುನಿಕ ಕವಿಗಳ ಭವ್ಯ ಪರಂಪರೆ ಹೊಂದಿದೆ.
ಅದರಂತೆ ಗೋವಾದಲ್ಲಿ ನೆಲೆಸಿದ ನಮ್ಮ ಕನ್ನಡಿಗರು ಈ ಅದ್ಭುತ ಕಾರ್ಯಕ್ರಮಕ್ಕೆ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರು 751ಕ್ಕೂ ಹೆಚ್ಚು ಪೂರ್ಣ ತುಂಬಾ ಹೊತ್ತ ಮೇಳಕ್ಕೆ ಚಾಲನೆ ನೀಡಿದ್ದು ನಮ್ಮೇಲರಿಗೂ ಖುಷಿ ತಂದಿದೆ.
ಅದಲ್ಲದೆ ನಮ್ಮ ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ್ದು ನಮ್ಮ ಆರುವರೆ ಕೋಟಿ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದು ನಮ್ಮ ಗೋವಾದ ಜನತೆಗೆ ವಿಶೇಷವಾಗಿ ಮಹೇಶ್ ಬಾಬು ಸುರ್ವೆ, ನಂದೀಶ್ ಇವರಿಗೆ ಅಭಿನಂದನೆಗಳು ಡಾ ಸಂಗನ ಬಸಪ್ಪ ಬಿರಾದಾರ್ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರು.

ಪೂರ್ಣ ಕುಂಭ ಹೂತ್ತ ಮಹಿಳೆಯರೊಂದಿಗೆ ಬೆಂಗಳೂರಿನ ಗಂಗಾಧರ್ ತಂಡದಿಂದ ವೀರಗಾಸೆ.
ತುಮಕೂರಿನ ಲತಾ ತಂಡದಿಂದ ಸಮಾಳವಾದನ
ಕೊಪ್ಪಳದ ಶರಣಯ್ಯ ಇಟಿಗಿ ತಂಡದಿಂದ ಮಹಿಳಾ ಡೊಳ್ಳು ಮತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ವೈವಿದ್ಯಮಯ ಮೆರವಣಿಗೆ ಸೇರಿದ್ದ ಸಹಸ್ರಾರು ಗೋವಾ ಪ್ರೇಕ್ಷಕರ ಮನ ಸೂರೆಗೊಂಡವು.
ವೇದಿಕೆ ಮೇಲೆ ಬೆಂಗಳೂರಿನ ಎಚ್ ಎಸ್ ಬೋವನಾಗೌಡ ನೇತೃತ್ವದ ಗೆಜ್ಜೆನಾದ ನೃತ್ಯ ಮಂದಿರ
ತಂಡದ ಸಮೂಹನೃತ್ಯ ಬಿಜಾಪುರಿನ ಲಕ್ಷ್ಮಿ ತಂಡದಿಂದ ನೃತ್ಯ ರೂಪಕ ಬೆಂಗಳೂರಿನ ರುಕ್ಮಿಣಿ ಸುರುವೆ ಎಂ ತಂಡದಿಂದ ಸಮಾಹ ನೃತ್ಯ.ರಾಯಚೂರಿನ ಗುರುರಾಜ್ ಶಾಸ್ತ್ರಿ ತಂಡದಿಂದ ಭರತನಾಟ್ಯ ಬೆಂಗಳೂರಿನ ಜಿ ವಿ ಶೀಲಾ ತಂಡದಿಂದ ಸಮೂಹ ನೃತ್ಯ ಹುಬ್ಬಳ್ಳಿಯ ಜಯಶ್ರೀ ಗಲಗಲಿ ತಂಡದಿಂದ ಭರತನಾಟ್ಯ ನೃತ್ಯ ರೂಪಕ, ಬೆಂಗಳೂರಿನ ಅನುಷಾ ಆರ್ ತಂಡದಿಂದ ಜಾನಪದ ನೃತ್ಯ, ಬೆಳಗಾವನ ಮಾಧುರಿ ತಂಡದಿಂದ ಶಾಸ್ತ್ರೀಯ ನೃತ್ಯ, ಬೆಂಗಳೂರಿನ ಉಮಾಮಹೇಶ್ವರಿ ಯವರ ಸೋಲೋ ನೃತ್ಯ, ಗೋವಾದ ಶ್ರೀಮತಿ ರೇಖಾ. ಆರಾಧ್ಯ, ಮತ್ತು ಸುಮನ್ ತಂಡದಿಂದ ವಿಶೇಷ ನರೆದಿದ್ದ ಪ್ರೇಕ್ಷಕರ ಗಮನ ಸೆಳೆದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕಲಾತಂಡಗಳ ಪ್ರಯೋಜನೆ ಮಾಡಿತ್ತು. ಗೋವಾದ ಬಿಚ್ಚೋಲಿಯಲ್ಲಿ ಕನ್ನಡ ಹಬ್ಬದ ವಾತಾವರಣ ಮನೆ ಮಾಡಿತ್ತು. ಬಿಚ್ಚುಲಿಯಂ ನ ರಾಜಬೀದಿಯಲ್ಲಿ ಕನ್ನಡ ಬಾವುಟಗಳು ರಾಜಾಸುತ್ತಿದವು. ಡೊಳ್ಳು ಕುಣಿತ ವೀರಗಾಸೆ ನೃತ್ಯ ಕೋಲಾಟ ಕಂಸಾಳೆ ವಿವಿಧ ಕಲಾತಂಡಗಳ ಮೂಲಕ ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಸ್ಥಾಪಿಸಿ ಸಮ್ಮೇಳನಾಧ್ಯಕ್ಷ
ಡಾ.ಸಂಗನಬಸಪ್ಪ ಬಿರಾದಾರ್ ಅವರಿಂದ ಮೆರವಣಿಗೆಯಲ್ಲಿ ವೇದಿಕೆಗೆ ತರಲಾಯಿತು.
ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಸಲಾಯಿತು.
ರಾಜ್ಯದ ವಿವಿಧ ಕ್ಷೇತ್ರದ ಸಾಧಕರಿಗೆ ಕರುನಾಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಪ್ರೇಮೆಂದ್ರ ವಿ ಶೇಠ್ , ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಕರ್ನಾಟಕ ಗಣಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ
ಡಾ. ಸಂಗನ ಬಸಪ್ಪ ಬಿರಾದಾರ ಅವರ ಸಹೋಧರ ರಾಜ್ ಕುಮಾರ್ ಮತ್ತು ಕುಟುಂಬ ಸದಸ್ಯರು, ಬಾಗಲಗುಂಟೆ ವಾರ್ಡ ಬಿಜೆಪಿ ಅಧ್ಯಕ್ಷ ಮಧುಸೂದನ್, ಖ್ಯಾತ ವೈದ್ಯ ಡಾ ಬಿ ಎಂ ಬಳ್ಳಾರಿ,ಸುರೇಶ್ ದೊಡ್ಡಮನಿ, ಶರಣಬಸವೇಶ ಆಲೂರ್, ನಿವೃತ್ತ ವೀರ ಯೋಧರ ಚನ್ನಾರೆಡ್ಡಿ, ನಾಗರಾಜ್ ಹುಬ್ಬಳ್ಳಿ, ಮುತ್ತುರಾಜ್ ಹಾಳಕಿ
ಕೊಪ್ಪಳದ ಎಮ್ ಸಾಧಿಕ ಅಲಿ ಕೇ ಎಲ್ ಕುಂದರಗಿ
ರವೀಂದ್ರ ತೋಟಗೇರ್, ಪ್ರಕಾಶ್ ಅಳೂಳ್ಳಿ
ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತ ಶಿರೂರ್ ರೆಡ್ಡಿ ಅತಿಥಿಗಳನ್ನ ಸ್ವಾಗತಿಸಿದರು.
ಸಮ್ಮೇಳನದ ಸಂಚಾಲಕ ಮಹೇಶ್ ಬಾಬು ಸುರ್ವೆ
ಪ್ರಾಸ್ತಾವಿಕವಾಗಿ ಮಾತಾಡಿದರು.
ಜೀ ನಂದೀಶ ವಂದನಾರ್ಪಣೆ ಮಾಡಿದರು.
ಗೋವಾದ ಶ್ರೀಮತಿ ಶಿಲಾಮೆಸ್ತಾ ಕಾರ್ಯಕ್ರಮ ನಿರೂಪಣೆ ಮಾಡಿದರು.






