--Ads--

ರೇಣುಕಾಯಲ್ಲಮ್ಮದೇವಿ ಕರಗ ಮಹೋತ್ಸವ ಪ್ರಯುಕ್ತ ಅಮ್ಮನವರಿಗೆ ವಿಷೇಶ ಅಲಂಕಾರ

On: May 7, 2026 5:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ರೇಣುಕಾಯಲ್ಲಮ್ಮದೇವಿ ಕರಗ ಮಹೋತ್ಸವ ಪ್ರಯುಕ್ತ ಅಮ್ಮನವರಿಗೆ ವಿಷೇಶ ಅಲಂಕಾರ

ಶಿಡ್ಲಘಟ್ಟ : ಕರಗ ಮಹೋತ್ಸವ ಪ್ರಯುಕ್ತ ಗ್ರಾಮದಲ್ಲಿ ನೆಲೆಸಿರುವ ಶ್ರೀರೇಣುಕಾಯಲ್ಲಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ದೀಪಲಂಕಾರ ಮಾಡಲಾಗಿದ್ದು, ಗ್ರಾಮವನ್ನು ವಿದ್ಯುತ್‌ ದೀಪಲಂಕಾರಗಳಿಂದ ಸಿಂಗರಿಸಲಾಗಿತ್ತು.

ಗ್ರಾಮದಲ್ಲಿ ಮೂರನೇ ವರ್ಷದ ರೇಣುಕ ಯಲ್ಲಮ್ಮ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಬೆಂಗಳೂರಿನ ವಿದ್ಯಾರಣ್ಯಪುರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪೂಜಾರಿ ಸಂತೋಷ್ ಅವರು ಕರಗವನ್ನು ಹೊತ್ತಿದ್ದರು ,ಮನೆಗಳ ಮುಂದೆ ರಂಗೋಲಿಗಳನ್ನು ಹಾಕಿ ಕರಗವು ಸಾಗಿ ಬಂದಾಗ ಪೂಜೆ ಸಲ್ಲಿಸಿದರು.

ಬೆಂಗಳೂರು ತಮಟೆ ಕಲಾ ತಂಡದವರಿಂದ ತಮಟೆ ವಾದ್ಯ ಹಾಗೂ ಸಂಜೆ ಆರ್ಕೆಸ್ಟ್ರಾ ವ್ಯವಸ್ಥೆ ಮಾಡಲಾಗಿತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಕರಗ ಉತ್ಸವವನ್ನು ಕಣ್ತುಂಬಿಕೊಂಡರು.

ಕಲಾವಿದರಾದ ಡಿ.ಎಂ.ಶ್ರೀನಿವಾಸ್,ಎಂ.ಹೆಚ್.ಸತೀಶ್ ಕುಮಾರ್, ಮುನಿಮಾಸಪ್ಪ ಹಾಗೂ ಮಳ್ಳೂರು ಗ್ರಾಮಸ್ಥರ ಸಹಯೋಗದಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

WhatsApp

Join Now

Telegram

Join Now

Instagram

Join Now