--Ads--

ಮೇಲೂರಿನಲ್ಲಿ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರಾ ಮಹೋತ್ಸವ

On: May 7, 2026 7:03 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮೇಲೂರಿನಲ್ಲಿ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರಾ ಮಹೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರು ಗ್ರಾಮದ ಸುಪ್ರಸಿದ್ಧ ಶ್ರೀಗಂಗಾದೇವಿ ಅಮ್ಮನವರ ಮರಿಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗ್ಗೆಯಿಂದಲೇ ಮಹಿಳಾ ಭಕ್ತರು ಮನೆಗಳ ಮುಂದೆ ಸಾರಿಸಿ ರಂಗೋಲಿ ಹಾಕಿ, ಹೂವಿನ ಅಲಂಕಾರ ಮಾಡಿ ಅಮ್ಮನವರಿಗೆ ತಂಬಿಟ್ಟು ದೀಪಗಳನ್ನು ಸಿದ್ಧಪಡಿಸಿದರು.

ರಂಗರಂಗ ವೈಭವದಿಂದ ಹಾಗೂ ಅದ್ಧೂರಿಯಾಗಿ ಜಾತ್ರೆಯು ನೆರವೇರಿತು ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಕ್ತಿಭಾವದಿಂದ ಭಾಗವಹಿಸಿದ್ದರು ,ರಾತ್ರಿ ನಡೆದ ತಮಟೆ ವಾದ್ಯಗಳ ಮನಮೋಹಕ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತು ,ಮಕ್ಕಳ ವಿಶೇಷ ನೃತ್ಯ ಕಾರ್ಯಕ್ರಮವೂ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಗ್ರಾಮದ ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಚೆಂಗಲ್ ರಾಯರೆಡ್ಡಿ ವೃತ್ತದಲ್ಲಿ ಅಳವಡಿಸಿದ್ದ ಜಾತ್ರೆಯ ಸ್ವಾಗತ ನಾಮಫಲಕ ವಿಶೇಷ ಆಕರ್ಷಣೆಯವಾಗಿತ್ತು.

ರಾತ್ರಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತೆರಳಿ ದೀಪ ಬೆಳಗಿ ಅಮ್ಮನವರ ಕೃಪೆಗೆ ಪಾತ್ರರಾದರು ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಸಂಭ್ರಮವು ಕಳೆಕಟ್ಟಿತ್ತು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಾಲ ವಸೂಲಾತಿ ಕೊರತೆಯಿಂದ ಪಿ.ಎಲ್.ಡಿ. ಬ್ಯಾಂಕ್ 8 ಕೋಟಿ ರೂ. ನಷ್ಟದಲ್ಲಿದೆ: ಬಂಕ್ ಮುನಿಯಪ್ಪ

ಪ್ರಧಾನಿ ನರೇಂದ್ರ ಮೋದೀಜಿ ಅವರ ಜನ್ಮದಿನದ ಅಂಗವಾಗಿ 10 ಸಾವಿರ ದೀಪಗಳನ್ನು ಬೆಳಗಿಸುವ ಮೂಲಕ “ಆಶೀರ್ವಾದದ ದೀಪ” ಕಾರ್ಯಕ್ರಮ ಭಕ್ತಿಭಾವ ಸಂಭ್ರಮದಿಂದ ಆಚರಣೆ

ರೇಷ್ಮೆ ಆಧಾರಿತ ಕೈಗಾರಿಕೆಗಳು, ಮಹಿಳೆಯರಿಗೆ ಗಾರ್ಮೆಂಟ್ಸ್ ತಾಲ್ಲೂಕಿನಲ್ಲೇ ಸ್ಥಾಪಿಸಬೇಕು : ಸಾಮಾಜಿಕ ಹೋರಾಟಗಾರ ನವಾಜ್ ಪಾಷ

ಹಿರಿಯರಿಗೆ ಹಾಗೂ ದಿವ್ಯಾಂಗರಿಗೆ ಆತ್ಮವಿಶ್ವಾಸ ನೀಡುವ ಕೆಲಸದಲ್ಲಿ ಸಾರ್ಥಕತೆಯ ಭಾವ: ಸಂಸದ ಡಾ.ಕೆ.ಸುಧಾಕರ್‌

ಶಾಲಾಭಿವೃದ್ಧಿ ಸಮಿತಿಯಿಂದ ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ನೌಕರರಿಗೆ ಗೌರಿ ಗಣೇಶ ಹಬ್ಬದ ಬಾಗಿನ ಪ್ರದಾನ , ಸನ್ಮಾನ

ಶಿಡ್ಲಘಟ್ಟ ಪಿ.ಎಲ್‌.ಡಿ ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆ ಸೆಪ್ಟಂಬರ್ -19ಕ್ಕೆ