ವಿಜಯ ದರ್ಪಣ ನ್ಯೂಸ್…..
ಕ್ರಿಮಿನಾಶಕ ಸಿಂಡಿಸಿದ ವಿಷಯುಕ್ತ ಸೊಪ್ಪು ತಿಂದು ರೇಷ್ಮೆ ಹುಳುಗಳು ಸಾವು ರೈತನಿಗೆ ನಷ್ಟ ಪೋಲಿಸ್ ಠಾಣೆಯಲ್ಲಿ ದೂರು

ಶಿಡ್ಲಘಟ್ಟ : ತಾಲ್ಲೂಕಿನ ಕನ್ನಮಂಗಲದಲ್ಲಿ ರೈತ ಗಂಗರಾಜು ಬೆಳೆದಿದ್ದ ಹಿಪ್ಪುನೇರಳೆ ಸೊಪ್ಪಿಗೆ
ದುಷ್ಕರ್ಮಿಗಳು ಕ್ರಿಮಿನಾಶಕ ಸಿಂಪಡಿಸಿರುವುದರಿಂದ ರೇಷ್ಮೆ ಹುಳುಗಳು ಮೃತಪಟ್ಟಿವೆ.
ಕ್ರಿಮಿನಾಶಕ ಸಿಂಪಡಿಸಿದ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಹಣ್ಣಾದ ಹಂತದಲ್ಲಿದ್ದ 150 ಮೊಟ್ಟೆಗಳ ಹುಳುಗಳು ಸತ್ತಿವೆ ,ಈ ಹಿಂದೆಯೂ ಕಿಡಿಗೇಡಿಗಳು ತೋಟಕ್ಕೆ ಕ್ರಿಮಿನಾಶಕ ಹಾಕಿದ್ದರು ,ಆಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಪದೇ ಪದೆ ಕಿಡಿಗೇಡಿಗಳು ತೋಟಕ್ಕೆ ವಿಷ ಹಾಕುವುದು ಮಾತ್ರ ನಿಂತಿಲ್ಲ ಎಂದು ರೈತ ಗಂಗರಾಜು ಅಲವತ್ತುಕೊಂಡಿದ್ದಾರೆ.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ರೇಷ್ಮೆ ಇಲಾಖೆ ಅಧಿಕಾರಿಗಳು ಸೊಪ್ಪಿಗೆ ವಿಷ ಸಿಂಪಡನೆ ಆಗಿರುವುದು ದೃಢೀಕರಿಸಿದ್ದು, ಆದರಿಂದಲೇ ಹುಳುಗಳು ಸತ್ತಿವೆ ಎಂದು ಹೇಳಿದ್ದಾರೆ , ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.









