--Ads--

ಗ್ರಾಮೀಣ ಭಾಗದ ಬದುಕಿನ ಆರ್ಥಿಕತೆಗೆ ಹೈನುಗಾರಿಕೆಯಲ್ಲಿ ತೊಡಗಿ

On: August 4, 2026 8:10 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಗ್ರಾಮೀಣ ಭಾಗದ ಬದುಕಿನ ಆರ್ಥಿಕತೆಗೆ ಹೈನುಗಾರಿಕೆಯಲ್ಲಿ ತೊಡಗಿ 

ಶಿಡ್ಲಘಟ್ಟ : ಹೈನುಗಾರಿಕೆ ನಷ್ಟ ಉಂಟಾದಾಗ ಗುಂಪು ರಾಸು ವಿಮೆ ಯೋಜನೆ ಆರ್ಥಿಕ ಭದ್ರತೆ ಒದಗಿಸುತ್ತದೆ ರೈತರು ವಿಮೆ ಸೇರಿ ಇಲಾಖೆ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.

ನಗರದ ಚಿಮುಲ್ ಶಿಬಿರದ ಕಚೇರಿಯಲ್ಲಿ 2026-27ನೇ ಸಾಲಿನ ಗುಂಪು ರಾಸು ವಿಮೆ ಯೋಜನೆಯಡಿ 22 ಹೈನುಗಾರರಿಗೆ ಒಟ್ಟು 12.50 ಲಕ್ಷ ರೂ.ಗಳ ಮೊತ್ತದ ಪರಿಹಾರ ಚೆಕ್‌ ವಿತರಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಗ್ರಾಮೀಣ ಆರ್ಥಿಕತೆ ಬೆನ್ನೆಲುಬಾಗಿದೆ ಅದರಲ್ಲಿ ಅನಿರೀಕ್ಷಿತ ಘಟನೆ ಜರುಗಿ ರಾಸುಗಳು ನಿಧನ ಹೊಂದಿದಾಗ ರೈತಾಪಿ ವರ್ಗಕ್ಕೆ ನಷ್ಷವೇ ಅಧಿಕ ಆ ಕಾರಣದಿಂದ ರೈತರು ರಾಸುಗಳಿಗೆ ವಿಮೆ ಮಾಡಿಸಿ ಎಂದು ಮನವಿ ಮಾಡಿದರು.

ಚಿಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ಮಾತನಾಡಿ, ಚಿಮುಲ್ ಹೈನುಗಾರರ ಹಿತಾಸಕ್ತಿಗೆ ಬದ್ಧವಾಗಿದ್ದು, ವಿವಿಧ ಯೋಜನೆಗಳ ಮೂಲಕ ಅಗತ್ಯ ನೆರವು ನೀಡುತ್ತಿದೆ, ಗುಣಮಟ್ಟಕ್ಕೆ ಒತ್ತು ನೀಡುವ ಜತೆಗೆ ಪಶುಗಳ ಆರೋಗ್ಯದ ಕುರಿತು ಕಾಳಜಿವಹಿಸಬೇಕು ಮನವಿ ಮಾಡಿದರು.

ಚಿಮುಲ್‌ ಶಿಬಿರ ಉಪವ್ಯವಸ್ಥಾಪಕ ಡಾ.ರವಿಕಿರಣ್ ಮಾತನಾಡಿ, ಹೈನುಗಾರರು ವಿಮೆ ಸೇರಿ ಸರ್ಕಾರ ಹಾಗೂ ಚಿಮುಲ್‌ನಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಸಹಕಾರಿ ಯೂನಿಯನ್ ನಿರ್ದೇಶಕ ಅಂಬರೀಷ್‌, ವಿಸ್ತರಣಾಧಿಕಾರಿ ಜಯಚಂದ್ರ, ನರಸಿಂಹಯ್ಯ, ಸತ್ಯನಾರಾಯಣ, ಮಂಜುನಾಥ್ ಹಾಗು ಸಿಬ್ಬಂದಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ದೇಶವು ಪ್ರಗತಪತದತ್ತ ಸಾಗಲಿದೆ : ಶಾಸಕ ಬಿ.ಎನ್.ರವಿಕುಮಾ‌ರ್

ಸುಂಡ್ರಹಳ್ಳಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರನ್ನು  ವಿವಿಧ ಸಂಘಟನೆಗಳಿಂದ ಸನ್ಮಾನ

ಜಿಕೆವಿಕೆ ವಿದ್ಯಾರ್ಥಿಗಳಿಂದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳ ಪ್ರದರ್ಶನ

ಮಕ್ಕಳಲ್ಲಿ ಪ್ರಶ್ನಿಸುವ, ಚಿಂತಿಸುವ ಮತ್ತು ಸ್ವತಂತ್ರವಾಗಿ ಕಲಿಯುವ ಮನೋಭಾವ ಬೆಳೆಸಬೇಕು : ಉಪನ್ಯಾಸಕಿ ವಾಣಿ

ಪುಟ್ ಪಾತ್ ಒತ್ತವರಿ ತೆರವುಗೊಳಿಸಲು ಅಂಗಡಿ ಮಾಲಿಕರಿಗೆ ನಗರಠಾಣೆ ಪಿಎಸ್ಐ ಸೂಚನೆ

ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗುತ್ತದೆ : ಎಸ್.ಎಸ್.ಅಬೀದ್