--Ads--

ಕೌಶಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ :  ಮುಖ್ಯೋಪಾಧ್ಯಾಯ ಎನ್.ಸತೀಶ್

On: April 28, 2026 6:57 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕೌಶಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ : ಮುಖ್ಯೋಪಾಧ್ಯಾಯ ಎನ್.ಸತೀಶ್

ಶಿಡ್ಲಘಟ್ಟ : ದೇಶದ ಭವ್ಯ ನಾಗರಿಕರಾಗಲು ಶಿಬಿರಗಳು ಸಹಕಾರಿಯಾಗಲಿದ್ದು, ಶಿಬಿರದಲ್ಲಿ ನಾನಾ ವಿಧದ ಜೀವನ ಕೌಶಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು
ಶಾಲೆಯ ಮುಖ್ಯೋಪಾಧ್ಯಾಯ ಎನ್.ಸತೀಶ್ ತಿಳಿಸಿದರು.

ನಗರದ S‌.R.Citizen ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂರು ದಿನಗಳ ಬೇಸಿಗೆ ಶಿಬಿರ ಹಾಗೂ ರಾಜ್ಯಪಾಲರ ಪ್ರಶಸ್ತಿ ತಯಾರಿ ಶಿಬಿರದಲ್ಲಿ ಅವರು ಮಾತನಾಡಿದರು.

2023-24ರ ಸಾಲಿನಲ್ಲಿ ಮೂರು ವಿದ್ಯಾರ್ಥಿಗಳು ಹಾಗೂ 2024 – 25 ರ ಸಾಲಿನಲ್ಲಿ ಒಂಬತ್ತು ಜನ ವಿದ್ಯಾರ್ಥಿಗಳು ರಾಜ್ಯಪಾಲರ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ, ಈ ವರ್ಷ ಈ ವರ್ಷ ಒಟ್ಟು 27 ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಶಾಲೆಗೆ ಕೀರ್ತಿ ತನ್ನಿ ಎಂದು ಹಾರೈಸಿದರು.

ಈ ವೇಳೆ ಶಿಬಿರದಲ್ಲಿ ನಾನಾ ವಿಧದ ಜೀವನ ಕೌಶಲ್ಯಗಳ ಬಗ್ಗೆ ತಿಳಿಸಲಾಯಿತು ಮತ್ತು ಮುಂಬರುವ ರಾಜ್ಯಪಾಲರ ಪ್ರಶಸ್ತಿಗೆ ಸಂಬಂಧಿಸಿದ ತಯಾರಿ ಶಿಬಿರ ಹಮ್ಮಿಕೊಳ್ಳಲಾಗಿತ್ತು ,ಶಿಬಿರದಲ್ಲಿ ಸೈಟ್ ನಾಯಕರಾಗಿ ಆರ್.ನಾಗರಾಜು, ಗೈಡ್ ಶಿಕ್ಷಕಿಯಾಗಿ ಸತ್ಯ ಜ್ಯೋತಿ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖ‌ರ್,ಹರ್ಷಿತ, ರೂಪ, ಮಂಜುನಾಥ್ ಹಾಗು ಶಿಕ್ಷಕರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಾಲ ವಸೂಲಾತಿ ಕೊರತೆಯಿಂದ ಪಿ.ಎಲ್.ಡಿ. ಬ್ಯಾಂಕ್ 8 ಕೋಟಿ ರೂ. ನಷ್ಟದಲ್ಲಿದೆ: ಬಂಕ್ ಮುನಿಯಪ್ಪ

ಪ್ರಧಾನಿ ನರೇಂದ್ರ ಮೋದೀಜಿ ಅವರ ಜನ್ಮದಿನದ ಅಂಗವಾಗಿ 10 ಸಾವಿರ ದೀಪಗಳನ್ನು ಬೆಳಗಿಸುವ ಮೂಲಕ “ಆಶೀರ್ವಾದದ ದೀಪ” ಕಾರ್ಯಕ್ರಮ ಭಕ್ತಿಭಾವ ಸಂಭ್ರಮದಿಂದ ಆಚರಣೆ

ರೇಷ್ಮೆ ಆಧಾರಿತ ಕೈಗಾರಿಕೆಗಳು, ಮಹಿಳೆಯರಿಗೆ ಗಾರ್ಮೆಂಟ್ಸ್ ತಾಲ್ಲೂಕಿನಲ್ಲೇ ಸ್ಥಾಪಿಸಬೇಕು : ಸಾಮಾಜಿಕ ಹೋರಾಟಗಾರ ನವಾಜ್ ಪಾಷ

ಹಿರಿಯರಿಗೆ ಹಾಗೂ ದಿವ್ಯಾಂಗರಿಗೆ ಆತ್ಮವಿಶ್ವಾಸ ನೀಡುವ ಕೆಲಸದಲ್ಲಿ ಸಾರ್ಥಕತೆಯ ಭಾವ: ಸಂಸದ ಡಾ.ಕೆ.ಸುಧಾಕರ್‌

ಶಾಲಾಭಿವೃದ್ಧಿ ಸಮಿತಿಯಿಂದ ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ನೌಕರರಿಗೆ ಗೌರಿ ಗಣೇಶ ಹಬ್ಬದ ಬಾಗಿನ ಪ್ರದಾನ , ಸನ್ಮಾನ

ಶಿಡ್ಲಘಟ್ಟ ಪಿ.ಎಲ್‌.ಡಿ ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆ ಸೆಪ್ಟಂಬರ್ -19ಕ್ಕೆ