--Ads--

5 ಕೋಟಿ 75 ಲಕ್ಷ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ

On: May 14, 2026 5:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

50 ಕೋಟಿ ಸಿ ಎಂ ವಿಶೇಷ ನಿಧಿಯಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ

5 ಕೋಟಿ 75 ಲಕ್ಷ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ

ತಾಂಡವಪುರ ಮೇ 14 ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಈ ವರ್ಷ ಬಿಡುಗಡೆಯಾಗಿದ್ದು, ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಗರ ಪ್ರದೇಶಕ್ಕೆ 10 ಕೋಟಿ ಹಾಗೂ ಉಳಿದ 40 ಕೋಟಿ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು ಶಾಸಕ ದರ್ಶನ್ ದ್ರುವ ನಾರಾಯಣ ತಿಳಿಸಿದರು.

ಅವರು ಇಂದು ನಂಜನಗಳು ವಿಧಾನಸಭಾ ಕ್ಷೇತ್ರದ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಫುಡ್ ಜೋನ್ ರಸ್ತೆ ಡಾಂಬರೀಕರಣ, ಆಕಳ ಗ್ರಾಮದಲ್ಲಿ ಸಿಸಿ ರಸ್ತೆ, ಕಪ್ಪುಸೋಗೆ, ಹುಲ್ಲಹಳ್ಳಿ ಬಿಳಿಗಿರಿ ರಂಗನ ಬೆಟ್ಟ ರಸ್ತೆಗಳಿಗೆ 5.75 ಕೋಟಿ ವೆಚ್ಚದ ಡಾಂಬರೀಕರಣಕ್ಕೆ ಗುರುವಾರ ಶಾಸಕ ದರ್ಶನ್ ಭೂಮಿ ಪೂಜೆ ನೆರವೇರಿಸಿದರು .

ನಂತರ ಮಾತನಾಡಿದ ಅವರು ನಗರದ ಹಲವು ಬಡಾವಣೆಗಳು ಈ ಹಿಂದೆ ರೆವಿನ್ಯೂ ಬಡಾವನೆಗಳಾಗಿದ್ದವು. ಪ್ರಸ್ತುತ ಈಗ ನಗರಸಭೆಗೆ ಟ್ಯಾಕ್ಸ್ ಕಟ್ಟುತ್ತಿದ್ದ ಹಿನ್ನೆಲೆ ನೂತನ ಬಡಾವಣೆಗಳ ಅಭಿವೃದ್ಧಿಗೆ 10 ಕೋಟಿ ಮೀಸಲಿಡಲಾಗಿದೆ. ಕಳೆದ ವಾರ ನೂತನ ಬಡಾವಣೆಗಳಿಗೆ 21 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.

ಸುಮಾರು ಎರಡು ವಾರಗಳಿಂದ 37 ಕೋಟಿ ಹದಿಮೂರು ಲಕ್ಷದ ಕಾಮಗಾರಿಗಳಿಗೆ ಪೂಜೆ ನೆರವೇರಿಸಲಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ , ನಗರಸಭಾ ಪೌರಯುಕ್ತ ಬಸವರಾಜ್, ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ , ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ , ಗಾಯತ್ರಿ ಮೋಹನ್ , ಪ್ರಕಾಶ್ , ಮಹೇಶ್ , ದೀಪು , ಸಿದ್ಫಿಕ್ , ಸೌಭಾಗ್ಯ , ಯೋಗೀಶ್ , ಬಸವರಾಜ್ , ರವಿ , ಖಾದರ್ , ಚಂದನ್ , ಮಹೇಶ್, ಶರಣ್, ಪಿಡಬ್ಲ್ಯೂಡಿ ಇಲಾಖೆ ಬಸವರಾಜು ಸೇರಿದಂತೆ ಮುಖಂಡರು ಅಧಿಕಾರಿಗಳು ಹಾಜರಿದ್ದರು.

WhatsApp

Join Now

Telegram

Join Now

Instagram

Join Now